ವರ್ತೂರು ಸಂತೋಷ್ ಅವರ ಮತ್ತೊಂದು ರಹಸ್ಯ ರಿವಿಲ್! ಆ ರಹಸ್ಯ ಏನು ಗೊತ್ತಾ?

ವರ್ತೂರು ಸಂತೋಷ್ ಅವರ ಮತ್ತೊಂದು ರಹಸ್ಯ ರಿವಿಲ್! ಆ ರಹಸ್ಯ ಏನು ಗೊತ್ತಾ?

ಕನ್ನಡ ಕಿರುತೆರೆಯ ಮನೋರಂಜನೆಯ ವಿಷಯದಲ್ಲಿ ದೊಡ್ಡ  ಮಟ್ಟದ ಸುದ್ದಿ ಮಾಡಿರುವ ಕನ್ನಡ ಬಿಗ್ ಬಾಸ್ ಸೀಸನ್ ಹತ್ತು ಶುರುವಾಗಿ ಎರಡು ವಾರಗಳು ಕಳೆದಿದೆ. ಇನ್ನೂ ದಶಕದ ಸಂಬ್ರಮ ಆಗಿರುವ ಕಾರಣದಿಂದ ಈ ಬಾರಿಯ ಬಿಗ್ ಬಾಸ್ ಹ್ಯಾಪಿ ಬಿಗ್ ಬಾಸ್ ಎಂದು ಪರಿಗಣಿಸಿರುವುದು ಅಲ್ಲದೆ ಸಾಕಷ್ಟು ಟ್ವಿಸ್ಟ್ ನೀಡುವುದಾಗಿ ಈಗಾಗಲೇ ಬಹಿರಂಗವಾಗಿ ತಿಳಿಸಿದ್ದಾರೆ. ಇನ್ನೂ ಅದರ ಸಣ್ಣ ಜಲಕ್ ಬಿಗ್ ಬಾಸ್ ನ ಗ್ರಾಂಡ್ ಓಪನಿಂಗ್ ದಿನವೇ ತೋರಿಸಲಾಗಿದೆ. ಇನ್ನೂ ಡೇಂಜರ್ ಜೋನ್ ನಿಂದಾ ಮನೆಗೆ ಪ್ರವೇಶ ಮಾಡಿದ ಡ್ರೋನ್ ಪ್ರತಾಪ್, ವರ್ತೂರು ಸಂತೋಷ್, ತನಿಷ, ಕಾರ್ತಿಕ್ ಹಾಗೂ ಸಂಗೀತ ಅವರು ಅರ್ಹರು ಎಂದು ಗುರುತಿಸಿಕೊಂಡು ಎರಡು ವಾರದ ಪೂರ್ತಿ ಕಾಲ ಕಳೆದಿದ್ದಾರೆ.

ಇನ್ನೂ ವರ್ತೂರು ಸಂತೋಷ್ ಅವರು ಬಂದ ಮೊದಲ ದಿನಗಳಲ್ಲಿ ಮನೆಯವರ ಜೊತೆ ಬೆರೆಯಲು ಕೊಂಚ ಕಷ್ಟವಾದರು ಕೊಡ ಈ ಎರಡು ವಾರಗಳಲ್ಲಿ ಮನೆಯವರ ಹಾಗೂ ಪ್ರೇಕ್ಷಕರ ಮನಸ್ಸು ಗೆದ್ದಿದ್ದಾರೆ. ಇನ್ನೇನು ಮನೆಯಲ್ಲಿ ಸೆಟಲ್ ಆದರೂ ಎನ್ನುತ್ತಿದ್ದಂತೆ ಇಡೀ ಬಿಗ್ ಬಾಸ್ ಹಾಗೂ ಕಿರುತೆರೆಯ ರಿಯಾಲಿಟಿ ಶೋ ನ ಹಿತಿಹಾಸದಲ್ಲಿ ನಡೆದಿರದ ಘಟನೆ ಒಂದು ನಡೆದಿದೆ. ಅದುವೇ ವರ್ತೂರು ಸಂತೋಷ್ ಅವರ ಅರೆಸ್ಟ್. ಇನ್ನೂ ಬಿಗ್ ಬಾಸ್ ಮನೆಯಲ್ಲಿ ವರ್ತೂರು ಸಂತೋಷ್ ಅವರು ಹುಲಿಯ ಉಗುರಿನ ಚೈನ್ ಧರಿಸಿದ್ದ ಕಾರಣ ಅದನ್ನು ನೋಟಿಸ್ ಮಾಡಿರುವ ಪ್ರೇಕ್ಷಕರು ಅರಣ್ಯ ಅಧಿಕಾರಿಗಳಿಗೆ ದೂರನ್ನು ನೀಡಿದ್ದಾರೆ. ಇನ್ನೂ ಆ ದೂರನ್ನು ಪರಿಗಣಿಸಿದ ಅಧಿಕಾರಿಗಳು ವರ್ತೂರು ಸಂತೋಷ್ ಅವರನ್ನು ಮನೆಯಿಂದ ಹೊರಗೆ ತಂದು ಬಂಧನದಲ್ಲಿ ಇಟ್ಟಿದ್ದಾರೆ. 

ಕೋರ್ಟ್ ದಸರಾ ಪ್ರಯುಕ್ತ ರಜೆ ಇರುವ ಕಾರಣ ಸಂತೋಷ್ ಅವರನ್ನು 14 ದಿನಗಳ ಕಾಲ ಕಷ್ಟೆಡಿ ಅಲ್ಲಿ ಇಟ್ಟುಕೊಂಡು ವಿಚಾರಣೆ ಮಾಡಲಾಗುವುದು ಎನ್ನಲಾಗುತ್ತಿದೆ. ಇನ್ನೂ ಈ ವಿಚಾರಣಾ ಸಂಧರ್ಭದಲ್ಲಿ ಈ ಪ್ರಕರಣದ ಬಗ್ಗೆ ಪ್ರೊವ್ ಆದರೆ ಅವರಿಗೆ 5ವರ್ಷಗಳ ಕಾಲ ಸೆರೆ ವಾಸ ಅನುಭವಿಸಬೇಕಾಗುತ್ತದೆ. ಇನ್ನೂ ಈಗಾಗಲೇ ಸಂತೋಷ್ ಅವರು ಧರಿಸಿರುವ ಚೈನ್ ಮಾಡಿಕೊಟ್ಟ ಅಂಗಡಿಗೆ ಕೊಡ ನೋಟಿಸ್ ಕೊಟ್ಟಿದ್ದು ಈ ವಿಚಾರಣೆಯ ಯಾವ ಹಂತ ತಲುಪಲಿದೆ ಎಂದು ನಾವೆಲ್ಲರೂ ಕಾದು ನೋಡಬೇಕಿದೆ.