ತಮ್ಮ ಹೆಂಡತಿಯನ್ನ ವರ್ತೂರು ಸಂತೋಷ್ ಯಾಕೆ ಬಿಟ್ಟರು ಗೊತ್ತೇ..? ನೋವಿನ ವಿಚಾರ ಬಯಲು

ತಮ್ಮ ಹೆಂಡತಿಯನ್ನ ವರ್ತೂರು ಸಂತೋಷ್ ಯಾಕೆ ಬಿಟ್ಟರು ಗೊತ್ತೇ..? ನೋವಿನ ವಿಚಾರ ಬಯಲು

ಕನ್ನಡದ ಬಿಗ್ ಬಾಸ್ ಮನೆಯಲ್ಲಿ ಈ ಬಾರಿ ವರ್ತೂರು ಸಂತೋಷ ಅವರು ಕೂಡ ಕಾಣಿಸಿಕೊಂಡಿದ್ದಾರೆ. ಹೌದು ಸೀಸನ್ ಬಿಗ್ ಬಾಸ್ ಹತ್ತಕ್ಕೆ ಕಾಲಿಟ್ಟಿರುವ ಹಳ್ಳಿ ಕಾರ್ ಖ್ಯಾತಿಯ ವರ್ತೂರು ಸಂತೋಷ್ ಅತ್ಯದ್ಭುತವಾಗಿ ಆಟವನ್ನು ಆಡುತ್ತಿದ್ದಾರೆ.. ಬಿಗ್ ಮನೆಯಲ್ಲಿ ಅವರಿಗೆ ಅತಿ ಹೆಚ್ಚು ಸ್ಟ್ರೆಂತ್ ಕೂಡ ಇದ್ದು, ಹೊರಗಡೆ ಅವರ ಅಭಿಮಾನಿಗಳು ಕೂಡ ಅವರ ಆಟಕ್ಕೆ ಶಭಾಷ್ ಗಿರಿ ಹಾಕುತ್ತಿರುವುದು ಖುಷಿಯ ಸಂಗತಿ. ಹೌದು ವರ್ತೂರು ಸಂತೋಷ ಅವರು ಸ್ವಭಾವದಲ್ಲಿ ತುಂಬಾ ಮೃದು ಸ್ವಭಾವ ಹೊಂದಿದವರು, ಮಾತು ಮೃದು, ಸ್ವಲ್ಪವೂ ಕಲ್ಮಶ ಇಲ್ಲದೆ ಒಳ್ಳೆಯ ವ್ಯಕ್ತಿತ್ವವನ್ನು ಬೆಳೆಸಿಕೊಂಡು ಬಂದಿರುವ ವರ್ತೂರು ಸಂತೋಷ ಅವರು ಬಿಗ್ ಬಾಸ್ ಮನೆಯಲ್ಲಿ ಆಟವನ್ನು ತುಂಬಾ ಚೆನ್ನಾಗಿ ಆಡುತ್ತಿದ್ದಾರೆ ಎನ್ನಬಹುದು.

ಅವರು ಬಿಗ್ ಬಾಸ್ ಮನೆಗೆ ಹೋದ ಬಳಿಕ ಸಾಕಷ್ಟು ಬದಲಾವಣೆಗಳು ಹೊರಗಿನ ಪ್ರಪಂಚದಲ್ಲಿ ಅವರ ಕೆಲ ವಿಚಾರಗಳ ಕುರಿತು ಕಂಡು ಬಂದಿದ್ದಾವೆ. ಈ ಹುಲಿ ಉಗುರಿನ ಪೆಂಡೆಂಟ್ ಧರಿಸಿದ್ದ ವಿಚಾರಕ್ಕಾಗಿ ಅವರನ್ನು ಅರೆಸ್ಟ್ ಕೂಡ ಮಾಡಲಾಗಿತ್ತು.. ನಂತರ ಬಿಡುಗಡೆ ಮಾಡಿದ್ದು, ಮತ್ತೆ ಬಿಗ್ ಬಾಸ್ ಸೇರಿದ್ದರು. ಮತ್ತೆ ಅವರು ಬಿಗ್ ಮನೆಗೆ ಹೋದ ಬಳಿಕ ಅವರ ಮದುವೆ ವಿಚಾರವಾಗಿಯೂ ಕೂಡ ಮತ್ತೆ ಹೊರಗಡೆ ತುಂಬಾನೇ ಚರ್ಚೆಯಾಯ್ತು..ಅವರ ಮದುವೆ ವಿಡಿಯೋದ ಕೆಲ ತುಣುಕುಗಳ ನೀವು ಸಹ ನೋಡಿದಿರಿ. ಹಾಗಿದ್ದರೆ ಕೆಲವರು ಇವರಿಗೆ ಈಗಾಗಲೇ ಮದುವೆ ಆಗಿದೆ ಎನ್ನಲಾಗಿ ಹೇಳಿದ್ದು , ಬಿಗ್ ಬಾಸ್ ಮನೆಯಲ್ಲಿ ಯಾಕೆ ಸುಳ್ಳು ಹೇಳುತ್ತಿದ್ದಾರೆ , ಸುಳ್ಳು ಹೇಳಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟರು ಎಂಬುದಾಗಿಯೂ ಕೂಡ ಚರ್ಚೆ ಮಾಡಿದ್ದು ಉಂಟು.

