ಲವ್ ಮಾಡಿ ನಿಮ್ಮ ಹುಡುಗಿಗೆ ಪ್ರಪೋಸ್ ಮಾಡಬೇಕು ಅಂತ ಇದೀರಾ..! ಹಾಗಾದ್ರೆ ಈ ಅಂಶ ತಲೆಯಲ್ಲಿ ಇರಲಿ
ಹೌದು ಸ್ನೇಹಿತರೆ ಪ್ರೀತಿ ಎನ್ನುವ ವಿಷಯದಲ್ಲಿ ಇಂದಿನ ಯುವಜನತೆ ಮಾತ್ರ ಅಲ್ಲ ಬಹಳಷ್ಟು ದಿನಗಳಿಂದ ಪ್ರೀತಿ ಎನ್ನುವ ಅಂಶದಲ್ಲಿ ಸಾಕಷ್ಟು ಜನ ಮಿಂದೆದ್ದು ಹೋಗಿದ್ದಾರೆ..ಈ ಪ್ರೀತಿ ವಿಷಯದಲ್ಲಿ ಅವರಿಷ್ಟದ ವ್ಯಕ್ತಿಯನ್ನು ಪಡೆಯುವಲ್ಲಿ ಯಶಸ್ವಿ ಕೂಡ ಆಗಿದ್ದಾರೆ. ಆದರೆ ಯಶಸ್ವಿ ಆದವರಿಗಿಂತ ಪ್ರೀತಿಯಲ್ಲಿ ಬಿದ್ದು ಸೋತವರೇ ಹೆಚ್ಚು. ಹುಡುಗಿಯನ್ನು ಇಷ್ಟಪಟ್ಟು ಲವ್ ಮಾಡಿ ಆಕೆಯಿಂದ ಆ ಪ್ರೀತಿಯ ಪಡೆದುಕೊಳ್ಳುವಲ್ಲಿ, ಅಥವಾ ಪ್ರೀತಿಯನ್ನು ಪಡೆದರು, ಮನೆಯವರ ಒತ್ತಾಯದ ಮೇರೆಗೆ ಹುಡುಗಿಯನ್ನು ಬಿಟ್ಟುಕೊಟ್ಟು, ಅಥವಾ ಹುಡುಗಿಯರ ಮನೆಯವರೆ ಹುಡುಗನನ್ನು ದೂರ ತಳ್ಳಿ ಇನ್ನೊಬ್ಬನಿಗೆ ಮದುವೆ ಮಾಡಿಕೊಟ್ಟು ಅತಿ ನೋವಿಗೆ ಕಾರಣ ಕೂಡ ಆಗಿದ್ದಾರೆ.
ಆದರೆ ಕೇವಲ ಹುಡುಗಿಗಾಗಿ ಮಾತ್ರ ಜೀವನ ಅಲ್ಲ, ಪ್ರತಿಯೊಬ್ಬ ಪುರುಷರು ತನ್ನ ಜೀವವನ್ನು ಜೀವನವನ್ನು ಅತಿಯಾಗಿ ಹುಡುಗಿಗಿಂತ ಹೆಚ್ಚು ಪ್ರೀತಿಸಬಲ್ಲವರು ಅವರ ತಂದೆ ತಾಯಿ ಎಂದು ಅರಿತುಕೊಳ್ಳಬೇಕು.. ಹೌದು ನಿಮ್ಮಿಷ್ಟದ ಮತ್ತು ನೀವು ಮೆಚ್ಚಿದ ಹುಡುಗಿಗೆ ಪ್ರಪೋಸ್ ಮಾಡಬೇಕು ಅಂದುಕೊಂಡಿದ್ದೀರಾ, ಹಾಗಾದ್ರೆ ಈ ಕೆಲವು ವಿಚಾರಗಳು ನಿಮ್ಮ ತಲೆಯಲ್ಲಿ ಇರಬೇಕು.. ನಿಮ್ಮ ಪ್ರೀತಿ ಹೇಳಿಕೊಳ್ಳುವ ಮುನ್ನ ಕೆಲವು ಅಂಶಗಳನ್ನು ನೀವು ಪಾಲಿಸಲೇಬೇಕಾಗಿದೆ.. ಮೊದಲು ಹುಡುಗಿಗೆ ನೀವು ಎಷ್ಟು ದಿನಗಳಿಂದ ಪರಿಚಯ ಇದ್ದೀರಿ ಅಂತ ತಿಳಿದುಕೊಳ್ಳಿ. ಆಕೆಯ ಇಷ್ಟ ಕಷ್ಟಗಳನ್ನು ಅರ್ಥ ಮಾಡಿಕೊಳ್ಳಿ..ಅವಳಿಗೆ ಇಷ್ಟ ಆಗುವ ರೀತಿ ನೀವು ಜೊತೆಗಿದ್ದರೆ, ನೀವು ಜೊತೆಗೆ ಇದ್ದಾಗ ರಾಜಕುಮಾರಿ ಹಾಗೆ ಆಕೆಗೆ ಫೀಲ್ ಬರಬೇಕು ಹಾಗಿದ್ದರೆ ಮಾತ್ರ ನಿಮ್ಮನ್ನು ಪ್ರೀತಿಸುವ ಸಾಧ್ಯತೆ ಹೆಚ್ಚಿರುತ್ತದಂತೆ.
