ಪ್ಲೀಸ್ ನನ್ನ ಹೆಂಡತಿ ಕಿವಿ ಓಲೆ ತೆಗೆಯಬೇಡಿ ಎಂದು ಕಣ್ಣೀರು ಸುರಿಸಿದ್ರಂತೆ ರಾಘು..! ಕಾರಣ ಇಲ್ಲಿದೆ
ಜೀವನದಲ್ಲಿ ದಾಂಪತ್ಯ ಎನ್ನುವುದು ತುಂಬಾನೇ ವಿಶೇಷತೆ ಪಡೆದುಕೊಂಡಿರುತ್ತದೆ. ಅಂತಹವರ ಸಾಲಿಗೆ ಇದೀಗ ವಿಜಯ್ ಹಾಗೂ ಸ್ಪಂದನ ಸೇರಿದ್ದಾರೆ. ಈ ದಾಂಪತ್ಯ ಜೀವನವನ್ನು ಮಾಡಿದರೆ ಹೀಗೆ ಮಾಡಬೇಕು ಎಂಬುದಾಗಿ ಹೆಚ್ಚು ಜನರಿಗೆ ಮಾದರಿ ಆದವರು ನಟ ವಿಜಯ ರಾಘವೇಂದ್ರ ಮತ್ತು ಅವರ ಮಡದಿ ಸ್ಪಂದನ ಅವರು. ವಿಜಯ್ ರಾಘವೇಂದ್ರ ಮತ್ತು ಸ್ಪಂದನ ಅವರನ್ನು ನೋಡಿದ ಅದೆಷ್ಟೋ ಜನರು, ಜೋಡಿ ಅಂದರೆ ಇವರಂತಿರಬೇಕು, ದಾಂಪತ್ಯ ಜೀವನವನ್ನ ಇವರಂತೆ ಮಾಡಬೇಕು ಎನ್ನುವಷ್ಟರ ಮಟ್ಟಿಗೆ ಇಬ್ಬರು ತುಂಬಾ ಪ್ರೀತಿಯಿಂದ ಒಬ್ಬರನ್ನು ಒಬ್ಬರು ಹೆಚ್ಚು ಇಷ್ಟಪಟ್ಟು ಜೀವನವನ್ನು ಮಾಡುತ್ತಿದ್ದರು.
ಹೌದು ರಾಘು ಎಲ್ಲಿಗೆ ಹೋಗಲಿ, ಗಂಟೆಗೊಮ್ಮೆ ವಿಚಾರಿಸಿ ಸ್ಪಂದನ ಅವರು, ಅವರ ಜೊತೆ ಫೋನಿನಲ್ಲಿ ಮಾತನಾಡುತ್ತಿದ್ದರಂತೆ, ಊಟ ಉಪಚಾರಗಳಲ್ಲಿ ರಾಘು ಅವರನ್ನು ಹೊರಗಡೆ ಹೋದಾಗ ಹೆಚ್ಚು ಕೇರ್ ಮಾಡುತ್ತಿದ್ದರಂತೆ. ಸ್ಪಂದನ ಮತ್ತು ರಾಘು ಜೋಡಿಯ ಆ ವಿಧಿ ಇದೀಗ ಬೇರೆ ಬೇರೆ ಮಾಡಿದೆ. ವಿಧಿಯ ಕರೆಗೆ ಓಗೊಟ್ಟು ಸ್ಪಂದನ ಅವರು ಎಲ್ಲವನ್ನು ಕೂಡ ಬಿಟ್ಟು ಹೋಗುವ ಪರಿಸ್ಥಿತಿ ಬಂದಿತು. ಸ್ಪಂದನ ಅವರ ಅಂತಿಮ ಕ್ರಿಯೆಯ ವೇಳೆ ಅಂದು ನಡೆದ ಒಂದು ವಿಚಾರ ಈಗ ಬಯಲಾಗಿದೆ. ಜೀವನದಲ್ಲಿ ಬದುಕಿದ್ದಾಗ ಮನುಷ್ಯ ಎಲ್ಲವನ್ನು ಮಾಡುತ್ತಾನೆ, ಆದರೆ ಸಾವನ್ನಪ್ಪಿದ ಮೇಲೆ ಆತ ಎಲ್ಲವನ್ನು ಕೂಡ ಇಲ್ಲೇ ಬಿಟ್ಟು ಹೋಗ್ಬೇಕು ಅದು ಭಾರತೀಯ ಸಂಪ್ರದಾಯ. ಸಾವನ್ನಪ್ಪಿದ ಮೇಲೆ ಅಂತಿಮ ಕ್ರಿಯೆ ವೇಳೆ ಅವರ ಮೈ ಮೇಲೆ ಯಾವ ಒಡವೆಗಳನ್ನು ಕೂಡ ಬಿಡುವುದಿಲ್ಲ.
ಅದೇ ರೀತಿ ಸ್ಪಂದನ ಅವರ ಎಲ್ಲಾ ಒಡವೆಗಳನ್ನು ಕೂಡ ಅಂದು ತೆಗೆಯದರು. ಆದರೆ ಅವರ ಕಿವಿ ಓಲೆ ಒಂದು ತೆಗೆಯಲು ಸಾಧ್ಯವಾಗಲಿಲ್ಲವಂತೆ. ಅದೇ ವೇಳೆ ರಾಘು, ಆ ಕಿವಿ ಓಲೆ ಬರದಿದ್ದರೆ ಅದನ್ನು ಹಾಗೆಯೇ ಬಿಟ್ಟುಬಿಡಿ. ನನ್ನ ಪ್ರೀತಿಯ ಮಡದಿಗೆ ಯಾವ ನೋವಾಗಬಾರದು ಎಂಬುದಾಗಿ ಹೇಳಿ ಕಣ್ಣೀರು ಸುರಿಸಿದ್ದರಂತೆ. ಅದರ ವಿಡಿಯೋ ಇದೀಗ ಇಲ್ಲಿ ಕಂಡು ಬಂದಿದೆ.. ಸ್ಪಂದನ ಅವರಿಗೆ ಮೇಕಪ್ ಎಂದರೆ ತುಂಬಾನೆ ಇಷ್ಟ. ಹಾಗಾಗಿ ಅವರ ಮೃತ ದೇಹಕ್ಕೆ ಮೇಕಪ್ ಕೂಡ ಮಾಡಲಾಗಿತ್ತು. ನಂತರ ಅವರ ಕಿವಿ ಓಲೆ ಬರದ ಕಾರಣಕ್ಕೆ ಹಾಗೆಯೇ ಅದನ್ನ ಬಿಟ್ಟು ಪಂಚಭೂತಗಳಲ್ಲಿ ಅವರನ್ನು ಲೀನ ಮಾಡಲಾಗಿದೆ. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ತಪ್ಪದೇ ಮಾಹಿತಿ ಶೇರ್ ಮಾಡಿ ಧನ್ಯವಾದಗಳು.