ಅದಕ್ಕೆ ಉತ್ತರವೆಂಬಂತೆ ಹಳ್ಳಿಕಾರ್ ಅವರು ಅವರ ಮದುವೆ ಸತ್ಯದ ಕಹಿ ವಿಚಾರವನ್ನು ಈಗ ಬಿಚ್ಚಿಟ್ಟಿದ್ದಾರೆ. ಅವರು ಹೇಳುವ ಹಾಗೆ ವರ್ತೂರ್ ಸಂತೋಷ್ ಆಗಿ ಮೊದಲು ಹೆಗಿದ್ದೇನೋ ಹಾಗೆಯೇ ಇದ್ದೇನೆ. ನನ್ನ ಮನಸಿನ ಒಳಗೆ ಇರುವ ಒಂದು ವಿಚಾರ ಹೇಳುತ್ತೇನೆ. ನನ್ನ ಮದುವೆ ವಿಚಾರಕ್ಕೆ ಬರುವುದಾದರೆ ನಮ್ಮ ದೊಡ್ಡಪ್ಪನಿಗೆ ನಾನು ಹೇಳಿದ್ದೆ, ನೀವು ಯಾವ ಹೆಣ್ಣಿಗೆ ತಾಳಿ ಕಟ್ಟು ಎನ್ನುತ್ತೀರಿ ಅದಕ್ಕೆ ನಾನು ತಾಳಿ ಕಟ್ಟುತ್ತೇನೆ ಎಂದು, ಆ ಮಾತಿನಂತೆ ಒಪ್ಪಿಕೊಂಡು ಮದುವೆಯಾದೆ. ಆದರೆ ಬರು ಬರುತ್ತಾ ನಮ್ಮ ತಾಯಿಯನ್ನು ಅವರು ಇಗ್ನೋರ್ ಮಾಡಲು ಪ್ರಾರಂಭಿಸಿದರು.

. ಹಾಗೆ ನಾನು ಸಂಪಾದಿಸಿದ ಜನರನ್ನು ದೂರ ಇಡಲು ಯತ್ನಿಸಿದರು. ಹಾಗಾಗಿ ನಾನು ಅವರನ್ನ ಬಿಟ್ಟಿದ್ದೆ, ಅವರ ಮನೆಗೆ ಹೋಗಿ ಒಮ್ಮೆ ನೀನು ನನ್ನ ಮಾತಿನಂತೆ ಬಾ, ಈಗಲೂ ಕೂಡ ರಾಣಿಯೇ ಎನ್ನಲಾಗಿ ಹೇಳಿ, ಮನೆಗೆ ಮತ್ತೆ ಕರಿದೆ. ಆದರೆ ಅವರು ಗೇಟ್ ಇಂದ ಹೊರ ಹೋಗು ಎಂದರು.. ಅವತ್ತು ಮಾತು ಕೊಟ್ಟಿದ್ದೆ, ಅದರಂತೆ ಇಂದು ಇಲ್ಲಿ ಬಂದು ನಿಂತಿದ್ದೇನೆ' ಎಂದು ಭಾವುಕರಾದರು ವರ್ತೂರು ಸಂತೋಷ್. ಆ ವಿಡಿಯೋ ತುಣುಕು ಇಲ್ಲಿದೆ  ನೋಡಿ..ಇದರ ಬಗ್ಗೆ ನೀವು ಕೂಡ ಕಮೆಂಟ್ ಮಾಡಿ.. ಜೊತೆಗೆ ವರ್ತೂರು ಸಂತೋಷ್ ಅವರ ಆಟದ ವೈಖರಿ ಬಿಗ್ ಬಾಸ್ ಮನೆಯಲ್ಲಿ ಹೇಗಿದೆ, ಅವರು ಬಿಗ್ ಬಾಸ್ ಟೈಟಲ್ ವಿನ್ನರ್ ಆಗಬಹುದಾ ಅದಕ್ಕೆ ಅವರು ನಿಜಕ್ಕೂ ಅರ್ಹರಿದ್ದಾರ ಅಥ್ವಾ ಇಲ್ಲವ ಎನ್ನಲಾಗಿಯೂ ಕೂಡ ಅಭಿಪ್ರಾಯ ವ್ಯಕ್ತಪಡಿಸಿ ಧನ್ಯವಾದಗಳು.. ( video credit : Kannada Tv Times )