ನನ್ನ ಅಕ್ಕನ ಸಾವಿಗೆ ನ್ಯಾಯ ಬೇಕು..! ನಾನು ಸತ್ತರೂ ಪರವಾಗಿಲ್ಲವೆಂದು ಕಣ್ಣೀರಿಟ್ಟ ಸೌಜನ್ಯ ತಂಗಿ

ನನ್ನ ಅಕ್ಕನ ಸಾವಿಗೆ ನ್ಯಾಯ ಬೇಕು..! ನಾನು ಸತ್ತರೂ ಪರವಾಗಿಲ್ಲವೆಂದು ಕಣ್ಣೀರಿಟ್ಟ ಸೌಜನ್ಯ ತಂಗಿ

ಸೌಜನ್ಯ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚು ಕಾವು ಹೆಚ್ಚುತ್ತಿದೆ. ಹೌದು ಇದೀಗ ಎಲ್ಲೆ ನೋಡಿದರೂ ಸೌಜನ್ಯ ಪ್ರಕರಣಕ್ಕೆ ಬೇರೆಬೇರೆ ತಿರುವುಗಳು ಕಂಡು ಬರುತ್ತಿದ್ದು ಹೈಕೋರ್ಟ್ ಮತ್ತು ಸಿಬಿಐ ತನಿಕಾ ವರದಿಗಳು ತನಿಖಾ ಅಧಿಕಾರಿಗಳು ಈ ಬಗ್ಗೆ ಯಾವ ಮಹತ್ತರ ಮುನ್ನಡೆ ತೆಗೆದುಕೊಂಡು ಹೋಗುತ್ತಾರೆಂದು ನಾವು ಕಾದು ನೋಡಬೇಕು. ಸೌಜನ್ಯ ಅವರ ಪ್ರಕರಣದಲ್ಲಿ ಇಷ್ಟು ದಿವಸ ಬಂದಿಯಾಗಿದ್ದ ದೇವಸ್ಥಾನದ ಅರ್ಚಕರಾದ ಸಂತೋಷ್ ರಾವ್ ಇದೀಗ ಬಿಡುಗಡೆಯಾಗಿದ್ದಾರೆ. ಅದು ಯಾವುದೇ ಸಾಕ್ಷಿ ಆಧಾರಗಳು ಸಿಗದೇ ಇರುವ ಕಾರಣದಿಂದ ಮಾತ್ರವೆ ಎಂದು ತಿಳಿದುಬಂದಿದೆ.

ಆದರೆ ಸೌಜನ್ಯ ಪ್ರಕರಣಕ್ಕೆ ಸೌಜನ್ಯ ಸಾವಿಗೆ ನ್ಯಾಯ ಇನ್ನೂ ಏನು ದೊರಕಿಲ್ಲ. ನಿಜವಾದ ಆರೋಪಿ ಯಾರು ಎಂಬುದಾಗಿ ಇನ್ನೂ ಕೂಡ ಗೌಪ್ಯವಾಗಿಯೇ ಉಳಿದಿದೆ ಎಂದು ಹೇಳಲು ಕಷ್ಟ ಆಗುತ್ತಿದೆ ಎನ್ನುತ್ತಾರೆ ರಾಜ್ಯದ ಜನತೆ. ಇದೀಗ ಈ ವಿಚಾರ ಹೆಚ್ಚು ಚರ್ಚೆ ಆಗುತ್ತಿದ್ದು ಧರ್ಮಸ್ಥಳದ ಹೆಸರನ್ನು ಹಾಳು ಮಾಡಲು ಕೆಲವರು ಹೀಗೆ ಮಾಡುತ್ತಿದ್ದಾರೆ ಎಂದು ಧರ್ಮಾಧಿಕಾರಿಗಳಾದ ವೀರೇಂದ್ರ ಹೆಗಡೆಯವರು ಕೋರ್ಟ್ ಇಂದ ಸ್ಟೇ ಆರ್ಡರ್ ಕಾಪಿ ತಂದಿದ್ದರು. ಅವರ ವಿರುದ್ಧ ಯಾವುದೇ ಪೋಸ್ಟ್ಗಳನ್ನು ಹರಿ ಬಿಡದಂತೆ ತಡೆಯಾಗ್ನೇ ತಂದಿದ್ದರು. ಹೌದು ಇದೀಗ ಇನ್ನೊಂದು ಕಡೆ ಸೌಜನ್ಯ ಮನೆಯವರು ಸೌಜನ್ಯ ಸಾವಿಗೆ ನ್ಯಾಯ ಸಿಗಬೇಕು ಎಂಬುದಾಗಿ ಹೋರಾಟ ಮಾಡುತ್ತಿದ್ದಾರೆ. 

