ರೇಣುಕಾಸ್ವಾಮಿ ಕುಟುಂಬಕ್ಕೆನಟ ವಿನೋದ್ ರಾಜ್ ಸಹಾಯ ಮಾಡಿದ ಹಣ ಎಷ್ಟು ಗೊತ್ತಾ : ಇದಲ್ಲವೇ ಮಾನವೀಯತೆ ಅಂದರೆ

ರೇಣುಕಾಸ್ವಾಮಿ ಕುಟುಂಬಕ್ಕೆನಟ  ವಿನೋದ್ ರಾಜ್ ಸಹಾಯ ಮಾಡಿದ ಹಣ ಎಷ್ಟು ಗೊತ್ತಾ : ಇದಲ್ಲವೇ ಮಾನವೀಯತೆ ಅಂದರೆ

ಇದೀಗ ಎಲ್ಲೆಡೆ ಹಾಟ್ ನ್ಯೂಸ್ ಆಗಿ ಸುದ್ದಿ ಮಾಡುತ್ತಿರುವ ವಿಚಾರ ಎಂದರೆ ಅದು ರೇಣುಕಾ ಸ್ವಾಮಿ ಹತ್ಯೆ ಪ್ರಕರಣ. ಇನ್ನೂ ಹತ್ಯೆ ಮಾಡಿರುವ ಆರೋಪದಲ್ಲಿ ಪೊಲೀಸರ ಅತಿಥಿಯಾಗಿದ್ದಾರೆ ಡಿ ಬಾಸ್. ಇದೀಗ ನಡೆಯುತ್ತಿರುವ ರೇಣುಕಾ ಸ್ವಾಮಿ ಹತ್ಯೆ ಪ್ರಕರಣದಲ್ಲಿ, ಕನ್ನಡ ನಟ ದರ್ಶನ್ ತೂಗುದೀಪ ಮತ್ತು ಇತರ ಹದಿಮೂರು ಆರೋಪಿಗಳನ್ನು ಜುಲೈ 18, 2024 ರವರೆಗೆ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ರೇಣುಕಾ ಸ್ವಾಮಿಯ ಅಮಾನುಷ ಹತ್ಯೆಯಲ್ಲಿ ಭಾಗಿಯಾಗಿರುವ ಆರೋಪದಲ್ಲಿ ದರ್ಶನ್ ಅವರನ್ನು ಜೂನ್ 11 ರಂದು ಆರಂಭದಲ್ಲಿ ಬಂಧಿಸಲಾಯಿತು. ದರ್ಶನ್ ಅವರ ಆಪ್ತ ಸ್ನೇಹಿತೆ ಪವಿತ್ರಾ ಗೌಡ ಅವರಿಗೆ ಅಭಿಮಾನಿಯೊಬ್ಬರು ಅಶ್ಲೀಲ ಸಂದೇಶಗಳನ್ನು ಕಳುಹಿಸಿದ್ದರು.

ಇತ್ತೀಚಿಗಷ್ಟೇ ವಿನೋದ್ ರಾಜ್ ಜೈಲ್ನಲ್ಲಿ ಇರುವ ದರ್ಶನ ಅವರನ್ನು ಭೇಟಿ ಮಾಡಿದ್ದರು . ಅವರು ದರ್ಶನ ನೋಡಿ ನನಗೆ ತುಂಬಾ ಬೇಜಾರು ಆಯಿತು ಅವರಿಗೆ ಈ ರೀತಿ ಆಗಬಾರದಿತ್ತು ಎಂದು ಹೇಳಿದರು . ಮತ್ತು ಈಗ ಅವರು ರೇಣುಕಾಸ್ವಾಮಿ ಮನೆಗೆ ಭೇಟಿ ನೀಡಿ ಅವರ ತಂದೆ ಮತ್ತು ತಾಯಿ ಹಾಗು ಪತ್ನಿಗೆ ಸಹನಾಭೂತಿ ತೋರಿಸಿದ್ದಾರೆ . ನಂತರ ಅವರಿಗೆ ಧೈರ್ಯ ತುಂಬಿದ್ದಾರೆ .ಮೃತ ರೇಣುಕಾಸ್ವಾಮಿ ಮನೆಗೆ ನಟ ವಿನೋದ್ ರಾಜ್ ಭೇಟಿ ನೀಡಿದ್ದಾರೆ. ರೇಣುಕಾಸ್ವಾಮಿ ಕುಟುಂಬಸ್ಥರಿಗೆ ವಿನೋದ್ ರಾಜ್ ಸಾಂತ್ವಾನ ಹೇಳಿ 1 ಲಕ್ಷ ರೂ. ನೆರವು ನೀಡಿದ್ದಾರೆ.ಮೃತ ರೇಣುಕಾಸ್ವಾಮಿ ನಿವಾಸಕ್ಕೆ ತೆರಳಿ ಪೋಷಕರಿಗೆ ಮತ್ತು ರೇಣುಕಾಸ್ವಾಮಿ ಪತ್ನಿ ಸಹನಾಗೆ ವಿನೋದ್ ರಾಜ್ ಸಾಂತ್ವಾನ ಹೇಳಿದ್ದಾರೆ. ನಿಮ್ಮ ಮಗ ಮರಳಿ ಬರಲಿ ಅಂತ ಹಾರೈಸಿದ್ದಾರೆ. 

( video credit : News18 Kannada )