ಸ್ಪಂದನ ಇಲ್ಲೆಂದು ಶ್ರೀಮುರಳಿ ಪತ್ನಿ ವಿದ್ಯಾ ಶೌರ್ಯನಿಗೆ ಮಾಡಿದ್ದೇನು..? ನಿಜಕ್ಕೂ ಗ್ರೇಟ್
ಚಂದನವನದಲ್ಲಿ ಈಗಾಗಲೇ ಸಾಕಷ್ಟು ವಿಚಾರಗಳು ಕೇಳಬಂದಿದ್ದು, ಇತ್ತೀಚಿಗೆ ಮತ್ತೆ ಕೊರೋನಾದ ನಂತರ ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್, ಹಾಗೆ ಸಂಚಾರಿ ವಿಜಯ್, ಚಿರಂಜೀವಿ ಸರ್ಜಾ ಹೀಗೆ ಒಬ್ಬರ ಹಿಂದೆ ಮತ್ತೊಬ್ಬರು ಬೇರೆ ಬೇರೆ ವಿಭಿನ್ನ ಕಾರಣಗಳಿಂದ ಸಾವನ್ನಪ್ಪಿದರು. ಜೊತೆಗೆ ಕನ್ನಡದ ಇನ್ನೂ ಕೆಲ ಹಿರಿಯ ಕಲಾವಿದರು ಕೂಡ ಸಾವನ್ನಪ್ಪಿದ್ದಾರೆ. ಇತ್ತೀಚಿಗೆ ಕನ್ನಡದ ಚಿನ್ನಾರಿ ಮುತ್ತ ಖ್ಯಾತಿಯ ನಟ ಈ ಘಟನೆಗೆ ಕಣ್ಣೀರು ಸುರಿಸಿದರು.
ಪಾರ್ವತಮ್ಮ ರಾಜಕುಮಾರ್ ಅವರ ಸಹೋದರ ಚಿನ್ನೆ ಗೌಡರ ಮಗನ ಹೆಂಡತಿ ಅಂದರೆ ಸ್ಪಂದನ ಅವರು ಹೃದಯಘಾತಕ್ಕೆ ಒಳಗಾಗಿ ಸಾವನ್ನಪ್ಪಿದರು..ಇವರ ಅಗಲಿಕೆ ನಿಜಕ್ಕೂ ಯಾರು ಕೂಡ ನಂಬಲು ಆಗಲಿಲ್ಲ.. ಈ ರೀತಿ ಸಣ್ಣ ವಯಸ್ಸಿಗೆ ಅದೇನೋ ಒಂದು ಕಾರಣ ಎಂಬಂತೆ ಆ ವಿಧಿ ಬಂದು ಇವರನ್ನು ಕರೆದುಕೊಂಡು ಹೋಯ್ತು. ಈ ಘಟನೆಯಿಂದ ಸ್ಪಂದನ ಪ್ರೀತಿಯ ಪತಿ ವಿಜಯ್ ರಾಘವೇಂದ್ರ ಅವರು ಅಕ್ಷರಶಃ ಶಾಕ್ ಗೆ ಒಳಗಾಗಿದ್ದಾರೆ. ಇದೀಗ ಹೆಂಡತಿಯನ್ನು ನೆನೆದು ದುಃಖ ಇದ್ದರೂ ಕೂಡ ಮಗನ ಮುಖ ನೋಡಿಕೊಂಡು ಜೀವನ ನಡೆಸುವಂತಹ ಪರಿಸ್ಥಿತಿ ಅವರಿಗೆ ಬಂದೊದಗಿದೆ.
ಸ್ಪಂದನ ಅವರ ಅಗಲಿಕೆ ನಂತರ ಅವರ ಎಲ್ಲಾ ವಿಧಿ ವಿಧಾನ ಕಾರ್ಯಕ್ರಮ ಮುಗಿದಿದ್ದು, ಮೊನ್ನೆಯಷ್ಟೆ ಅವರ ಪುಣ್ಯ ತಿಥಿ ಕಾರ್ಯ ಕೂಡ ಜರುಗಿದೆ. ಶೌರ್ಯ ತಾಯಿಯ ಕಳೆದುಕೊಂಡು ನೋವಿನಲ್ಲಿ ಇದ್ದಾನೆ. ಹಾಗೆ ಒಬ್ಬಂಟಿಯಾಗಿದ್ದಾನೆ, ತಂದೆಯನ್ನು ಬಿಟ್ಟು ಎಲ್ಲೂ ಸಹ ಶೌರ್ಯ ಹೋಗುತ್ತಿಲ್ಲ, ರಾತ್ರಿ ಅಪ್ಪ ರಾಘು ಜೊತೆಗೆ ಮಲಗುತ್ತಿದ್ದಾನೆ ಎನ್ನಲಾಗಿದೆ. ಹೌದು ಹೀಗಿರುವಾಗ ಶ್ರೀಮುರುಳಿಯವರ ಪತ್ನಿ ವಿದ್ಯಾ ಅವರು ಶೌರ್ಯನ ಜೊತೆಗೆ ನಿಂತುಕೊಂಡು ತನ್ನ ಮಗನಂತೆಯೇ ನೋಡಿಕೊಳ್ಳುತ್ತಿದ್ದಾರೆ, ಊಟ ಮಾಡದ ಸಮಯದಲ್ಲಿ ಒಬ್ಬನೇ ಇದ್ದು ಏನೇನೋ ಯೋಚನೆ ಮಾಡುವ ಸಮಯದಲ್ಲಿ, ವಿದ್ಯಾ ಅವರು ಜೊತೆಗೆ ನಿಂತುಕೊಂಡು ಆತನ ಯೋಗ ಕ್ಷೇಮ ನೋಡಿಕೊಳ್ಳುತ್ತಿದ್ದಾರೆ.
ತಾಯಿಯ ಅಗಲಿಕೆಯ ನೋವು ಆತನಿಗೆ ಬಾರದಿರಲಿ ಎಂದು ಹೆಚ್ಚು ಕೇರ್ ಮಾಡುತ್ತಿದ್ದಾರೆ ಶೌರ್ಯನನ್ನು ಎಂದು ಹೇಳಬಹುದು.. ಇಲ್ಲಿದೆ ನೋಡಿ ಆ ವಿಡಿಯೋ. ವಿಡಿಯೋ ನೋಡಿ, ಶೇರ್ ಮಾಡಿ ಧನ್ಯವಾದಗಳು..