ಒಳ್ಳೆಯ ಹುಡುಗಿಯನ್ನ ಕಂಡು ಹಿಡಿಯುವ ವಿಧಾನ..! ನಿಮ್ಮ ಲವರ್ ನಲ್ಲಿ ಸೂಕ್ಷ್ಮವಾಗಿ ಇವುಗಳ ನೋಡಿ

ಒಳ್ಳೆಯ ಹುಡುಗಿಯನ್ನ ಕಂಡು ಹಿಡಿಯುವ ವಿಧಾನ..! ನಿಮ್ಮ ಲವರ್ ನಲ್ಲಿ ಸೂಕ್ಷ್ಮವಾಗಿ ಇವುಗಳ ನೋಡಿ

ಹೌದು ಪ್ರೀತಿ ಪ್ರೇಮದ ವಿಚಾರಕ್ಕೆ ಬರುವುದಾದರೆ ಇಂದಿನ ದುನಿಯಾದಲ್ಲಿ ಹಣದ ಮಧ್ಯೆ ಕೆಲವರ ಪ್ರೀತಿ ಸಾಯುತ್ತಿದೆ. ಕೆಲವರ ಪ್ರೀತಿ ದೇಹಕ್ಕೆ ಮಾತ್ರ ಸೀಮಿತ ಆಗಿರುತ್ತದೆ. ಹುಡುಗರ ಕಟ್ಟು ಮಸ್ತಾದ, ಸಕತ್ ಹಾಟ್ ಆದ ದೇಹಕ್ಕೆ ಮರುಳಾಗಿ ಈ ಹುಡುಗಿಯರು ತಮ್ಮ ಆಸೆಗಳನ್ನು ತೀರಿಸಿಕೊಳ್ಳಬೇಕು ಎನ್ನುವವರು ಕೂಡ ಕೆಲವರು ಇದ್ದಾರೆ. ಇನ್ನೊಂದು ಕಡೆ ಹುಡುಗರು ಕೂಡ ಹುಡುಗಿಯ ಅಂದಕ್ಕೆ, ಆಕೆಯ ದೇಹ ಸೌಂದರ್ಯಕ್ಕೆ  ಆಸೆಪಟ್ಟು , ದೇಹಕ್ಕೆ ಮಾತ್ರ ಮನಸ್ಸೋತು ಆಕೆಯನ್ನು ಅನುಭವಿಸಬೇಕು ಎಂಬ ಕೆಟ್ಟ ಮನಸ್ಥಿತಿ ಹೊಂದಿದ ಪ್ರೀತಿಯನ್ನು ಕೆಲವರು ಹೊಂದಿರುತ್ತಾರೆ. 

ಹೌದು ನೀವು ಪ್ರೀತಿಯಲ್ಲಿ ಬಿದ್ದಿದ್ದರೆ ಹುಡುಗಿಯರು ಒಳ್ಳೆಯವರ ಅಥವಾ ನಿಮ್ಮನ್ನು ಪ್ರೀತಿ ಮಾಡುತ್ತಿರುವ ಹಾಗೆ ನಾಟಕ ಮಾಡುತ್ತಿದ್ದಾರ, ಹಾಗೆ ಅವರು ಅಸಲಿಗೆ ಒಳ್ಳೆಯವರೇ ಆಗಿದ್ದಾರೆಯೇ ಇಲ್ಲವೇ ಎಂಬುದಾಗಿ ಕಂಡು ಹಿಡಿಯಲು ಹುಡುಗಿಯರ ಬಗ್ಗೆ ಇಲ್ಲಿ ಕೆಲವು ಸೈಕಲಾಜಿಕಲ್ ಪಾಯಿಂಟ್ಸ್ ಗಳು ಈ ಲೇಖನದಲ್ಲಿ ನಿಮಗೆ ದೊರಕುತ್ತವೆ..ಅವುಗಳನ್ನು ನೀವು ಸೂಕ್ಷ್ಮವಾಗಿ ನಿಮ್ಮ ಲವರ್ ನಲ್ಲಿ ಕಂಡುಕೊಳ್ಳಿ. ಒಂದು ವೇಳೆ ನಿಮ್ಮ ಲವರ್ ನಲ್ಲಿ ಈ ಪಾಯಿಂಟ್ಸ್ ಗಳು ಕಂಡು ಬರದೆ ಇದ್ದರೆ ಅವರು ನಿಮ್ಮ ಜೊತೆ ನಿಜವಾದ ಪ್ರೀತಿಯನ್ನು ಮಾಡುತ್ತಿರುವುದಿಲ್ಲ ಎಂದು ಇಂದೇ ತಿಳಿದುಕೊಳ್ಳಿ. ಇಲ್ಲವಾದರೆ ನಿಮಗೆ ಅವರು ಬಿಟ್ಟು ಹೋದಮೇಲೆ ಅವರ ನೆನಪಿನ ನೋವು ಮುಂದೆಯೂ ಕಾಡುತ್ತದೆ. 

