ಹೈಸ್ಕೂಲ್ ಹುಡುಗನ ಜೊತೆ ಟೀಚರ್ ಲವ್ವಿ ಡವ್ವಿ..! ಪಾರ್ಕ್ ನಲ್ಲಿ ಸಿಕ್ಕಿಬಿದ್ದ ಈ ಜೋಡಿಗೆ ಎಂಥಾ ಪರಿಸ್ಥಿತಿ ಬಂತು ನೋಡಿ

ಹೈಸ್ಕೂಲ್ ಹುಡುಗನ ಜೊತೆ ಟೀಚರ್ ಲವ್ವಿ ಡವ್ವಿ..! ಪಾರ್ಕ್ ನಲ್ಲಿ ಸಿಕ್ಕಿಬಿದ್ದ ಈ ಜೋಡಿಗೆ ಎಂಥಾ ಪರಿಸ್ಥಿತಿ ಬಂತು ನೋಡಿ

ಸಾಮಾನ್ಯವಾಗಿ ನಾವು ಗುರುಗಳನ್ನು ದೇವರು ಎಂದು ಕರೆಯುತ್ತೇವೆ..ಗುರುಗಳು ನಮ್ಮ ಜೀವನದ ಮುಂದಿನ ಅಡಿಪಾಯ ಆಗಿರುತ್ತಾರೆ..ಜಗತ್ತನ್ನ ತಿಳಿದುಕೊಳ್ಳುವ ಶಕ್ತಿಯನ್ನು ಬುದ್ಧಿವಂತಿಕೆಯನ್ನ ಜೊತೆಗೆ ವಿದ್ಯೆಯನ್ನು ನಮಗೆ ದಾರೆ ಎರೆಯುತ್ತಾರೆ.. ಸಣ್ಣ ಜ್ಞಾನದಿಂದ ಹಿಡಿದು ಅತಿ ದೊಡ್ಡ ಮಟ್ಟಕ್ಕೆ ಬೆಳೆಯುವಂತೆ ಗುರು ಎನ್ನುವ ದೇವರು ತುಂಬಾನೇ ಶ್ರಮಿಸುವ ಜೀವಿ. ವಿದ್ಯಾರ್ಥಿ ಜೀವನವನ್ನು ಬೆಳಗಿಸಬೇಕು ಎನ್ನುವ ನಿಟ್ಟಿನಲ್ಲಿ ಕೆಲಸ ಮಾಡುತ್ತಾರೆ ಹಲವು ಶಿಕ್ಷಕ ವೃಂದದವರು. ಹೌದು ಇದೇಲ್ಲವನ್ನು ಕೂಡ ನಾವು ನೋಡಿದ್ದೇವೆ.

ಗುರುಗಳು ಎಂದರೆ ಕೇವಲ ಗುರುಗಳು ಮಾತ್ರವಲ್ಲ, ಅದೆಷ್ಟೋ ವಿದ್ಯಾರ್ಥಿಗಳಿಗೆ ದೇವರು ಕೂಡ ಹೌದು. ಅದೇ ವಿದ್ಯಾರ್ಥಿ ಮತ್ತು ಗುರುಗಳ ನಡುವೆ ಬಾಯಲ್ಲಿ ಹೇಳದ ದೊಡ್ಡ ಅನ್ಯೂನ್ಯತೆ ಇರುವಂತದ್ದು. ಆದ್ರೆ ಕೆಲವೊಂದಿಷ್ಟು ಘಟನೆಗಳು ಯಾವ ರೀತಿ ನಮ್ಮಲ್ಲೂ ಕೂಡ ಕೆಟ್ಟ ಆಲೋಚನೆ ಬರುವಂತೆ ಮಾಡುತ್ತವೆ ಅಂದರೆ, ನಿಜಕ್ಕೂ ಈ ರೀತಿ ಘಟನೆ ನಡೆಯುತ್ತವೆಯಾ ದೇವರೇ ಎನ್ನುವ ಮಟ್ಟಕ್ಕೆ ಯೋಚನೆ ಬಂದು ಬಿಡುತ್ತದೆ. ಹೌದು ಅಸಲಿಗೆ ಅದೇನಾಯ್ತು ಅಂತೀರಾ ಮುಂದೆ ಓದಿ. ಒಬ್ಬ 10ನೇ ತರಗತಿಯಲ್ಲಿ ಓದುತ್ತಿದ್ದ ಹುಡುಗನಿಗೆ ಅದೇ ಸ್ಕೂಲಿನ ಮಹಿಳಾ ಟೀಚರ್ ಒಬ್ಬರು ಮನಸ್ಸು ಕೊಟ್ಟು ಬಿಡುತ್ತಾರೆ.     