ನಿಮ್ಮ ಇಷ್ಟದ ಹುಡುಗಿಗೆ ಪ್ರಪೋಸ್ ಮಾಡುವಾಗ ಸಮಯವನ್ನು ನೋಡಿಕೊಳ್ಳಿ. ಆಕೆ ಮೂಡ್ ಹೇಗಿದೆ ಎಂದು ತಿಳಿದುಕೊಳ್ಳಿ. ನಿಮ್ಮನ್ನು ಎಷ್ಟು ದಿನಗಳಿಂದ ಅರ್ಥ ಮಾಡಿಕೊಂಡಿದ್ದಾಳೆ. ನಿಮ್ಮ ಜೊತೆಗೆ ಎಷ್ಟು ಒಳ್ಳೆಯ ಕೆಟ್ಟ ಸಮಯ ಕಳೆದಿದ್ದಾಳೆ ಎಂದು ಮೊದಲು ಅರ್ಥೈಸಿಕೊಳ್ಳಿ. ಅದಾದ ನಂತರ ನಿಮ್ಮ ಪ್ರೀತಿಯನ್ನು ಸಮರ್ಥಿಸಿ.. ಹುಡುಗಿಗೆ ಪ್ರಪೋಸ್ ಮಾಡುವಾಗ ಆಕೆಯ ಕಣ್ಣಲ್ಲಿ ಕಣ್ಣನಿಟ್ಟು ಪ್ರಪೋಸ್ ಮಾಡಬೇಕು. ಜೊತೆಗೆ ನಿಮ್ಮ ಮುಖದಲ್ಲಿ ನಗು ಇರಬೇಕು. ನಿಮ್ಮ ಮನಸಿನ ಭಾವನೆ ಆಕೆಯ ಮನಸಿಗೆ ಮುಟ್ಟುವ ಹಾಗೆ ಮಾತುಗಳಲ್ಲಿ ಪ್ರೀತಿ ತುಂಬಿರಬೇಕು. ನಿಮ್ಮ ಬಾಡಿ ಲ್ಯಾಂಗ್ವೇಜ್ ಅಲ್ಲಿ ಸಂತಸ ಭರಿತ ಕ್ಷಣಗಳು ಆಗ ಹೆಚ್ಚು ಕಾಣಬೇಕು. ನಿಮ್ಮ ಜೇಬಿನಲ್ಲಿ ಪ್ರಪೋಸ್ ಮಾಡುವಾಗ ಕೈಯನ್ನು ಇಡಬೇಡಿ.
ಹಾಗಂತ ಕೈಯನ್ನ ಗಾಳಿಯಲ್ಲೂ ಸಹ ಸುಮ್ಮನೆ ಇಟ್ಟುಕೊಳ್ಳಬೇಡಿ. ಸ್ವಲ್ಪ ನಗುತ್ತಲೇ ನಿಮ್ಮ ಪ್ರೀತಿಯನ್ನು ಆಕೆಯ ಬಳಿ ಹೇಳಿಕೊಳ್ಳಿ. ಆಗ ಆಕೆ ಒಂದು ಕ್ಷಣ ಕಣ್ಣು ಮುಚ್ಚಿ ಸ್ವಲ್ಪ ಸ್ಮೈಲ್ ಕೊಟ್ಟಳು ಅಂದರೆ ನಿಮ್ಮ ಪ್ರೀತಿಗೆ ಒಪ್ಪಿಗೆ ನೀಡಿದ್ದಾಳೆ ಎಂದರ್ಥ. ಹಾಗೇನೇ ಆಕೆ ಆಗ ಸಮಯ ಕೇಳಿದರೆ ಓಕೆ ಅಂಥ ಹೇಳಿ. ಅಸಲಿಗೆ ಇನ್ನು ಯಾವ ಯಾವ ಅಂಶಗಳನ್ನು ಪ್ರಪೋಸ್ ಮಾಡುವ ವೇಳೆ ಹುಡುಗರು ಪಾಲಿಸಬೇಕು ಎನ್ನುವುದಾಗಿ ಈ ವಿಡಿಯೋದಲ್ಲೀ ಹೆಚ್ಚು ತಿಳಿಸಿದ್ದಾರೆ. ಒಮ್ಮೆ ನೋಡಿ ಇನ್ನಷ್ಟು ಮಾಹಿತಿ ನಿಮಗೆ ಸಿಕ್ಕಂತಾಗುತ್ತದೆ. ವಿಡಿಯೋ ನೋಡಿ ವಿಡಿಯೋ ಶೇರ್ ಮಾಡಿ.. ಒಂದು ವೇಳೆ ನಿಮ್ಮ ಇಷ್ಟದ ಹುಡುಗಿ ನಿಮ್ಮ ಪ್ರೀತಿಯನ್ನು ತಿರಸ್ಕರಿಸಿದರೆ ಜೀವನದಲ್ಲಿ ಎಲ್ಲವೂ ಮುಗಿಯಿತು ಅಂಥ ನಿಮ್ಮ ಜೀವನ ಹಾಳು ಮಾಡಿಕೊಳ್ಳಬೇಡಿ. ಯಾವ ನೋವು ಮಾಡಿಕೊಳ್ಳಬೇಡಿ..ಆಕೆಗಿಂತ ನಿಮ್ಮನ್ನು ಅತಿಯಾಗಿ ಪ್ರೀತಿಸುವವರು ನಿಮ್ಮ ತಂದೆ-ತಾಯಿ ಮಾತ್ರ ಎನ್ನುವ ಬಲವಾದ ನಿಜ ಸಂಗತಿಯನ್ನು ಈ ಮೂಲಕ ನಾವು ನಿಮಗೆ ಹೇಳುತ್ತಿದ್ದೇವೆ ಧನ್ಯವಾದಗಳು. ( video credit : YOYO TV Kannada )