ಕನ್ನಡ ಬಿಗ್ ಬಾಸ್ ಇತಿಹಾಸ ದಲ್ಲಿ ಮೊದಲು! ದೊಡ್ಡ ಮನೆಯಲ್ಲಿ ಅರೆಸ್ಟ್ ಆದ ಸ್ಪರ್ಧಿ!

ಕನ್ನಡ ಬಿಗ್ ಬಾಸ್ ಇತಿಹಾಸ ದಲ್ಲಿ ಮೊದಲು! ದೊಡ್ಡ ಮನೆಯಲ್ಲಿ ಅರೆಸ್ಟ್ ಆದ ಸ್ಪರ್ಧಿ!

ಇನ್ನೂ ನಮ್ಮ ಕನ್ನಡ ಕಿರುತೆರೆಯಲ್ಲಿ ಬರುವ ಎಲ್ಲಾ ರಿಯಾಲಿಟಿ ಶೋ ಗಳ ಪೈಕಿ ಅತಿ ದೊಡ್ಡ ಹೈಪ್ ಹಾಗೂ ಮನೋರಂಜನೆ ನೀಡುವ ಶೋ ಎಂದರೆ ಅದು "ಬಿಗ್ ಬಾಸ್ ಕನ್ನಡ". ಇನ್ನೂ ಈ ಬಾರಿಯ ಸೀಸನ್ ದಶಕದ ಸೀಸನ್ ಆಗಿದ್ದು ಈ ಬಾರಿ ಕಳೆದ ಎಲ್ಲಾ ಸಿಸಂಗಳಿಗಿಂತ ಹೆಚ್ಚಿನ ಟ್ವಿಸ್ಟ್ ಹಾಗೂ ಹೈಪ್ ಪಡೆದುಕೊಳ್ಳಲಿದೆ ಎಂದು ವಾಹಿನಿ ಅವರೇ ತಿಳಿಸಿದ್ದಾರೆ. ಇನ್ನೂ ವಾಹಿನಿ ಅವರು ಈ ಸೀಸನ್ ನ ವಿಭಿನ್ನತೆಯ ಬಗ್ಗೆ ಮೊದಲ ದಿನವೇ ಒಂದು ಜಲಕ್ ತೋರಿಸಿದ್ದು. ಈ ಜಲಕ್ ನಿಂದಾ ಜನರ ನಿರೀಕ್ಷೆ ಈ ಸೀಸನ್ ಮೇಲೆ ಮತ್ತಷ್ಟು ಹೆಚ್ಚಿದೆ ಎಂದ್ರೆ ತಪ್ಪಾಗಲಾರದು. ಆ ಟ್ವಿಸ್ಟ್ ಬಗ್ಗೆ ನಾವು ಹೊಸದಾಗಿ ಹೇಳಬೇಕಿಲ್ಲ. ಇನ್ನೂ ಈ ಟ್ವಿಸ್ಟ್  ಜನರ ವೋಟಿಂಗ್ ಪಡೆದು ಅರ್ಹರು ಎಂದು ಗುರುತಿಸಿಕೊಂಡ ವ್ಯಕ್ತಿಗೆ ಮಾತ್ರ ಈ ಬಿಗ್ ಬಾಸ್ ಮನೆಯ ಪ್ರವೇಶ ನೀಡಲಾಗಿತ್ತು.    