ಆತನ ಮೇಲೆ ಕ್ರಷ್ ಆಗಿದೆ ಎಂಬಂತೆ ಹೇಳಿದ್ದು, ಆತನ ಜೊತೆ ಸಲಿಗೆ ಇಂದ ಕೂಡ ಇರುತ್ತಾಳೆ ಎಂದು ತಿಳಿದು ಬಂದಿದೆ. ಫೋನಿನಲ್ಲಿ ಇಬ್ಬರು ಸದಾ ಮಾತನಾಡುತ್ತಾ ಇದ್ದು, ಇಬ್ಬರು ಲವ್ ಮಾಡುತ್ತಿರುವುದಾಗಿ ತಮಗೆ ತಾವೇ ಅಂದುಕೊಂಡುಬಿಡುತ್ತಾರೆ.. ಟೀಚರ್ ಮೇಲೆ ಆಗ ತಾನೇ ಮೀಸೆ ಚಿಗುರುತ್ತಿದ್ದ ಹುಡುಗನಿಗೂ ಆಸೆ ಹುಟ್ಟಿ ಬಿಟ್ಟಿದೆ. ಇದರಲ್ಲಿ ಯಾರ ತಪ್ಪು ಮೊದಲು ಎಂಬುದು ಗೊತ್ತಿಲ್ಲ.. ಆದರೆ ಇದೀಗ ಇವರಿಬ್ಬರ ಲವ್ ಸ್ಟೋರಿ ಪೊಲೀಸ್ ಮೆಟ್ಟಿಲು ಏರಿದೆಯಂತೆ.

ಏನು ಅರಿಯದ ಈ 17 ವರ್ಷದ ಹುಡುಗನ ಹುಟ್ಟಿದ್ದ ಹಬ್ಬ ಮೊನ್ನೆ ಬಂದಿತ್ತು. ಆ ಬರ್ತಡೇಗೆ ಟೀಚರ್ ತನ್ನ ಬಳಿ ಕರೆಸಿಕೊಂಡು ದೇವಸ್ಥಾನಕ್ಕೆ ಹೋಗಿ ನಂತರ ಅಲ್ಲಿಂದ ಸೀದಾ ಈ ಹುಡುಗ ಟೀಚರ್ ಪಾರ್ಕ್ ಗೆ ಹೋಗಿದ್ದಾರೆ. ಅದೇ ವೇಳೆ ಟೀಚರ್ ಜೊತೆಗೇನೆ ಮುಂಚೆಯೇ ಎಂಗೇಜ್ಮೆಂಟ್ ಮಾಡಿಕೊಂಡಿದ್ದ ಆ ಯುವಕ ಸಹ ಅಲ್ಲಿ ಬಂದಿದ್ದನಂತೆ. ನಂತರ ಹುಡುಗಿಯ ಅಣ್ಣನಿಗೆ ವಿಷಯ ತಿಳಿಸಿ, 17 ವರ್ಷದ ವಿದ್ಯಾರ್ಥಿಗೆ ಚೆನ್ನಾಗಿ ಹೊಡೆದಿದ್ದಾರೆ ಎನ್ನಲಾಗಿದೆ. ನಂತರ ಮನೆಗೆ ಬಂದು ಎರಡು ದಿನದ ಬಳಿಕ ಹುಡುಗನ ಮೈ ಮೇಲೆ ಗಾಯಗಳ ಕಲೆಯ ನೋಡಿ, ಪೋಷಕರಿಗೆ ಈ ವಿಚಾರ ಗೊತ್ತಾಗಿ ಬಿಟ್ಟಿದೆ. 

ಇದೀಗ ಟೀಚರ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಆ ಹುಡುಗನ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ಇಂತಹ ಮಾಹಿತಿಯನ್ನು ನಿಜಕ್ಕೂ ಏನನ್ನಬೇಕು ನಮಗೂ ಗೊತ್ತಾಗುತ್ತಿಲ್ಲ.. ಇದರ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ, ಹಾಗೆ ತಪ್ಪದೆ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು...