ಮುದ್ದಾದ ಯುವತಿಯ ನೋಡಿ ಹೊಸಕೋಟೆ ಬಳಿ ರಾತ್ರಿ ಆಟೋ ನಿಲ್ಲಿಸಿದ ಚಾಲಕ..! ಮುಂದಾಗಿದ್ದು ದೊಡ್ಡ ದುರಂತ
ನಮಸ್ಕಾರ ಸ್ನೇಹಿತರೆ ಹೇಗಿದ್ದೀರಾ ಎಲ್ಲರೂ, ಚೆನ್ನಾಗಿದ್ದೀರಾ ಅಂತ ಅನ್ಕೊಂಡಿದೀವಿ. ಹೌದು ಇವತ್ತಿನ ಈ ಲೇಖನದಲ್ಲಿ ನಾವು ನಿಮಗೆ ಒಂದು ಭಯಾನಕ ವಿಚಾರದ ಬಗ್ಗೆ ಮಾಹಿತಿಯನ್ನು ತಿಳಿಸ ಹೊರಟಿದ್ದೇವೆ. ಹೌದು ದೇವರನ್ನು ಎಷ್ಟು ಜನ ನಂಬುತ್ತಾರೋ, ಅಷ್ಟೇ ಜನ ಅಲ್ಲದಿದ್ದರೂ ಸ್ವಲ್ಪ ಜನ ಈ ದೆವ್ವಗಳ ನಂಬುತ್ತಾರೆ. ಈ ಭಯಾನಕ ಪ್ರೇತಾತ್ಮಗಳನ್ನು ನಂಬುತ್ತಾರೆ.. ಜೊತೆಗೆ ದೆವ್ವ ಇದೆ ಎಂದು ಕೆಲವರು ಅನುಭವ ಹೊಂದಿದವರು ಕೂಡ ಹೇಳುತ್ತಲೆ ಬಂದಿದ್ದಾರೆ ಕೂಡ. ಆದರೆ ಕೆಲವರು ಇದನ್ನು ನಂಬುವುದು ತೀರ ಕಡಿಮೆ ಎನ್ನಬಹುದು.
ಯಾವ ದೆವ್ವಗಳು ಇಲ್ಲ, ಅವರ ಆಗಿನ ಸಮಯಕ್ಕೆ ಭಯ ಬಿದ್ದ ಕಾರಣಕ್ಕಾಗಿ ಅವರಿಗೆ ಆ ರೀತಿ ಅನುಭವ ಆಗಿರುತ್ತದೆ ಅದನ್ನೇ ಅವರು ದೆವ್ವವೆ ಅದು ನಿಜ ಎಂದು ಬಿಂಬಿಸುತ್ತಾರೆ ಎಂದು ಇನ್ನೂ ಕೆಲವರು ಹೇಳುತ್ತಾರೆ.. ಹೌದು ಬೆಂಗಳೂರಿನ ಹೊಸಕೋಟೆ ರಸ್ತೆ ಬಗ್ಗೆ ಎಲ್ಲರಿಗೂ ಗಮನ ಇದೆ ಅಂದುಕೊಂಡಿದ್ದೇವೆ..ಈ ರಸ್ತೆಯಲಿ ಆಗಾಗ ಕೆಲವರಿಗೆ ರಾತ್ರಿ ವೇಳೆ ಭಯಾನಕ ಅನುಭವ ಆಗಿದೆಯಂತೆ. ಈ ರಸ್ತೆಯಲ್ಲಿ ನಡೆದಂತಹ ಒಂದು ನೈಜ ಘಟನೆ ದೆವ್ವದ ಅನುಭವ ಘಟನೆಯನ್ನು ಈ ಲೇಖನದಲ್ಲಿ ತಿಳಿಸುತ್ತೇವೆ ಮುಂದೆ ಓದಿ.