ಇನ್ನೂ ಅದ್ರಲ್ಲಿ ಗೊತ್ತಾ ಜನರ ವೋಟಿಂಗ್ ಕಡಿಮೆ ಪಡೆದುಕೊಂಡು ಹೋಲ್ಡ್ ನಲ್ಲಿ ಇದ್ದ "ವರ್ತೂರು ಸಂತೋಷ್" ಅವರು ಸಾಕಷ್ಟು ಸಮಯದ ಬಳಿಕ ವೈಟಿಂಗ್ ರೂಂ ನಲ್ಲಿ ಕಾಯ್ದು ಕುಳಿತು ಆ ನಂತರ ಒಂದು ವಾರದ ವರೆಗೂ ಡೇಂಜರ್ ಜೋನ್ ನಲ್ಲಿ ಇದ್ದು ಕೊಂಡು ಜನರ ಮದ್ಯೆ ಹಾಗೂ ಮನೆಯಲ್ಲಿ ಸಂತೋಷ್ ವರ್ತೂರು ಅವರು ಬಿಗ್ ಬಾಸ್ ಮನೆಗೆ ಅರ್ಹರು ಎಂದು ಗುರುತಿಸಿಕೊಂಡು ಈಗ ಸದ್ಯದಲ್ಲಿ ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಯಾಗಿ ಭಾಗಿಯಾಗಿದ್ದಾರೆ. ಮೊದಲನೇ ವಾರದಲ್ಲಿ ಎಲ್ಲರಲ್ಲೂ ಬೆರೆಯಲು ಹಾಗೂ ಸ್ನೇಹ ಮಾಡಿಕೊಳ್ಳಲು ಹಿಂಜತಿರುತ್ತಿದ್ದ ಸಂತೋಷ್ ಅವ್ರು ಎರಡನೇ ವಾರದಲ್ಲಿ ಮನೆಯವರೆಲ್ಲರ ಜೊತೆ ಒಳ್ಳೆಯ ಬಾಂಧವ್ಯವನ್ನು ಬೆಳೆಸಿಕೊಂಡಿದ್ದಾರೆ.

ಇನ್ನೂ ಹೀಗೆ ಗುರುತಿಸಿಕೊಂಡು ಇನ್ನೇನು ಬಿಗ್ ಬಾಸ್ ಮನೆಯಲ್ಲಿ ಹಾಗೂ ಮನೆಯ ಸ್ಪರ್ಧಿಗಳ ಜೊತೆ ಸೆಟಲ್ ಆಗುವ ಸಮಯದಲ್ಲಿ ಬಿಗ್ ಬಾಸ್ ಮನೆಯಲ್ಲಿ ಇತಿಹಾಸದಲ್ಲಿ ಮೊದಲು  ಪೊಲೀಸರಿಂದ ಸಂತೋಷ್ ಅವರು ಅರೆಸ್ಟ್ ಆಗಿದ್ದಾರೆ. ಹೌದು ಈ ಸುದ್ದಿ ಸತ್ಯ ಏಕೆಂದ್ರೆ ಬಿಗ್ ಬಾಸ್ ಓಪನಿಂಗ್ ಸಮಯದಲ್ಲಿ ವರ್ತೂರು ಸಂತೋಷ್ ಅವರು ಹುಲಿಯ ಉಗುರನ್ನು ಧರಿಸುವುದು ಕಣ್ಣಿಗೆ ಬಿದ್ದಿದ್ದು. ಇದನ್ನು ಯಾರೊಬ್ಬ ವ್ಯಕ್ತಿ ದೂರನ್ನು ದಾಖಲು ಮಾಡಿದ್ದಾರೆ. ಈ ದೂರನ್ನು ಪರಿಗಣಿಸಿರುವ ಪೊಲೀಸರು ಈಗ ಬಿಗ್ ಬಾಸ್ ಮನೆಗೆ ಬಂದು ಸಂತೋಷ್ ಅವರನ್ನು ಅರೆಸ್ಟ್ ಮಾಡಿಕೊಂಡು ಹೋಗಿದ್ದಾರೆ. ( video credit : tv 9 kannada )

ಕನ್ನಡ ಬಿಗ್ ಬಾಸ್ ಇತಿಹಾಸ ದಲ್ಲಿ ಮೊದಲು! ದೊಡ್ಡ ಮನೆಯಲ್ಲಿ ಅರೆಸ್ಟ್ ಆದ ಸ್ಪರ್ಧಿ!