ಭಾರತದಲ್ಲಿ ಕೋಟಿ ಕೋಟಿ ಹಣ ಸುರಿದು ಮದುವೆ ಆದವರ ಟಾಪ್ ಟೆನ್ ಶ್ರೀಮಂತರ ಪಟ್ಟಿ ಹೀಗಿದೆ..!

ಭಾರತದಲ್ಲಿ ಕೋಟಿ ಕೋಟಿ ಹಣ ಸುರಿದು ಮದುವೆ ಆದವರ ಟಾಪ್ ಟೆನ್ ಶ್ರೀಮಂತರ ಪಟ್ಟಿ ಹೀಗಿದೆ..!

ಮದುವೆ ಅನ್ನುವುದು ಕೆಲವರಿಗೆ ಸರಾಸರಿಯಲ್ಲಿ ನೋಡುವುದಾದರೆ ಸಾಮಾನ್ಯವಾಗಿ ಒಂದು ಕುಟುಂಬ ಮದುವೆಯಲ್ಲಿ 100 ಜನರು ಇರುತ್ತಾರೆ. ಸಾಮಾನ್ಯ ಕುಟುಂಬದಲ್ಲಿ ಹಾಗೂ ಈ ಮಧ್ಯಮ ಕುಟುಂಬದಲ್ಲಿ ನಡೆಯುವುದು ಮಾಮೂಲಿ. ಆದರೆ ಶ್ರೀಮಂತರ ಪೈಕಿ ಇದೊಂದು ಆಚರಣೆ ಆಗಿರುತ್ತದೆ..ಅವರ ಐಷಾರಾಮಿ ಜೀವನವನ್ನು ಪ್ರದರ್ಶಿಸಲು, ಹಾಗೆ ಅವರ ಆಸ್ತಿಯ ಒಟ್ಟು ಮೌಲ್ಯ ಎತ್ತಿ ಹಿಡಿಯಲು ಇದೊಂದು ಒಳ್ಳೆಯ ವೇದಿಕೆ ಆಗಿರುತ್ತದೆ.. ನಮ್ಮ ದೇಶದಲ್ಲಿ ಅತ್ಯಂತ ಐಷಾರಾಮಿ ಮದುವೆಗಳು ನಡೆದಿದ್ದು, ಅವುಗಳ ಪಟ್ಟಿ ಹೀಗಿದೆ ನೋಡಿ...

ವನಿಶಾ ಮಿತ್ತಲ್ ಹಾಗೂ ಅಮಿತ್ ಭಾಟಿಯಾ ಅವರ ಮದುವೆ ನಡೆದದ್ದು 2004 ರಲ್ಲಿ. ಇವರು ಸ್ಟೀಲ್ ಉದ್ಯಮಿ ಆಗಿದ್ದಾರೆ. ಲಕ್ಷ್ಮಿ ಮಿತ್ತಲ್ ಅವರ ಮಗಳು  ವನಿಷಾ ಹಾಗೂ ಬ್ಯಾಂಕರ್ ಆಗಿದ್ದಂತಹ ಅಮಿತ್ ಭಾಟಿಯಾ ಮದುವೆ ಪ್ಯಾರಿಸ್‌ನಲ್ಲಿ ಒಟ್ಟು ೬ ದಿನಗಳ ಕಾಲ ನಡೆದಿದ್ದು, ಸುಮಾರು ಇವರ ಮದುವೆಗೆ ಒಟ್ಟು ಖರ್ಚಾಗಿದ್ದು ಅಂದಾಜು 240 ಕೋಟಿ ರೂ ಎಂದು ಕೇಳಿ ಬಂದಿದೆ. ಇನ್ನು ಲಕ್ಷ್ಮಿ ಮಿತ್ತಲ್ ಅವರ ತಮ್ಮ ಪ್ರಮೋದ್ ಮಿತ್ತಲ್ ಅವರ ಪುತ್ರಿ ಸೃಷ್ಟಿ ಮಿತ್ತಲ್ ಮದುವೆಗೆ ಯುರೋಪ್ನಲ್ಲಿ 2013 ರಲ್ಲಿ ಖರ್ಚಾಗಿದ್ದು ಬರೋಬ್ಬರಿ 500 ಕೋಟಿ ಎಂದು ಕೇಳಿ ಬಂದಿದೆ.. 

ಇನ್ನು 2013ರಲ್ಲಿ ಕಾಂಗ್ರೆಸ್ ನಾಯಕರದ ಕನ್ವರ್ಸಿಂಗ್ ತನ್ವರ್ ಅವರ ಪುತ್ರ ಲಲಿತ್ ಅವರ ಮದುವೆ ಅತ್ತ ದೂರದ ಹರಿಯಾಣದ ಜೌನ್ಪುರ ಗ್ರಾಮದಲ್ಲಿ ನಡೆದಿದ್ದು ಬರೋಬ್ಬರಿ 21 ಕೋಟಿ ಬೆಲೆ ಬಾಳುವ ಹೆಲಿಕ್ಯಾಪ್ಟ್ರನ್ನು ಉಡುಗೊರೆಯಾಗಿ ನೀಡಲಾಗಿತ್ತು, ಮದುವೆಗೆ ಬಂದ ಎಲ್ಲಾ ಅತಿಥಿಗಳಿಗೆ 30 ಗ್ರಾಂ ಬೆಳ್ಳಿ ಬಿಸ್ಕತ್, ಸಫಾರಿ ಸೂಟ್ ಸೆಟ್, ಹಾಗೂ ಶಾಲು ನೀಡಿ 2,100 ನಗದನ್ನ ರಿಟರ್ನ್ ಗಿಫ್ಟ್ ನೀಡಿದ್ದರು ಎಂದು ಕೇಳಿ ಬಂದಿದೆ.

