ಗಂಡನ ಮನೆಗೆ ಸೊಸೆಯಾಗಿ ಹೋಗುವ ಹೆಣ್ಮಕ್ಕಳು ಯಾವ ರಾಶಿಯವರು ಅದೃಷ್ಟ ದೇವತೆ ಆಗಿರುತ್ತಾರೆ ಗೊತ್ತಾ..?

ಗಂಡನ ಮನೆಗೆ ಸೊಸೆಯಾಗಿ ಹೋಗುವ ಹೆಣ್ಮಕ್ಕಳು ಯಾವ ರಾಶಿಯವರು ಅದೃಷ್ಟ ದೇವತೆ ಆಗಿರುತ್ತಾರೆ ಗೊತ್ತಾ..?

ಈ  ಲೇಖನವನ್ನು  ನಾವು ಸಾಮಾಜಿಕ ಜಾಲ ತಾಣಗಳಲ್ಲಿ ದೊರಕುವ ಸುದ್ದಿಗಳನ್ನು ಆದರಿಸಿ ಕೊಟ್ಟಿರುತ್ತೇವೆ . ಇದು ನಮ್ಮ ಸ್ವಂತ ಅಭಿಪ್ರಾಯ ವಲ್ಲ . ಜ್ಯೋತಿಷ್ಯ ಮತ್ತು ಪಂಚಾಂಗ ನಂಬುವರು ಎಷ್ಟು ಜನ ಇದ್ದರೋ ಅಷ್ಟೇ ಜನ ನಂಬದಿರುವರು ಇದ್ದಾರೆ . ಇದು ಅವರವರ ನಂಬಿಕೆಗೆ ಬಿಟ್ಟದ್ದು  ಆದರೆ ಎಲ್ಲರಿಗೂ ಒಳ್ಳೆಯದಾಗಲಿ ಎಂದು ನಾವು ಬಯಸುತ್ತೇವೆ . ಅನ್ಯತಾ ಭಾವಿಸ ಬೇಡಿ

ಮೊದಲನೆಯದಾಗಿ ಮೇಷ ರಾಶಿ ಹೌದು ಈ ರಾಶಿಯ ಹೆಣ್ಣು ಮಕ್ಕಳು ತುಂಬಾನೇ ಶ್ರೇಷ್ಠ ಮಹಿಳೆಯರು ನಿಜ ಆಗಿರುತ್ತಾರೆ. ಒಳ್ಳೆಯ ಮನಸ್ಸನ್ನು ಹೊಂದಿರುತ್ತಾರೆ, ಈ ರಾಶಿಯ ಅಧಿಪತಿ ಮಂಗಳ ಹಾಗೂ ತುಂಬಾನೇ ಶಾಂತ ಸ್ವಭಾವದವರು ಇವರಾಗಿರುತ್ತಾರೆ. ಮೌನವಾಗಿಯೇ ಇರುವುದು ಇವರಿಗೆ ಹೆಚ್ಚು ಇಷ್ಟ. ಇವರು ಮೌನವಾಗಿ ಇದ್ದರೂ ಅವರ ಗುರಿಗೆ ಏನೇನು ಬೇಕು, ಅವೆಲ್ಲವನ್ನು ಕೂಡ ಶತಾಯಗತಯ ಪ್ರಯತ್ನ ಮಾಡಿ ಪಡೆಯಲು ಸಫಲರಾಗುತ್ತಾರೆ. ಹಾಗೆ ಆ ಪ್ರಯತ್ನವನ್ನು ಎಂದಿಗೂ ಕೂಡ ನಿಲ್ಲಿಸುವುದಿಲ್ಲ ಮೇಷ ರಾಶಿಯ ಮಹಿಳೆಯರು.

ಎರಡನೆ ರಾಶಿ ಸಿಂಹ ರಾಶಿ, ಹೌದು ಇವರು ಜೀವನದಲ್ಲಿ  ನಿರ್ಭಯದಿಂದ ಇರುತ್ತಾರೆ. ಯಾವುದೇ ಭಯ ಇವರಿಗೆ ಹೆಚ್ಚು ಇರುವುದಿಲ್ಲ. ಈ ಸಿಂಹ ರಾಶಿಯ ಮಹಿಳೆಯರು ಮಾಡುವ ಕೆಲಸದಲ್ಲಿ ನಿಧಾನಗತಿಯನ್ನ ಹೊಂದಿದ್ದಾರೆ. ನಿಧಾನ ಆದ್ರೂ ಪರವಾಗಿಲ್ಲ ಎಂದು ಹೆಚ್ಚು ಆತುರ ಪಡದೆ ಪರ್ಫೆಕ್ಟ್ ಆಗಿಯೆ ತಮ್ಮ ಕೆಲಸ ಮಾಡುತ್ತಾರೆ. ಅಚ್ಚುಕಟ್ಟಾಗಿ ತಮ್ಮ ಕೆಲಸವನ್ನು ನಿಭಾಯಿಸುತ್ತಾರೆ ಕೂಡ. ನೋಡಲು ಇವರು ಮುಗ್ದ ಸ್ವಭಾವದವರು, ಹಾಗಿದ್ದರೂ ಇವರಿಗೆ ಬಹುಬೇಗ ಕೋಪ ಬರುತ್ತದೆ. ಮುಗ್ಧರಾಗಿ ನೋಡಲು ಕಂಡು ಬಂದರೂ ಸಮಯ ಸಂದರ್ಭ ಬಂದಾಗ ಅವರಲ್ಲಿರುವ ಪ್ರತಿಭೆಯನ್ನು ಹೊರ ಹಾಕುವುದಕ್ಕೆ ಇವರು ಎಂದಿಗೂ ಹಿಂದೇಟು ಹಾಕುವುದಿಲ್ಲ ಎನ್ನಲಾಗಿದೆ.   

