ಸ್ಪಂದನ ಬದುಕಿದ್ದ ವೇಳೆ ಎಷ್ಟು ಸರಳತನದಿಂದ ಇದ್ದರು ಗೊತ್ತಾ..? ಇಲ್ಲಿವೆ ಅಪರೂಪದ ಚಿತ್ರಗಳು
ಕೊರೊನಾ ಬಂದ ಬಳಿಕ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಸಾವು ನೋವುಗಳು ನಡೆದು ಹೋಗಿವೆ. ಹೌದು, ಪುನೀತ್ ರಾಜಕುಮಾರ್, ಸಂಚಾರಿ ವಿಜಯ್, ಚಿರಂಜೀವಿ ಸರ್ಜಾ, ಹೀಗೆ ಒಬ್ಬರ ಹಿಂದೆ ಒಬ್ಬರು ಸಣ್ಣ ವಯಸ್ಸಿನಲ್ಲೆ ಅಕಾಲಿಕ ಮರಣಕ್ಕೆ ತುತ್ತಾದರು. ಅವರ ನಂತರ ಕನ್ನಡದ ಚಿನ್ನಾರಿ ಮುತ್ತ ಎಂದೇ ಪ್ರಸಿದ್ಧಿ ಪಡೆದಿದ್ದ ಹಾಗೂ ದಾಂಪತ್ಯ ಜೀವನ ಮಾಡಿದರೆ ನಿಜ ಇವರಂತೆಯೇ ಮಾಡಬೇಕು ಎಂಬುದಾಗಿ ಮಾದರಿ ಆಗಿದ್ದಂತಹ ಜೋಡಿ ವಿಜಯ ರಾಘವೇಂದ್ರ ಹಾಗೂ ಅವರ ಪತ್ನಿ ಸ್ಪಂದನ. ಸ್ಪಂದನ ಅವರು ಕೂಡ ಇತ್ತೀಚೆಗೆ ಸಾವನ್ನಪ್ಪಿದ್ದು ನಿಜಕ್ಕೂ ನಂಬಲಾಗದ ಸಂಗತಿ, ಮತ್ತು ದುಃಖಕರ ವಿಷಯ.
ಸ್ಪಂದನ ಅವರನ್ನು ವಿಜಯ ರಾಘವೇಂದ್ರ ಅವರು ಪ್ರೀತಿಸಿ ಮದುವೆಯಾಗಿದ್ದರು. 2003 ರಲ್ಲಿ ಮೊದಲ ಬಾರಿ ವಿಜಯ ರಾಘವೇಂದ್ರ ಸ್ಪಂದನ ಅವರನ್ನು ಒಂದು ಕೆಫೆ ಕಾಫಿ ಡೇಯಲ್ಲಿ ನೋಡಿದ್ದು, ಮೊದಲ ನೋಟದಲ್ಲೇ ಫಿದಾ ಆಗಿದ್ದರು. ಹೆಚ್ಚು ಇಷ್ಟಪಟ್ಟರು. ಆಗ ಅವರ ಪ್ರೀತಿಯನ್ನ ಹೇಳಿಕೊಳ್ಳಲಿಲ್ಲ. ನಂತರ 2007 ರಲ್ಲಿ ಮತ್ತೆ ನೋಡಿದ್ದು ಮನೆಯವರ ಒಪ್ಪಿಗೆ ಪಡೆದು ಎರಡು ಕುಟುಂಬದವರ ಸಮ್ಮತಿ ಮೂಲಕವೇ ಸ್ಪಂದನ ಅವರನ್ನು ವಿಜಯ ರಾಘವೇಂದ್ರ ಅವರು ಕೈ ಹಿಡಿದಿದ್ದರು.
