ತಮ್ಮ ಮದುವೆ ಡೇಟ್ ಖಚಿತ ಪಡಿಸಿದ ತರುಣ್ ಸುಧೀರ್! ಯಾವಾಗ ಎಲ್ಲಿ ಗೊತ್ತಾ?

ತಮ್ಮ ಮದುವೆ  ಡೇಟ್  ಖಚಿತ ಪಡಿಸಿದ ತರುಣ್ ಸುಧೀರ್! ಯಾವಾಗ ಎಲ್ಲಿ ಗೊತ್ತಾ?

ನಿರ್ದೇಶಕ ತರುಣ್ ಸುಧೀರ್, ಕನ್ನಡ ಚಿತ್ರರಂಗದ ಪ್ರಮುಖ ವ್ಯಕ್ತಿಯಾಗಿದ್ದು, "ಚೌಕಾ" ಮತ್ತು "ರಾಬರ್ಟ್" ನಂತಹ ಯಶಸ್ವಿ ನಿರ್ದೇಶನಕ್ಕಾಗಿ ಹೆಸರುವಾಸಿಯಾಗಿದ್ದಾರೆ.  ಅವರು ಚಿತ್ರರಂಗದಲ್ಲಿ ಆಳವಾಗಿ ಬೇರೂರಿರುವ ಕುಟುಂಬದಿಂದ ಬಂದವರು, ತರುಣ್ ಸುಧೀರ್, ಹಿರಿಯ ನಟ ಮತ್ತು ನಿರ್ದೇಶಕ ಮಧುಸುಧನ್ ಅವರ ಪುತ್ರ. ಚಿತ್ರರಂಗದಲ್ಲಿ ಬೆಳೆದ ಅವರ ಇಚ್ಛೆ, ಕುಟುಂಬದ ಪ್ರೇರಣೆಯಿಂದಲೇ ಪ್ರಾರಂಭವಾಯಿತು. ಅವರು ತಮ್ಮ ಶಿಕ್ಷಣವನ್ನು ಬೆಂಗಳೂರುನಲ್ಲಿ ಪೂರ್ಣಗೊಳಿಸಿ, ಚಿತ್ರರಂಗದಲ್ಲಿ ತಮ್ಮದೇ ಆದ ಗುರುತನ್ನು ನಿರ್ಮಿಸಲು ಪ್ರಯತ್ನಿಸಿದರು. ತರುಣ್ ಸುಧೀರ್ ಅವರ ಇತರ ಚಿತ್ರಗಳಲ್ಲಿನ ಶ್ರಮ ಮತ್ತು ಸಮರ್ಪಣೆ ಅವರನ್ನು ಯಶಸ್ವಿ ನಿರ್ದೇಶಕರಾಗಿ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದೆ.

ನಟ ತರುಣ್ ಸುಧೀರ್ ಕೊಡ ನಮ್ಮ ಸ್ಯಾಂಡಲ್ ವುಡ್ ನಲ್ಲಿ ನಟ, ಹಾಸ್ಯ ನಟ  ,ನಿರ್ದೇಶಕ ಹಾಗೂ ನಿರ್ಮಾಪಕನಾಗಿ ಕೊಡ ಗುರುತಿಸಿಕೊಂಡಿದ್ದಾರೆ. ತರುಣ್ ಸುಧೀರ್, ತಮ್ಮ ಕಲೆಗೆ ಸಮರ್ಪಣೆಗೆ ಹೆಸರುವಾಸಿಯಾಗಿದ್ದಾರೆ, ತಮ್ಮ ವೈಯಕ್ತಿಕ ಜೀವನದಲ್ಲಿ ಸಮಯ ನೀಡದಂತೆ ತಮ್ಮ ಬಿಡುವಿಲ್ಲದ ವೇಳಾಪಟ್ಟಿಯಿಂದ ಸಮಯವನ್ನು ಲೆಕ್ಕಿಸದೆ ಕೆಲ್ಸ ಮಾಡುವ ನಿರ್ದೇಶಕರಲ್ಲಿ ಒಬ್ಬರು.  ಎಷ್ಟೆಲ್ಲ ಸಾಧನೆ ಮಾಡಿರುವ ಈ ನಟ ತಾಯಿಗೆ ಇದ್ದದ್ದು ಒಂದೇ ಚಿಂತೆ ಅದೇನೆಂದರೆ ನನ್ನ ಮಗನಿಗೆ ಇನ್ನೂ ಮದುವೆಯಾಗಿಲ್ಲ ಎಂದು ಸಾಕಷ್ಟು ಶೋ ಗಳಲ್ಲಿ ಬಹಿರಂಗವಾಗಿ ಹೇಳಿದ್ದರು. ಆದರೆ ತರುಣ್ ನನಗೆ ಮದುವೆಯಾಗಲು ಇನ್ನೂ ಮನಸ್ಸು ಬಂದಿಲ್ಲ ಎಂದು ತಳ್ಳಿದ್ದು ಉಂಟು.   

ಇನ್ನು ಆಗಾಗ ಇವರ ಮದುವೆಯ ಊಹಾಪೂಹಗಳು ಕೊಡ ಹುಟ್ಟಿಕೊಳ್ಳುತ್ತಿದ್ದವು ಆದರೆ ಅದೆಲ್ಲವೂ ಸುಳ್ಳಾಗಿತ್ತು. ಇನ್ನು ಇತ್ತೀಚಿನ ದಿನಗಳಲ್ಲಿ ನಟಿ ಸೋನಲ್ ಜೊತೆ ಇವರ ಮದುವೆ ಎಂದು ಕೊಡ ತಿಳಿಸಿದ್ದರು ಆದರೆ ಅದು ಸುಳ್ಳು ಎಂದು ಎಲ್ಲರೂ ಕೊಡ ಭಾವಿಸಿದ್ದರು ಆದರೆ ಅವರ ತಾಯಿ ಮಾದ್ಯಮಗಳ ಮುಂದೆ ಖಚಿತ ಪಡಿಸಿದ್ದರು. ಇನ್ನು ಮಹಾ ನಟಿ ವೇದಿಕೆಯ ಮೇಲೆ ಕೊಡ ತರುಣ್ ಸರಿಯಾದ ವೇದಿಕೆಯಲ್ಲಿ ನಾನು ಈ ವಿಷಯವನ್ನು ಮಾತನಾಡಲು ಇಷ್ಟ ಪಡುತ್ತೇನು ಎಂದು ಮುಂದಕ್ಕೆ ಹಾಕುತ್ತಿದ್ದರು. ಆದರೆ ನೆನ್ನೆ ಕಾಮಿಡಿ ಕಿಲಾಡುಗಳು ಪ್ರೀಮಿಯರ್ ಲೀಗ್ ನಲ್ಲಿ ಆಗಸ್ಟ್ 11ರಂದು ನಾನು ಸೋನಲ್ ಅವರು ಮದುವೆಯಾಗಿದ್ದೇವೆ ಎಂದು ಬಹಿರಂಗವಾಗಿ ತಿಳಿಸಿದ್ದಾರೆ. ಇನ್ನು ಈ ಸುದ್ದಿ ಕೇಳಿ ತರುಣ್ ಸುಧೀರ್ ಅವರ ಅಭಿಮಾನಿಗಳು ಮತ್ತು ಹಿತೈಷಿಗಳು ತಮ್ಮ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.  ( video credit : TV9 Kannada )