ಸ್ಪಂದನ ಅವರಿಗೆ ನಿಜಕ್ಕೂ ಇಬ್ಬರು ಮಕ್ಕಳಿದ್ದಾರ..? ಏನಿದು ವಿಡಿಯೋದಲ್ಲಿ ಕಂಡು ಬಂದಿರೋದು
ದಾಂಪತ್ಯ ಜೀವನ ಅಂದರೆ ಹೀಗೆ ಮಾಡಬೇಕು ಮತ್ತು ನಾವು ಕೂಡ ಇನ್ನೊಬ್ಬರಿಗೆ ಮಾದರಿ ಆಗಬೇಕು ಎನ್ನುವಂತೆ ಜೀವನ ಮಾಡಿದವರು ರಾಘು ಹಾಗೂ ಅವರ ಪ್ರೀತಿಯ ಮಡದಿ ಸ್ಪಂದನ. ಹೌದು ವಿಜಯ ರಾಘವೇಂದ್ರ ಅವರು ಸಿನಿಮಾರಂಗದಲ್ಲಿ ಹೆಚ್ಚು ಯಶಸ್ಸು ಕಾಣದ ಇದ್ದ ವೇಳೆಯೇ ಸ್ಪಂದನ ಅವರನ್ನು ಮದುವೆ ಆಗುತ್ತಾರೆ. ವಿಜಯ ರಾಘವೇಂದ್ರ ಅವರು ಕೆಫೆ ಕಾಫಿಯಲ್ಲಿ ಮೊದಲ ಬಾರಿ ಸ್ಪಂದನ ಅವರನ್ನ ನೋಡಿದ್ದು ಮೊದಲ ನೋಟದಲ್ಲಿಯೇ ರಾಘು ಫಿದಾ ಆಗಿಬಿಡುತ್ತಾರೆ. ನಂತರ 3 ವರ್ಷದ ಬಳಿಕ ಇನ್ನೊಮ್ಮೆ ನೋಡಿದ ಮೇಲೆ ಆ ಪ್ರೀತಿ ಮತ್ತೆ ಚಿಗುರುತ್ತದೆ. ಆಗ ಪುಷ್ಠಿ ಎಂಬಂತೆ ಒಬ್ಬರನ್ನೊಬ್ಬರು ಪ್ರೀತಿ ಮಾಡುತ್ತಿದ್ದು ಮನೆಯವರ ಒಪ್ಪಿಗೆ ಪಡೆದು ಇಬ್ಬರೂ ಕೂಡ ಮದುವೆ ಆಗುತ್ತಾರೆ. ಇವರ ಜೀವನದಲ್ಲಿ ಎಲ್ಲಾ ಸರಿಯಾಗಿತ್ತು.
ಆದರೆ ಇದ್ದಕ್ಕಿದ್ದಂತೆ ವಿಜಯ ರಾಘವೇಂದ್ರ ಅವರ ಬಾಳಿನಲ್ಲಿ ಸ್ಪಂದನ ಅವರು ಮೊನ್ನೆಯಷ್ಟೇ ಇಲ್ಲವಾಗಿ ತುಂಬಾನೇ ನೋವಿಗೆ ಒಳಪಡುವಂತಾಗಿದೆ. ಇಂತಹ ಒಂದು ದಿನ ಬರುತ್ತದೆ ಎಂದು ವಿಜಯ ರಾಘವೇಂದ್ರ ಅವರು ಕೂಡ ಊಹೆ ಮಾಡಿರಲಿಲ್ಲ. ಇದೀಗ ಸ್ಪಂದನ ಅವರ ಅಕಾಲಿಕ ಮರಣದಿಂದಾಗಿ ನಟ ವಿಜಯ ರಾಘವೇಂದ್ರ ಅವರ ಇಡೀ ಕುಟುಂಬ ಕಣ್ಣೀರಿನಲ್ಲಿದ್ದು ಸ್ಪಂದನ ನೆನಪಿನಲಿ ಜೀವನ ಮಾಡುತ್ತಿದ್ದಾರೆ ಎಂದು ಹೇಳಬಹುದು. ಹೌದು ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನ ಹೆಚ್ಚಾಗಿ ಯಾವುದೇ ವಿಡಿಯೋಗಳಲ್ಲಿ ಕಾಣುತ್ತಿರಲಿಲ್ಲ, ಕೆಲ ಫೋಟೋಗಳಲ್ಲಿ ಕಾಣುತ್ತಿದ್ದರು.
ಆಗಾಗ ಕಂಡು ಬಂದ ಕೆಲವು ಸ್ಪಂದನ ಅವರು, ಒಂದು ಪುಟ್ಟ ಮಗುವನ್ನು ಎತ್ತುಕೊಂಡು ಸದಾ ಅದರ ಜೊತೆ ಸಮಯ ಕಳೆಯುತ್ತಿದ್ದರು. ರೀಲ್ಸ್ ಸಹ ಮಾಡುತ್ತಿದ್ದರು. ಆ ಮಗು ನಿಜಕ್ಕೂ ರಾಘು ಸ್ಪಂದನ ದಂಪತಿಗಳದ್ದಾ ಎನ್ನಲಾಗಿ ಕೆಲವರು ಪ್ರಶ್ನೆ ಹುಟ್ಟು ಹಾಕಿದ್ದಾರೆ. ಈ ಶೌರ್ಯನ ಜೊತೆ ಈ ಹುಡುಗಿ ಕೂಡ ರಾಘು ಸ್ಪಂದನ ದಂಪತಿಯ ಮಗು ಎಂದು ಕೆಲವರು ಹೇಳಿದ್ದರು..ಆದರೆ ಅದು ತಪ್ಪು ಕಲ್ಪನೆ, ಕಾರಣ ಸ್ಪಂದನ ಅವರ ಅಣ್ಣ ರಕ್ಷಿತ್ ಅವರ ಮಗಳು ಈ ಪುಟ್ಟ ಹುಡುಗಿ. ಆರೋರ ರಕ್ಷಿತ್ ಎಂದು. ಹೌದು ಅಣ್ಣನ ಮಗಳು ಈ ಪುಟ್ಟ ಮಗು ಆಗಿದ್ದು, ತವರು ಮನೆಗೆ ಹೋದಾಗ ಒಂದು ವಾರಗಟ್ಟಲೆ ಆ ಮಗುವಿನೊಟ್ಟಿಗೆ ಸದಾ ಸಮಯ ಕಳೆಯುತ್ತಿದ್ದಂತವರು ಸ್ಪಂದನ. ಎಲ್ಲರೂಟ್ಟಿಗೆ ತುಂಬಾನೇ ಪ್ರೀತಿಯಿಂದ ಇರುತ್ತಿದ್ದವರು ಸ್ಪಂದನ, ಇಲ್ಲಿದೆ ನೋಡಿ ವಿಡಿಯೋ...