ಸ್ಪಂದನ ಇಲ್ಲದೇನೆ ಕಳೆದವಾರ ಕಿರುತೆರೆಗೆ ಬಂದೆ, ಈ ವಾರ ಚಿತ್ರಮಂದಿರಕ್ಕೆ ಬಂದೆ..! ಕಣ್ಣೀರು ಹಾಕುತ್ತಾ ರಾಘು ಹೇಳಿದ್ದಿಷ್ಟು
ಹೌದು ಇಂದು ರಾಜ್ಯದ್ಯಂತ ವಿಜಯ ರಾಘವೇಂದ್ರ ಅವರ ಕದ್ದ ಚಿತ್ರ ಪ್ರದರ್ಶನ ಆಗುತ್ತಿದೆ. ಬಿಡುಗಡೆಯಾಗಿ ಎಲ್ಲೆಡೆ ಯಶಸ್ಸು ಕಾಣುತ್ತಿದೆ. ವಿಜಯ ರಾಘವೇಂದ್ರ ಅವರ ಸಿನಿ ಜೀವನದಲ್ಲಿಯೇ ಈ ರೀತಿ ಪಾತ್ರವನ್ನು ಅವರು ಎಂದು ಮಾಡಿದ್ದಿಲ್ಲ, ಆದರೆ ಇದರಲ್ಲಿ ತುಂಬಾ ವಿಭಿನ್ನ ಪಾತ್ರ ಮಾಡಿ ಗಮನ ಸೆಳೆದಿದ್ದಾರೆ. ಕಂಟೆಂಟ್ ಆಧಾರಿತ ಸಿನಿಮಾಗಳು ಬರುತ್ತಿವೆ ಎನ್ನುವ ಪ್ರಶ್ನೆಗೆ, ಅದು ನನ್ನ ಅದೃಷ್ಟ, ನಾನು ಇಂತಹ ಸಿನಿಮಾ ಕಥೆಗಳ ಹಿಂದೆ ಓಡಿದವನು ಅಲ್ಲ, ಅವುಗಳೆ ನನ್ನನ್ನು ಈ ರೀತಿ ಹುಡುಕಿಕೊಂಡು ಬರುತ್ತಿವೆ, ತುಂಬಾ ಅದೃಷ್ಟವಂತ ಎಂದು ಹೇಳಿಕೊಂಡರು..
ಜೊತೆಗೆ ಸಿನಿಮಾದಲ್ಲಿಯ ವಿಶೇಷತೆ ಏನು ಎಂದು ಕೇಳಿದಾಗ, ಈ ಮುಂಚೆ ಮಾಡಿದ ಎಲ್ಲಾ ಚಿತ್ರದಲ್ಲಿ ಇದರಲ್ಲಿ ಮಾಡಿರುವ ಪಾತ್ರದಲ್ಲಿ ತುಂಬಾನೇ ಬದಲಾವಣೆ ಇದೆ. ಇದೊಂದು ಬರಹಗಾರನ ಕಥೆಯ ಸಿನಿಮಾ. ಅದರಲಿ ಕ್ರೈಮ್ ಹೇಗಾಗುತ್ತದೆ ಕೊನೆಯಲ್ಲಿ ಒಂದು ದೊಡ್ಡ ಬದಲಾವಣೆ ಇದೆ. ಈ ಸಿನಿಮಾದ ಕಾಸ್ಟ್ಯೂಮ್, ಕಥೆ, ಸಿನಿಮಾಟೋಗ್ರಫಿ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಎಂದರು.. ಜೊತೆಗೆ ಈ ಚಿತ್ರದಲ್ಲೂ ಕೂಡ ಅಭಿನಯಿಸುವ ಮುನ್ನ ಮನೆಯಲ್ಲಿ ಹೋಗಿ ಚರ್ಚೆ ಮಾಡಿದ್ದೆ, ಬೇಡ ಅನ್ಸಿತು. ಆಗ ಮನೆಯವರು ಪ್ರತಿ ಬಾರಿ ಒಂದೇ ರೀತಿಯ ಪಾತ್ರ ಮಾಡುತ್ತೀಯ ಇದು ವಿಭಿನ್ನವಾಗಿದೆ, ಈ ರೀತಿಯ ಪಾತ್ರದಲ್ಲೂ ಕೂಡ ಮಾಡಿ ಎಂದು ಪ್ರೋತ್ಸಾಹಿಸಿದರು.
ಸ್ಪಂದನ ನನ್ನ ಕಾಸ್ಟುಮ್ ಮತ್ತು ಚಿತ್ರದಲ್ಲಿ ಪಾತ್ರವನ್ನು ಇಷ್ಟಪಡುತ್ತಿದ್ದಳು ಎಂದು ಭಾವುಕರಾದರು. ವೈಯಕ್ತಿಕ ಜೀವನದ ನೋವನ್ನು ಹಿಂದೆಯೇ ಬಿಟ್ಟು ಈಗ ಮತ್ತೆ ಮುಂದೆ ಬಂದಿದ್ದೀರಿ ಈ ಸಿನಿಮಾಗಾಗಿ ಎಂದು ಪ್ರಶ್ನೆ ಮಾಡುತ್ತಿದ್ದಂತೆ, ಯಾವ ನೋವನ್ನು ಆದ್ರೂ ಅಷ್ಟೇ, ಹಿಂದೆ ಬಿಡುವುದು ತುಂಬಾನೇ ಕಷ್ಟ.. ಆ ನೋವಿನ ಜೊತೆಗೆ ಜೀವನ ಸಾಗಿಸಬೇಕು, ನೋವಿನಲ್ಲಿಯೆ ಆ ನೆನಪನ್ನ ಇಟ್ಟುಕೊಂಡೆ ಮುಂದೆ ಜೀವನ ಮಾಡಬೇಕು. ಸಿನಿಮಾದಲ್ಲಿಯೇ ಪ್ರೀತಿ ಕಂಡೆ, ಸಿನಿಮಾದಲ್ಲಿಯೇ ಯಶಸ್ಸು ಕಂಡ, ಅಭಿಮಾನಿಗಳನ್ನು ಗಳಿಸಿಕೊಂಡೆ, ಸಿನಿಮಾಜಗತ್ತೇ ಪ್ರೀತಿ ಪ್ರೇಮ ಎಲ್ಲವೂ ಮುಂದೆಯೂ ಕೂಡ ಎನ್ನುವ ನಿಟ್ಟಿನಲ್ಲಿ ಉತ್ತರಿಸಿದರು.. ಹಾಗೆ ಸ್ಪಂದನ ಅವರ ಅಗಲಿಕೆಯನ್ನ ಈ ರೀತಿ ರಾಘು ಅವರು ವ್ಯಕ್ತಪಡಿಸಿದರು ಎಂದು ಹೇಳಬಹುದು..ಕದ್ದ ಚಿತ್ರ ಸಿನಿಮಾ ನೋಡಿ, ಹಾಗೆ ನಿಮ್ಮದೇ ಆದ ಅಭಿಪ್ರಾಯ ಸಿನಿಮಾ ಬಗ್ಗೆ ಹೇಳಿ ಧನ್ಯವಾದಗಳು...
.... ( video credit : news 18 kannada )