ನಂತರ ಎಲ್ಲವೂ ಚೆನ್ನಾಗಿಯೇ ಇತ್ತು.. ಮೊನ್ನೆ ಮೊನ್ನೆಯಷ್ಟೇ ಸ್ಪಂದನ ಅವರು ಸಾವನ್ನಪ್ಪಿದ್ದು ನಿಜಕ್ಕೂ ಯಾರಿಗೂ ಕೂಡ ಆರತಿಸಿಕೊಳ್ಳಲಾಗುತ್ತಿಲ್ಲ. ಇದೆ ಆಗಸ್ಟ್ 26 ನೇ ತಾರೀಕು ಅವರು ಮದುವೆಯಾಗಿ 16 ವರ್ಷಗಳು ಕಳೆಯುತ್ತಿತ್ತು. ಆದರೆ ವಿಧಿ ಬರಹ ಬೇರೆ ಆಗಿದೆ. ಸ್ಪಂದನ ಅವರ ಅಗಲಿಕೆಯಲ್ಲಿ ಈಗ ವಿಜಯ್ ರಾಘವೇಂದ್ರ ಅವರು ಕಣ್ಣೀರು ಹಾಕುತ್ತಿದ್ದಾರೆ. ಅವರ ಪ್ರೀತಿಯ ಮಗ ಶೌರ್ಯನನ್ನು ನೋಡಿಕೊಂಡು ರಾಘು ಸ್ಪಂದನ ಅವರು ಕನಸು ಕಂಡಿದ್ದ ಒಳ್ಳೆ ಜೀವನವನ್ನು ನಡೆಸಬೇಕು. ಅವರೇ ಆ ಕನಸುಗಳಿಗೆ ಜೀವತುಂಬಿ ನನಸು ಮಾಡಬೇಕಾಗಿದೆ.. ವಿಜಯ ರಾಘವೇಂದ್ರ ಅವರು ಅವರ ಹೆಂಡತಿಯನ್ನು ಎಷ್ಟು ಇಷ್ಟಪಡುತ್ತಿದ್ದರು ಎಂಬುದಾಗಿ ನಿಮಗೆ ನಾವು ಹೆಚ್ಚು ಹೇಳಬೇಕಿಲ್ಲ.
ಪ್ರತಿಯೊಂದು ಕಾರ್ಯಕ್ರಮದಲ್ಲೂ ಅವರ ಹೆಂಡತಿ ಸಾರ್ಥಕತೆಯ ತ್ಯಾಗದ ಹಾಗೂ ಬೆಂಬಲಿತ ವಿಷಯ ಹೇಳುತ್ತಿದ್ದರು. ಅವರ ಕಷ್ಟದ ದಿನಗಳ ಜೊತೆ ನಿಂತಿದ್ದ ಸ್ಪಂದನ ಅವರನ್ನೇ ನೆನೆಯುತ್ತಿದ್ದರು. ಇನ್ನೊಬ್ಬರಿಗೆ ಮಾದರಿಯಾಗುವಂತೆ ಇವರ ದಾಂಪತ್ಯ ಜೀವನ ಸಾಗಿತ್ತು.. ಆದರೆ ಅದ್ಯಾರ ಕಣ್ಣು ಬಿತ್ತೋ ಆ ದೇವರೇ ಬಲ್ಲ, ಈ ಮುದ್ದಾದ ಜೋಡಿಯನ್ನು ಆ ದೇವರು ಬೇರೆ ಬೇರೆ ಮಾಡಿಬಿಟ್ಟ. ಸ್ಪಂದನ ಅವರು ಬದುಕಿದ್ದಂತಹ ಜೀವನ ನಿಜಕ್ಕೂ ಇನ್ನೊಬ್ಬರಿಗೆ ಮಾದರಿಯೇ ಸರಿ. ಸ್ಪಂದನ ಅವರು ಹೆಚ್ಚು ಸೋಶಿಯಲ್ ಮೀಡಿಯಾದಲ್ಲಿ ಯಾವುದೇ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳುತ್ತಿರಲಿಲ್ಲ. ಆದರೆ ಅವರ ಅಪರೂಪದ ಕೆಲವು ಫೋಟೋಗಳು ತುಂಬಾ ಮುದ್ದಾಗಿವೆ.
ಸ್ವಲ್ಪವೂ ಕಲ್ಮಶ ಇಲ್ಲದ ವ್ಯಕ್ತಿತ್ವ ಅವರದ್ದು. ಈಗ ಆ ಅಪರೂಪದ ಚಿತ್ರಗಳು ಬಾರಿ ವೈರಲಾಗುತ್ತಿವೆ..ಅವರ ಕೆಲವೊಂದಿಷ್ಟು ಅಪರೂಪದ ಫೋಟೋಗಳನ್ನ ನಾವು ಕಲೆಕ್ಟ್ ಮಾಡಿದ್ದು ಲೇಖನದ ಮೂಲಕ ಹಂಚಿಕೊಳ್ಳುತ್ತಿದ್ದೇವೆ. ಒಮ್ಮೆ ನೀವು ನೋಡಿ ಸ್ಪಂದನ ಅವರ ಆ ಮುಗ್ಧತೆಯ ನಗು ಮುಖದ ಬಗ್ಗೆ ನಿಮ್ಮದೇ ಆದ ಮಾತಿನಲ್ಲಿ ಕಮೆಂಟ್ ಮಾಡಿ ತಿಳಿಸಿ.. ಜೊತೆಗೆ ಸ್ಪಂದನ ಅವರ ಅಗಲಿಕೆ ನೋವು ನಿಮ್ಮನ್ನು ಸಹ ಕಾಡಿತ್ತು ಅಂದರೆ ತಪ್ಪದೇ ಸ್ಪಂದನ ಆತ್ಮಕ್ಕೆ ಶಾಂತಿ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸಿ, ಧನ್ಯವಾದಗಳು..