ಸೌಜನ್ಯ ತಂಗಿ ತಮ್ಮ ಮತ್ತು ಅವರ ತಾಯಿ ಎಲ್ಲರೂ ಕೂಡ ಸೌಜನ್ಯ ಸಾವಿಗೆ ಕಾರಣರಾದವರು ಯಾರು ಎಂಬುದಾಗಿ ನಮಗೆ ಗೊತ್ತಾಗಬೇಕು, ನಮಗೆ ನಮ್ಮ ಅಕ್ಕ ಸೌಜನ್ಯ ಸಾವಿಗೆ ನ್ಯಾಯ ಸಿಗಬೇಕು ಎಂದು ಹೋರಾಟ ಮಾಡುತ್ತಿದ್ದಾರೆ.. ಆದ್ರೆ ಹೀಗಿರುವಾಗ ಧರ್ಮಸ್ಥಳದ ಹೆಸರನ್ನು ಹಾಳು ಮಾಡುವುದಕ್ಕೆ ಈ ರೀತಿ ಮಾಡುತ್ತಿದ್ದಾರೆ ಎಂಬುದಾಗಿ ಕೆಲವರು ಹೇಳುತ್ತಿದ್ದಾರೆ ಎಂದು ಸೌಜನ್ಯ ತಂಗಿಯವರಿಗೆ ಪ್ರಶ್ನೆ ಮಾಡಿದಾಗ, ನಾವು ಧರ್ಮಸ್ಥಳದಲ್ಲಿ ಇರುವುದೇ ತಪ್ಪಾ, ಧರ್ಮಸ್ಥಳದಲ್ಲಿ ಈ ಘಟನೆ ನಡೆದಿದೆ ಅಂದ ಮೇಲೆ ನಾವು ಧರ್ಮಸ್ಥಳದ ಹೆಸರನ್ನು ಹೇಳುತ್ತಿದ್ದೇವೆ ಅಷ್ಟೇ, ಅದರಲ್ಲಿ ತಪ್ಪೇನಿದೆ.

ನಾವು ಗಲಾಟೆ ಮಾಡುತ್ತಿಲ್ಲ ಬದಲಿಗೆ ನನ್ನ ಅಕ್ಕನ ಸಾವಿಗೆ ನ್ಯಾಯ ಕೇಳುತ್ತಿದ್ದೆವೆ. ನ್ಯಾಯ ಕೇಳಿದರೆ ನನ್ನ ತಮ್ಮನ ಕಾಲರ್ ಹಿಡಿದು ಎಳೆದಾಡುತ್ತಿದ್ದಾರೆ..ಹಾಗೆ ನನ್ನ ತಾಯಿಯನ್ನು ಸ್ಟೇಜ್ ಮೇಲೆ ಹತ್ತಲು ಬಿಡುತ್ತಿಲ್ಲ.. ನನ್ನ ಅಕ್ಕನನ್ನು ಹೇಗೆ ಕೊಂದಿದ್ದರು ಎಂಬುದಾಗಿ ಫೋಟೋದಲ್ಲಿ ನಾನು ನೋಡಿದ್ದೇನೆ ಸರ್, ಅವರ ಮನೆಯಲ್ಲಿ ಅಕ್ಕ ತಂಗಿಯರು ಇಲ್ವಾ, ನಾವು ಕೇವಲ ನ್ಯಾಯವನ್ನು ಕೇಳುತ್ತಿದ್ದೇವೆ, ನಮಗೆ ನ್ಯಾಯ ಬೇಕು ನಮ್ಮ ಪ್ರಾಣ ಹೋದರೂ ಕೂಡ ಬಿಡುವುದಿಲ್ಲ, ಈ ವಿಚಾರವಾಗಿ ಸಿಎಂ ಅವರ ಬಳಿ ನಮ್ಮ ಮನವಿಯನ್ನು ಮಾಡಿದ್ದೇವೆ, ಅಣ್ಣಪ್ಪ ಸ್ವಾಮಿ ಮತ್ತು ಧರ್ಮಸ್ಥಳದ ಮಂಜುನಾಥಸ್ವಾಮಿ ಜೊತೆಗೆ ನಮ್ಮ ದೈವದ ಮೇಲೆ ನಮಗೆ ನಂಬಿಕೆ ಇದೆ, ನಮಗೆ ಧರ್ಮದ ದಾರಿಯಲ್ಲಿ ಹೋದರೆ ಖಂಡಿತ ನ್ಯಾಯ ಸಿಗುತ್ತದೆ ಎಂದು ಕಣ್ಣೀರು ಹಾಕಿದರು..

ಸೌಜನ್ಯ ಅವರ ತಂಗಿಯ ಮಾತಿನ ವಿಡಿಯೋ ಇಲ್ಲಿದೆ ನೋಡಿ. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ, ಆದಷ್ಟು ಬೇಗನೆ ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳು ಯಾರು ಎಂಬುದಾಗಿ ಹೆಚ್ಚು ತನಿಖೆ ನಡೆಸಲೆಂದು ನೀವು ಕೂಡ ಸರ್ಕಾರಕ್ಕೆ ಕಮೆಂಟ್ ಮೂಲಕ ಆಗ್ರಹಿಸಿ, ಹಾಗೇನೇ ಈ ವಿಡಿಯೋ ಶೇರ್ ಮಾಡಿ ಧನ್ಯವಾದಗಳು..

VIDEO CREDIT : NEWS 18 KANNADA