ಕೊನೆಗಾಲದಲ್ಲಿ ಶ್ವೇತಾ ಚೆಂಗಪ್ಪ ಳನ್ನು ದೂರ ಮಾಡಿದ್ಯೇಕೆ ಅಪರ್ಣ ; ಇದನ್ನು ಕೇಳಿದರೆ ನಿಮಗೆ ಕಣ್ಣೀರು ಬರುತ್ತೆ

ಕೊನೆಗಾಲದಲ್ಲಿ  ಶ್ವೇತಾ ಚೆಂಗಪ್ಪ ಳನ್ನು ದೂರ ಮಾಡಿದ್ಯೇಕೆ ಅಪರ್ಣ ; ಇದನ್ನು ಕೇಳಿದರೆ ನಿಮಗೆ ಕಣ್ಣೀರು ಬರುತ್ತೆ

ಕನ್ನಡದ ಖ್ಯಾತ ನಿರೂಪಕಿ ಹಾಗೂ ನಟಿ ಅಪರ್ಣಾ ವಸ್ತಾರೆ ಇತ್ತೀಚೆಗೆ 57 ವರ್ಷ ವಯಸ್ಸಿನಲ್ಲಿ ನಿಧನರಾದರು. ಅಪರ್ಣಾ ಅವರು ಲಂಗ್ ಕ್ಯಾನ್ಸರ್ ವಿರುದ್ಧದ ಹೋರಾಟದಲ್ಲಿ ಕೊನೆಯುಸಿರೆಳೆದರು. ಅವರು `ಮಸನದ ಹೂವು' ಚಿತ್ರದಲ್ಲಿ ತಮ್ಮ ಅಭಿನಯದಿಂದ ಪ್ರಸಿದ್ಧಿ ಪಡೆದರು ಮತ್ತು 'ಮೂಡಲ ಮನೆ' ಹಾಗೂ 'ಮುಖ್ತ' ಸೇರಿದಂತೆ ಹಲವಾರು ಜನಪ್ರಿಯ ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿದ್ದರು. ಅಪರ್ಣಾ ಅವರು ಚಂದನ್ ಟಿವಿಯ ಹಲವು ಕಾರ್ಯಕ್ರಮಗಳನ್ನು ನಿರೂಪಿಸಿದ್ದರು ಹಾಗೂ `ನಮ್ಮ ಮೆಟ್ರೋ' ನಲ್ಲಿ ಕನ್ನಡ ಧ್ವನಿಯಾಗಿ ಕೂಡಾ ಜನಮೆಚ್ಚುಗೆ ಪಡೆದಿದ್ದರು. 2013ರಲ್ಲಿ ಬಿಗ್ ಬಾಸ್ ಕನ್ನಡದ ಮೊದಲ ಸೀಸನ್ ನಲ್ಲಿ ಭಾಗವಹಿಸಿ, 2015ರಲ್ಲಿ `ಮಜಾ ಟಾಕೀಸ್' ಕಾಮಿಡಿ ಶೋನಲ್ಲಿ 'ವರಲಕ್ಷ್ಮೀ' ಪಾತ್ರದಲ್ಲಿ ಕಣ್ಮಣಿಯಾಗಿದ್ದರು. 

ಅವರ ನಿಧನದ ಸಲುವಾಗಿ ಜಿ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಕಾಮಿಡಿ ಕಿಲಾಡಿಗಳು ಪ್ರೀಮಿಯರ್ ಲೀಗ್ ನ ಎಪಿಸೋಡ್ ನಲ್ಲಿ ಅವರಿಗೆ ಶ್ರದ್ಧಾಂಜಲಿ ಗೌರವ ನೀಡುವ ಸಮಯದಲ್ಲಿ ಜಗ್ಗಣ್ಣ ಅಲ್ಲಿಯ ಜಡ್ಜ್ ಗಳಿಗೆ ಅವ್ರ ಬಗ್ಗೆ ಮಾತನಾಡುವ ಅವಕಾಶ ಕೂಡ  ಕಲ್ಪಿಸಿಕೊಟ್ಟರು. ಆಗ ಎಲ್ಲರೂ ತಮ್ಮ ಜೊತೆ ಅವರ ಒಡನಾಟದ ಬಗ್ಗೆ ಮಾತನಾಡಿದರು. ಇನ್ನು ಬಹಳ ಹತ್ತಿರದಿಂದ ನೋಡಿದ ಶ್ವೇತಾ ಚಂಗಪ್ಪ ಅವರು ಅಳುತ್ತಾ ಆಕೆ ಒಂದು ಪುಟ್ಟ ಮಗುವಿನ ರೀತಿ ತನ್ನಿಂದ ಯಾರಿಗೂ ನೋವು ಮಾಡಲು ಇಷ್ಟ ಪಡುವುದಿಲ್ಲ ಇರುವೆಗೂ ಕೂಡ ನೋವಾಗದಂತೆ ನಡೆದುಕೊಳ್ಳುವ ಹೃದಯ ಶ್ರೀಮಂತಿಕೆ ಇದ್ದವರು ಅಪರ್ಣಾ. 

ನಾನು ಯಾರೊಂದಿಗೆ ಹೆಚ್ಚು ಒಡನಾಟವನ್ನು ಬೆಳೆಸಲು ಇಷ್ಟ ಪಡುವುದಿಲ್ಲ ಆದರೆ ಇವರೊಂದಿಗೆ ನಾನು ನನ್ನ ಅಕ್ಕ ತಂಗಿಯ ಬಾಂಧವ್ಯವನ್ನು ಹೊಂದಿದ್ದೆ. ಆದ್ರೆ ಅವರು ಕ್ರಮೇಣ ದೂರ ಮಾಡುತ್ತಾ ಬಂದರು. ಆ ಸಮಯದಲ್ಲಿ ಕೂಡ ಅವ್ರ ಸರ್ಪ್ರೈಸ್   ನೀಡಬೇಕೆಂದು ನಾನು ಕೂಡ  ಸುಮ್ಮನಾದೆ. ಆದರೆ ಅವರಿಗೆ ಕ್ಯಾನ್ಸರ್ ಇದೆ ಎಂದು ಗಾಳಿ ಸುದ್ದಿ ಹರಿದಾಡಲು ಶುರು ಮಾಡಿತು. ಆಗ  ಇದು ಸುಳ್ಳು ಹಾಗೆಯೇ ಅವರನ್ನು ಈ ಬಗ್ಗೆ ಹೇಗೆ ಕೇಳುವುದು ಎಂದು ನಾನು ಕೂಡ  ಕೇಳಿರಲಿಲ್ಲ. ಆದರೆ ನನಗೆ ಕರೆ ಬಂದಾಗ ತುಂಬಾ ನೋವಾಯಿತು. ಇನ್ನು ನಾನು ಅಲ್ಲಿ ಹೋದಾಗ ಅವರ ಆಪ್ತರು ನನಗೆ ಹೇಳಿದ್ದು ಅವಳನ್ನು ನಾನೇ ದೂರ ಮಾಡಿದೆ ಏಕೆಂದ್ರೆ ಅವಳು ನನಗೆ ಮಗಳ ರೀತಿ. ನಾನು ಹೋಗುತ್ತೇನೆ ಎಂದು ತಿಳಿದರೆ ತುಂಬಾ ನೋವು ಪಡ್ತಾಳೇ ಅದಕ್ಕಾಗಿ ನಾನು ಅವಳಿಂದ ದೂರ ಇದ್ದೇನೆ ಎಂದು ಭಾವುಕರಾಗಿದ್ದರು.