ಹೌದು ಸುರೇಶ ಎನ್ನುವ ವ್ಯಕ್ತಿ ಆಟೋ ಚಾಲಕನಾಗಿದ್ದ. ಒಂದು ದಿನ ರಾತ್ರಿ ಸುಮಾರು 12:30 ರ ಮೇಲೆ ತನ್ನ ಮನೆಗೆ ಹೊಸಕೋಟೆ ರಸ್ತೆ ಮೂಲಕ ಹಾದು ಹೋಗುವ ಅವಶ್ಯಕತೆ ಆತನಿಗೆ ಬಂದಿತ್ತು. ಆಗ ಇದ್ದಕ್ಕಿದ್ದಂತೆ ಮುಗ್ಧ ಮತ್ತು ಸುಂದರ ಅಂದದ ಯುವತಿ ರಸ್ತೆಗೆ ಅಡ್ಡಲಾಗಿ ಗಾಡಿ ನಿಲ್ಲಿಸುವಂತೆ ಕೈ ಅಡ್ಡ ಹಾಕಿರುತ್ತಾಳೆ.. ಸುರೇಶ್ ಮೊದಲಿಗೆ ನಿಲ್ಲಿಸಬಾರದು ಎನ್ನುವ ತವಕ ಹೊಂದಿದ್ದು, ನಂತರ ನಿಲ್ಲಿಸುತ್ತಾನೆ. ಅದಾದ ನಂತರ ಅಲ್ಲಿ ನಡೆದ ಘಟನೆ ನಿಜಕ್ಕೂ ಆತ ತನ್ನ ಜೀವನದಲ್ಲಿ ಎಂದಿಗೂ ಮರೆಯುವುದಿಲ್ಲವಂತೆ.
ಅದೊಂದು ದಿನ ಆಟೋದಲ್ಲಿ ಆಂಜನೇಯನ ಮೂರ್ತಿ ಆ ಒಂದು ದೇವರ ಫೋಟೋ ಇದ್ದ ಕಾರಣಕ್ಕಾಗಿ ಆತನ ಜೀವ ಉಳಿದಿತ್ತು ಎಂದು ಆತನೇ ಹೇಳಿಕೊಂಡಿರುವುದಾಗಿ ಈ ವಿಡಿಯೋದಲ್ಲಿ ಕಂಡು ಬಂದಿದೆ. ನೀವು ಕೂಡ ಈ ವಿಡಿಯೋ ನೋಡಿ. ಅಂದು ರಾತ್ರಿ ಮಹಿಳೆ ಆಟೋ ಚಾಲಕನ ಜೊತೆ ಮಾತನಾಡಿದ ಪರಿ ಹೇಗಿತ್ತು, ಜೊತೆಗೆ ಆಕೆ ಯಾವ ರೀತಿ ಮಾತನಾಡಿಸಿ ಆತನನ್ನು ಕೆಳಗಡೆ ಇಳಿದು ಬರಲು ಕೇಳಿದಳು ಎಂದು ಎಲ್ಲವನ್ನು ವಿಡಿಯೋದಲ್ಲಿ ನೋಡಿ..ಇದು ನಿಜವೋ ಸುಳ್ಳೋ ನಮಗೂ ಗೊತ್ತಿಲ್ಲ ಆದರೆ ವಿಡಿಯೋದಲ್ಲಿ ಹೇಳಿರುವ ಪ್ರಕಾರ ಇದು ನಿಜ ಎಂದು ಹೇಳಲಾಗಿದೆ.. ವಿಡಿಯೋ ನೋಡಿ ವಿಡಿಯೋ ಶೇರ್ ಮಾಡಿ. ಜೊತೆಗೆ ಪ್ರತಿ ವಾಹನದಲ್ಲೂ ಶಕ್ತಿಯುತ ದೇವರ ಮೂರ್ತಿಯನ್ನು ಇಡಬೇಕು ಎಂದು ದೊಡ್ಡವರು ಹೇಳುವುದು ಇದಕ್ಕೆ ಅಂತ ಅನಿಸುತ್ತದೆ..ಹಾಗಾದರೆ ನಿಮಗೆ ಏನೆನಿಸುತ್ತದೆ ಕಮೆಂಟ್ ಮಾಡಿ ಧನ್ಯವಾದಗಳು... ( video credit :Srinath Naik )