ಮೊದಲನೆಯದಾಗಿ ಯಾವ ಹುಡುಗಿ ಫಿಸಿಕಲ್ ರಿಲೇಶನ್ಶಿಪ್ ಪ್ರೀತಿಯಲ್ಲಿ ಇಟ್ಟುಕೊಳ್ಳುವುದಿಲ್ಲ. ಅಂತಹ ಹುಡುಗಿ ನಿಜಕ್ಕೂ ಒಳ್ಳೆಯವಳು. ಕಾರಣ ಒಂದು ಕಡೆ ಭಯ ಇರುತ್ತದೆ, ಇನ್ನೊಂದು ಕಡೆ ನೀವು ಪ್ರೀತಿ ಹೆಸರಿನಲ್ಲಿ ಆ ಕೆಲಸವನ್ನು ಮುಗಿಸಿದ್ದೆ ಆದರೆ ಆಕೆಯ ಮೇಲೆ ಆಕರ್ಷಣೆ ಕಡಿಮೆಯಾಗುತ್ತದೆ. ಅಥವಾ ಆ ಕೆಲಸ ಮುಗಿದ ತಕ್ಷಣ ಆಕೆಯನ್ನು ನಿರ್ಲಕ್ಷ ಮಾಡಿ ಆಕೆಗೆ ಮೋಸ ಮಾಡಬಹುದು ಎನ್ನುವ ಆತಂಕ ಸಹ ಆಕೆಯಲ್ಲಿ ಕಾಡುತ್ತಿರುತ್ತದೆ. ಹಾಗಾಗಿ ಅದನ್ನು ಒಪ್ಪಿಸಲು ಆಕೆ ಸಿದ್ಧವಿರುವುದಿಲ್ಲ..ಅಂತಹ  ಹುಡುಗಿಯರು ಪ್ರೀತಿಯಲ್ಲಿ ನಿಜಕ್ಕೂ ಒಳ್ಳೆಯವರು.

ಎರಡನೆಯದು ನಿಮ್ಮ ಕರಿಯರ್ ಗೆ ತುಂಬಾನೇ ಇಂಪಾರ್ಟೆಂಟ್ ಕೊಡುವವರು. ನೀವು ಮಾತನಾಡಿಸಿ ಮಾತನಾಡಿಸದೆ ಇದ್ದರೂ, ಜೊತೆಗೆ ನೀವು ಚೆನ್ನಾಗಿ ಓದದೆ, ನೌಕರಿ ಸಿಗದೇ, ಸಮಯಕ್ಕೆ ತಕ್ಕಂತೆ ಕೆಲಸ ಇಲ್ಲದೆ ಇದ್ದೂ ನೀವು ತುಂಬಾನೇ ನೋವಿಗೆ ಒಳಗಾದ ಸಂದರ್ಭದಲ್ಲಿ ಅವರು ನಿಮ್ಮಗಿಂತ ತುಸು ಮುಂದೆ ಇದ್ದರೂ ನಿಜ ಪ್ರೀತಿಗೆ ಅಂತಹ ಹುಡುಗಿಯರು ಬೆಲೆ ಕೊಡುತ್ತಾರೆ. ನಿಮಗೆ ಸದಾ ಉರ್ದುಂಬಿಸುತ್ತಾರೆ. ಅಂತಹವರು ನಿಜಕ್ಕೂ ಒಳ್ಳೆಯವರು. ಮೂರನೇದು ಏನು ಅಂದ್ರೆ, ಹೆಚ್ಚು ನಿಮ್ಮ ಜೊತೆ ಆರ್ಗುಮೆಂಟ್ಸ್ ಮಾಡದೆ ಇರುವವರು..ಒಂದು ಸಂಬಂಧದಲ್ಲಿ , ಪ್ರೀತಿ ವಿಷಯದಲ್ಲಿ ಒಂದು ವಿಷಯಕ್ಕಾಗಿ ನಿಮ್ಮಿಬ್ಬರ ನಡುವೆ ಜಗಳ ಬಂದಾಗ, ನೀವು ನನ್ನದೇ ಕರೆಕ್ಟ್ ಎಂದು ವಾದ ಮಾಡುತ್ತಿರುತ್ತಿರಿ ಅಂದುಕೊಳ್ಳಿ, ಆಗ ಆಕೆ ಅದನ್ನು ಅರ್ಥೈಸಿಕೊಂಡು, ನನ್ನದೇ ತಪ್ಪಿರಬಹುದು ಎನ್ನುವ ಮನಸ್ಥಿತಿಗೆ ಬಂದು ತಪ್ಪಲ್ಲದಿದ್ದರೂ ಆಕೆ ಒಪ್ಪಿಕೊಂಡು ಆರ್ಗುಮೆಂಟ್ ಮಾಡದೆ ಹಿಂದೆ ಸರಿದರೆ ನಿಜಕ್ಕೂ ಆಕೆ ಒಳ್ಳೆಯವಳು ಎನ್ನಲಾಗಿದೆ. ಹಾಗೇನೆ ನಿಮ್ಮ ಸಂಗಾತಿ ಕರೆಕ್ಟ್ ಇದ್ದಾಳೆ ಅಂದುಕೊಳ್.