ನ್ಯೂಜಿಲ್ಯಾಂಡ್ ಮೂಲದ ಎಸ್ ರವೀಂದ್ರ ಅವರ ಪುತ್ರರ ವಿವಾಹ 2011 ರಲ್ಲಿ ಜರುಗಿತ್ತು. ಮಾಂಗಲ್ಯ ಸೂತ್ರಕ್ಕೆ ಕೋಟಿ ಖರ್ಚಾಗಿದ್ದು, ಮಧು ಮನಿಷಾ ಮಲೋತ್ರ ಅವರು ಕೋಟಿ ಕೋಟಿ ಬೆಲೆ ಬಾಳುವ ಡಿಸೈನ್ ಬಟ್ಟೆ ಮದುವೆಗೆ ಧರಿಸಿದ್ದು ಇವರ ಮದುವೆ ಹೈದರಾಬಾದ್ ನಲ್ಲಿ ತುಂಬಾ ಗ್ರಾಂಡ್ ಆಗಿ ನಡೆದಿತ್ತು ಸರಿಸುಮಾರು ನೂರಾರು ಕೋಟಿ ಹಣ ಇವರ ಮದುವೆಗೆ ಖರ್ಚಾಗಿದ್ದು ಎನ್ನಲಾಗಿ ವರದಿಯಾಗಿದೆ..

ಇನ್ನು ಕರ್ನಾಟಕದ ಮಾಜಿ ಸಚಿವರಾಗಿದ್ದ ಜನಾರ್ದನ ರೆಡ್ಡಿ ಅವರ ಮಗಳ ಮದುವೆ 2016ರಲ್ಲಿ ನಡೆದಿತ್ತು. 30 ಎಕರೆಯಲ್ಲಿ ರಾಜ ಮನೆತನದಂತೆ ಸೆಟ್ ಹಾಕಿ ಈ ಮದುವೆಯನ್ನು ಮಾಡಲಾಗಿತ್ತು. ರಾಜ ಮನೆತನದ ರೀತಿಯ ಮದುವೆ ಇದಾಗಿದ್ದು, ಎಲ್ಲಿ ನೋಡಿದರೂ ಆಡಂಬರ, ಹಾಗೆ ವಧುವಿನ ಲೆಹಂಗಾಕ್ಕೆ 17 ಕೋಟಿ ಹಣ, ಇವರ ಮದುವೆಗೆ ಖರ್ಚಾಗಿದ್ದು ಒಟ್ಟು ಸುಮಾರು 500 ಕೋಟಿಗೂ ಅಧಿಕ ಎಂದು ಕೇಳಿಬಂದಿದೆ... ( video credit ; Celebrity news )

ಇನ್ನು ಭಾರತದ ಸುಪ್ರಸಿದ್ಧ ಕ್ರಿಕೆಟಿಗ ಯಂಗ್ಸ್ಟರ್ ಗಳ ನೆಚ್ಚಿನ ಕ್ರಿಕೆಟರ್ ಆದಂತಹ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾರ ಮದುವೆ 2017ರಲ್ಲಿ ನಡೆದಿತ್ತು, ಸರಿ ಸುಮಾರು ಇವರ ಮದುವೆಗೆ ಖರ್ಚಾಗಿದ್ದು 90 ಕೋಟಿ ಎಂದು ಕೇಳಿ ಬಂದಿದೆ. ಇಟಲಿಯಲ್ಲಿ ಮದುವೆ ನಡೆದಿತ್ತು. ನಂತರ ದೆಹಲಿ ಮತ್ತು ಮುಂಬೈನಲ್ಲಿ ಇವರು ಆರತಕ್ಷತೆ ಕಾರ್ಯಕ್ರಮ ಇಟ್ಟುಕೊಂಡಿದ್ದರು..

ಮುಕೇಶ್ ಅಂಬಾನಿ ಅವರ ಪುತ್ರಿ ಇಶಾ ಅವರ ಮಧುರಿಗೆ 700 ಕೋಟಿ ಹಣ ಖರ್ಚಾಗಿದ್ದು, ಇವರ ಹಿರಿಯ ಪುತ್ರ ಆಕಾಶ್ ಮತ್ತು ಶ್ಲೋಕ ಅವರ ಮದುವೆಗೆ ಮುಕೇಶ್ ಅಂಬಾನಿ ಅವರು ಒಟ್ಟು 110 ಕೋಟಿ ಹಣ ಖರ್ಚು ಮಾಡಿದ್ದರು ಎನ್ನಲಾಗಿದೆ. ಇನ್ನು 2018 ರಲ್ಲಿ ಪ್ರಿಯಾಂಕ ಚೋಪ್ರಾ ಮತ್ತು ನಿಕ್ ಜೋನಾಸ್ ಮದುವೆ ನಡೆದಿದ್ದು, ಇವರ ಮದುವೆಗೆ 105 ಕೋಟಿ ಹಣ ಖರ್ಚು ಆಗಿತ್ತಂತೆ.. ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಮದುವೆಗೆ ಇಟಲಿಯ ಲಿಕ್ ಕೋಮೊ ಸಾಕ್ಷಿಯಾಗಿದ್ದು ಇವರ ಮದುವೆಗೆ ಖರ್ಚು ಆಗಿದ್ದು 77 ಕೋಟಿ ಎಂದು ಕೇಳಿ ಬಂದಿದೆ.