ವಯಸ್ಸಾಗಿದ್ದರೂ ಇನ್ನೂ ಮದುವೆ ನಿಶ್ಚಯ ಆಗುತ್ತಿಲ್ಲ ಎಂದರೆ ಈ ಕೆಲ್ಸ ಮಾಡಿ! ಯಾವ ಪೂಜೆ ಹಾಗೂ ಹೇಗೆ ಮಾಡಬೇಕು ಗೊತ್ತಾ?

ವಯಸ್ಸಾಗಿದ್ದರೂ ಇನ್ನೂ ಮದುವೆ ನಿಶ್ಚಯ ಆಗುತ್ತಿಲ್ಲ ಎಂದರೆ ಈ ಕೆಲ್ಸ ಮಾಡಿ!  ಯಾವ ಪೂಜೆ ಹಾಗೂ ಹೇಗೆ ಮಾಡಬೇಕು ಗೊತ್ತಾ?

ಮದುವೆ ಎಂದರೆ ಪ್ರೀತಿ ಮತ್ತು ಒತ್ತಡದ ನಡುವೆ ಇರುವ ಸಂಬಂಧ ಬಲವಾಗಿ ಸ್ಥಾಪಿಸಲು ಅವಶ್ಯವಾದ ಧಾರ್ಮಿಕ ಅಥವಾ ಕ್ರಿಯಾತ್ಮಕ ಸಂಸ್ಕಾರದ ಪದ್ಧತಿ. ಇದು ಪ್ರತಿಯೊಬ್ಬ ಸಾಮಾಜಿಕ ಮತ್ತು ಸಾಂಸ್ಕೃತಿಕ ಬಗೆಗಿನ ವ್ಯವಹಾರಗಳಲ್ಲಿ ಭಿನ್ನಾಭಿಪ್ರಾಯಗಳನ್ನು ಹೊಂದಿದೆ.ಮದುವೆ ಈಗಿನ ಕಾಲದಲ್ಲಿ ಒಂದು ವೈಯಕ್ತಿಕ ಮತ್ತು ಸಾಮಾಜಿಕ ಘಟನೆಯಾಗಿದೆ. ಇದು ಎರಡು ವ್ಯಕ್ತಿಗಳು ಒಂದು ಸಂಬಂಧವನ್ನು ಧರಿಸುವ ವಿಧಾನ.  ಮದುವೆಯ ಪ್ರಾರಂಭದಲ್ಲಿ ಮತ್ತು ನಂತರದ ಕಾಲದಲ್ಲಿ ಅದು ವ್ಯಕ್ತಿಯ ಬದಲಾವಣೆ, ಬೆಳವಣಿಗೆ ಮತ್ತು ಸಂಪ್ರೀತಿಯ ಅನುಭವಗಳನ್ನು ಉಂಟುಮಾಡಬಲ್ಲದು.   

ಇಷ್ಟೆಲ್ಲಾ ಮಹತ್ವ ಹೊಂದಿರುವ ಈ ಮದುವೆ ಎಲ್ಲರಿಗೂ ಕೊಡ ಒಲಿದು ಬರುವುದಿಲ್ಲ. ಕೆಲವೊಮ್ಮೆ ಹಣ ವಿದ್ಯಾಭ್ಯಾಸ ಹಾಗೂ ಅನುಕೊಲಗಳೆಲ್ಲವು  ಇದ್ದರೂ ಕೊಡ ಮದುವೆ ತದಂಗು ಆಗುತ್ತಿರುತ್ತದೆ. ಇನ್ನೂ ಕೆಲವರಿಗೆ ನಿಶ್ಚಯ ಆದ ಮದುವೆ ಕೊಡ ಅರ್ಧಕ್ಕೆ ಕೈ ಬಿಟ್ಟು ಹೋಗುತ್ತದೆ. ಇದಕ್ಕೆಲ್ಲಾ ಜಾತಕದಲ್ಲಿ ಎಲ್ಲವು ದಾರಿ ಇದ್ದರೂ ಕೊಡ ಕೆಲ ಸಮಯ ನಕ್ಷತ್ರಗಳ ಬದಲಾವಣೆ ಅಥವಾ ದೋಷಗಳು ಕೊಡ ಕಾರಣ ಆಗಬಹುದು. ಇನ್ನೂ ನಿಮ್ಮ ಎಲ್ಲಾ ದೋಷಕ್ಕೆ ಪರಿಹಾರ ಸಿಕ್ಕಿ ನಿಮ್ಮ ಮದುವೆ ನೀವು ಇಚ್ಛೆ ಪಟ್ಟವರ ಜೊತೆ ಆಗಬೇಕು ಎಂದರೆ ನಮ್ಮ ಲೇಖನದಲ್ಲಿ ಸೂಚಿಸುವ ಈ ಕ್ರಿಯೆ ಮಾಡಿ ಸಾಕು. ಅಂದುಕೊಂಡ ಅವಧಿಯಲ್ಲಿ ನಿಮ್ಮ ಮದುವೆ ಆಗುತ್ತದೆ.