ನಾಲ್ಕನೆಯದು ಹೆಚ್ಚು ಕ್ಷಮೆ ಕೇಳುವ ಹುಡುಗಿಯರು. ನಿಮ್ಮನ್ನು ಕಳೆದುಕೊಳ್ಳುತ್ತೇನೆ ಎನ್ನುವ ಭಯದಲ್ಲಿ ಯಾವುದೋ ಒಂದು ವಿಚಾರಕ್ಕಾಗಿ, ತಪ್ಪು ನಡೆಯದಿದ್ದರೂ ನಡೆದಿದ್ದರೂ ಕೂಡ ಹಿಂದೆ ನಡೆದ ಕೆಲವು ಘಟನೆಗಳನ್ನು ನೆನೆದು ಆಕೆ ನಾನೇ ಏನೋ ತಪ್ಪು ಮಾಡಿದೆ ಎನ್ನುವ ಅವರ ಮನಸ್ಥಿತಿ, ನಿಮ್ಮನ್ನು ಬಿಟ್ಟು ಕೊಡದೆ ಪ್ರೀತಿಗಾಗಿ ಹಂಬಲಿಸುವ ಆ ಹುಡುಗಿ ನಿಜಕ್ಕೂ ಒಳ್ಳೆಯವಳು ಆಗಿದ್ದು ಕ್ಷಮೆ ಕೇಳಲು ಸಹ ಮುಂದಾಗುತ್ತಾಳೆ. ಒಂದು ವೇಳೆ ನಿಜ ಪ್ರೀತಿ ಆಗದಿದ್ದರೆ ನಿಮ್ಮನ್ನು ನಿರ್ಲಕ್ಷ ಮಾಡುತ್ತಾಳೆ. ನಿಮ್ಮ ಮೌನಕ್ಕೆ ಬೆಲೆ ಕೊಡುವ ಹುಡುಗಿ, ನಿಮ್ಮ ಮೌನವ ಅರ್ಥ ಮಾಡಿಕೊಳ್ಳುವ ಹುಡುಗಿ ನಿಜಕ್ಕೂ ಒಳ್ಳೆಯ ಹುಡುಗಿ. ಇನ್ನು ಕೆಲವು ಸೈಕಾಲಜಿಕಲ್ ಪಾಯಿಂಟ್ಸ್ ಹುಡುಗಿರ ಬಗ್ಗೆ ಈ ಲೇಖನದ ಕೊನೆಯಲ್ಲಿರುವ ವಿಡಿಯೋದಲ್ಲಿವೆ ನೋಡಿ..ಈ ಮಾಹಿತಿ ನಿಮಗೆ ಉಪಯುಕ್ತ ಆಯ್ತು ಅಂತ ಅನ್ಸಿದ್ರೆ ತಪ್ಪದೇ ಶೇರ್ ಮಾಡಿ ಧನ್ಯವಾದಗಳು.. ( video credit : KK.TV )