ಧನಸ್ಸು ರಾಶಿಯ ಹುಡುಗಿಯರು ಅಧ್ಯಯನ ಕ್ಷೇತ್ರದಲ್ಲಿ ವಿದ್ಯಾಭ್ಯಾಸದಲ್ಲಿ ತುಂಬಾನೇ ಮುಂದೆ ಇರುತ್ತಾರೆ.
ಧನಸ್ಸು ರಾಶಿಯ ಅಧಿಪತಿ ಗುರು ಆಗಿದ್ದರಿಂದ ಇವರು ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡುವ ಸಾಧ್ಯತೆ ಇರುತ್ತದೆ. ಹಾಗೆ ಪ್ರತಿ ವಿಷಯದ ಬಗ್ಗೆ ಇವರಿಗೆ ಅರಿವು ಇರುತ್ತದೆ. ವಿಮರ್ಶೆ ಮಾಡಿಯೇ ಹಂತ ಹಂತವಾಗಿ ಆ ವಿಷಯದ ಬಗ್ಗೆ ಪ್ರಸ್ತಾಪ ಮಾಡಿ ಮಾತನಾಡುವ ಕೌಶಲ್ಯ ಇವರಿಗೆ ಇರುತ್ತದೆ. ಜ್ಞಾನವ ಹೆಚ್ಚು ಹೊಂದಿದ ಮಹಿಳೆಯರು ಇವರು. ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡುವ ಮಹಿಳೆ ಆಗಿದ್ದಾರೆ. ಧನಸ್ಸು ರಾಶಿ ಮಹಿಳೆಯರು ಗಣಿತ ಶಾಸ್ತ್ರದಲ್ಲಿ ಪ್ರವೀಣರು ಆಗಿದ್ದಾರೆ. ಹಾಗೆ ಇವರದ್ದೆ ಹೆಚ್ಚು ಮೇಲುಗೈ ಇರುತ್ತದೆ ಎಂದು ಕೇಳಿಬಂದಿದೆ..

ಇನ್ನು ಮಕರ ರಾಶಿಯ ಮಹಿಳೆಯರು ತುಂಬಾನೇ ಬುದ್ಧಿಶಾಲಿಗಳು. ಇದರ ಅಧಿಪತಿ ಶನಿ. ಶನಿ ಗ್ರಹವು ಶ್ರಮದಿಂದಲೇ ಪರಿಗಣನೆ ಕಂಡಿದೆ. ಹೌದು ಈ ರಾಶಿಯ ಮಹಿಳೆಯರು ಹೆಚ್ಚು ಶ್ರಮಪಟ್ಟೆ ಕೆಲಸ ಮಾಡುತ್ತಾರೆ. ಯಾವುದರಲ್ಲಿಯೂ ಕೂಡ ಹೆಚ್ಚು ಆತುರ ಇವರಿಗೆ ಇರುವುದಿಲ್ಲ. ಗಂಡನಿಗೆ ಯಶಸ್ಸನ್ನು ತರುವ ಮಹಿಳೆರು ಇವರು. ಹೋದ ಮನೆಗೆ ಅದೃಷ್ಟದೇವತೆಯಾಗಿ ಮಕರ ರಾಶಿಯ ಮಹಿಳೆಯರು ಸಾಧನೆ ಮಾಡುವ ಹಾದಿಯಲ್ಲಿ ಒಳ್ಳೆ ಗುಣ ಲಕ್ಷಣಗಳನ್ನು ಹೊಂದಿದ್ದು, ಇವರು ತವರು ಮನೆಯಿಂದ ಗಂಡನ ಮನೆಗೆ ತಮ್ಮ ಅದೃಷ್ಟವನ್ನ ಜೊತೆಗೆ ಹೊತ್ತುಕೊಂಡು ಹೋಗ್ತಾರಂತೆ. ಕೆಲವು ಹೆಣ್ಣು ಮಕ್ಕಳು ಹುಟ್ಟಿನಿಂದಲೇ ಅದೃಷ್ಟವನ್ನು ಪಡೆದುಕೊಂಡು ಬಂದಿರುತ್ತಾರೆ. ತಮ್ಮ ತವರು ಮನೆಯಲ್ಲಿ ಆ ಅದೃಷ್ಟದ ಛಾಯೆಯಿಂದ ಇದ್ದು ತಾವು ಸೊಸೆಯಾಗಿ ಹೋಗುವ ಮನೆಯಲ್ಲೂ ಕೂಡ ಆ ಅದೃಷ್ಟವನ್ನು ತೆಗೆದುಕೊಂಡು ಹೋಗಿ ಗಂಡನ ಯಶಸ್ವಿಗೆ ಕಾರಣಭೂತರಾಗುತ್ತಾರೆ ಎಂದು ಗ್ರಂಥಗಳಲ್ಲಿ ಉಲ್ಲೇಖ ಆಗಿದೆ. ಹೌದು ನಿಮ್ಮ ಪ್ರಕಾರ ಯಾವ ರಾಶಿ ಹೆಣ್ಣು ಮಕ್ಕಳು ಹೆಚ್ಚು ಹೆಚ್ಚಾಗಿ ಅದೃಷ್ಟವಂತರು ಆಗಿರ್ತಾರೆ ಎಂದು ಕಮೆಂಟ್ ಮಾಡಿ ತಿಳಿಸಿ, ಮಾಹಿತಿ ಶೇರ್ ಮಾಡಿ ಧನ್ಯವಾದಗಳು...