ಗಾಂಜಾ ಮತ್ತಿನಲ್ಲಿ ಮೈ ಮರೆತ ಕಾಲೇಜು ವಿದ್ಯಾರ್ಥಿಗಳು : ಇವರಿಗೆ ಹೇಳೋರು ಕೇಳೋರು ಯಾರು ಇಲ್ಲವ ಎಂದ ನೆಟ್ಟಿಗರು : ವಿಡಿಯೋ ವೈರಲ್
ಈಗಿನ ಯುವ ಜನಾಂಗಕ್ಕೆ ಯಾವ ನೈತಿಕತೆ ಇಲ್ಲವಾಗಿದೆ . ಅವರು ನಡೆದು ಕೊಂಡ ರೀತಿಯೇ ಸರಿ ಎನ್ನುತ್ತಾರೆ . ಇದರಲ್ಲಿ ಅವರ ಪೋಷಕರ ಪಾತ್ರವು ಇದೆ . ಅವರು ತಮ್ಮ ಮಕ್ಕಳಿಗೆ ಸರಿಯಾದ ಸಂಸ್ಕಾರ ಕಲಿಸಿದ್ದರೆ ಅವರು ಈ ರೀತಿ ನಡೆದು ಕೊಳ್ಳುತ್ತಿರ ಲಿಲ್ಲ .
ಕರ್ನಾಟಕ-ಕೇರಳ ಗಡಿ ಭಾಗದಲ್ಲಿ ಗಾಂಜಾ ಮತ್ತಲ್ಲಿ ಯುವಕ-ಯುವತಿಯರು ತೇಲಾಡಿದ್ದಾರೆ. ಮೈಸೂರಿನ ಸರಗೂರು ಸಮರೂರು ಸಮೀಪ ಗೋಳೂರಿನಲ್ಲಿ ಮಾದಕ ವಸ್ತುಗಳನ್ನು ಅಕ್ರಮವಾಗಿ ಮಾರಾಟ ಮಾಡಲಾಗ್ತಿದೆ.
ಗಾಂಜಾ ಸೇವನೆಯಿಂದ ಯುವತಿಯರು ಅರೆ ಪ್ರಜ್ಞಾವಸ್ಥೆಯಲ್ಲಿ ಬಿದ್ದು ಒದ್ದಾಡ್ಡಿದ್ದಾರೆ. ಇನ್ನು, ಗ್ರಾಮಸ್ಥರು ಪ್ರಶ್ನಿಸಲು ಹೋದ್ರೆ ಗ್ರಾಮಸ್ಥರ ಮೇಲೆಯೇ ಹಲ್ಲೆಗೆ ಯತ್ನಸಿದ್ದಾರೆ. ಇಷ್ಟೆಲ್ಲಾ ನಡೆಯುತ್ತಿದ್ದರೂ ಪೊಲೀಸರು ಕಣ್ಮಚ್ಚಿ ಕುಳಿತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಗಾಂಜಾ ಮಾರಾಟ ತಪ್ಪಿಸಿ ಅಂತಾ ಗ್ರಾಮಸ್ಥರು ಸ್ಥಳೀಯ ಆಡಳಿತಕ್ಕೆ ಮನವಿ ಮಾಡಿಕೊಂಡಿದ್ದಾರೆ.
ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಗಾಂಜಾ ಹೊಡೆದು ತೇಲಾಡಿದ ವಿಡಿಯೋ ವೈರಲ್ ಆಗ್ತಿದೆ. ಇವರಿಗೆ ಹೇಳೋರು, ಕೇಳೋರು ಯಾರು ಇಲ್ಲವೇ? ಸಾರ್ವಜನಿಕ ಸ್ಥಳಗಳಲ್ಲಿ ಈ ರೀತಿಯ ವರ್ತನೆ ಎಷ್ಟು ಸರಿ ಎಂದು ಪ್ರಶ್ನೆ ಮಾಡುತ್ತಿದ್ದಾರೆ.
( video credit : sri vijaya tv 24 )