ನಿಮ್ಮ ಮನೆಯಲ್ಲಿ ಗಣಪತಿಯ ವ್ರಿಗ್ರಹ ಇದ್ದರೆ ಆ ವಿಗ್ರಹಕ್ಕೆ ಮೊದಲಿಗೆ ಹಾಲು ಶುದ್ಧ ಗಂಧ ,ಕುಂಕುಮ ಹಾಗು ಗರಿಕೆ ಬಿಳಿ ಹೂವಿನಿಂದ ಪೂಜೆ ಸಲ್ಲಿಸುತ್ತಾ ನಿಮ್ಮ ಮನದಲ್ಲಿ ಇರುವ ಆಸೆಯನ್ನು ಕೇಳಿಕೊಳ್ಳಬೇಕು. ಆ ನಂತರ ವಿಗ್ರಹದ ಮುಂದೆ  ಮದುವೆಯಾಗದ ಹುಡುಗ ಅಥವಾ ಹುಡುಗಿ ಕುಳಿತು ಒಂದು ಸ್ವಚ್ಚ ಬಿಳಿ ವಸ್ತ್ರವನ್ನು ಹರಿಷಿನ ಹಚ್ಚಬೇಕು. ಇನ್ನೂ ಆ ವಸ್ತ್ರಕ್ಕೆ ಗುಂಡು ಅಡಿಕೆ,ಬಿಳಿ ಯಕ್ಕದ ಹೂವು,ಭುಜ ಪತ್ರೆ ಯ ಮೇಲೆ ನಿಮ್ಮ ಹೆಸರು ನಕ್ಷತ್ರ ತಂದೆ ತಾಯಿಯ ಹಾಗೂ ಕುಲದೇವರ ಹೆಸರು ಬರೆದು ಹಾಕಿ. ಮರಳಿ ಮಾತಂಗಿ ಬೇರು ಅಥವ ಬಿಳಿ ಸಾಸುವೆ ಹಾಕಿ ಕಟ್ಟು ದೇವರ ಮುಂದೆ ಇಡೀ. ಕಟ್ಟಿದ ಮರುದಿನ ದಿಂದ 9ದಿನಗಳ ಕಾಲ ಗಣಪತಿಯ ದೇವಸ್ತಾನಕ್ಕೆ ಹೋಗಿ ದಾಸವಾಳ ಹೂವು ಅಥವಾ ಹಾರ ನೀಡಬೇಕು. ಅದಾದ ಬಳಿಕ ನಿಮ್ಮ ಮನೆಯಲ್ಲಿ ಬಾಲ ಗಣ ಹೋಮ ಮಾಡಿದ್ದಲ್ಲಿ ನಿಮ್ಮ ಮನೆಯಲ್ಲಿ ನೀವು ಅಂದುಕೊಂಡ ಅವಧಿಯಲ್ಲಿ ನಿಮ್ಮ ಮದುವೆ ಆಗಲಿದೆ.