ಸೌಜನ್ಯ ಸಾವಿನ ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟ ಸೌಜನ್ಯ ತಾಯಿ! ಆ ಹೇಳಿಕೆ ಏನು ಗೊತ್ತಾ?

ಸೌಜನ್ಯ ಸಾವಿನ ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟ ಸೌಜನ್ಯ  ತಾಯಿ! ಆ ಹೇಳಿಕೆ ಏನು ಗೊತ್ತಾ?

ಈಗ ಕರ್ನಾಟಕದಲ್ಲಿ ಭಾರಿ ಚರ್ಚೆಗೆ ಕಾರಣವಾಗಿರುವ ವಿಚಾರ ಎಂದ್ರೆ ಅದು "#ಜಸ್ಟಿಸ್ ಫಾರ್ ಸೌಜನ್ಯ". ಇನ್ನೂ ಈ ಕೇಸ್ ತೆರೆದು ದಶಕಗಳೇ ಕಳೆದಿದ್ದರೂ ಕೂಡ ಇಂದಿಗೂ ದಿನಕ್ಕೊಂದು ತಿರುವು ಪಡೆಯುತ್ತಲೆ ಬಂದಿದೆ. ಹಾಗಾಗಿ ನಾವು ಈ ಕೇಸ್ ನ ಬಗ್ಗೆ ಹೊಸದಾಗಿ  ತಿಳಿಸ ಬೇಕಿಲ್ಲ. ಆದ್ರೆ ನಮ್ಮ ಸಮಾಜದಲ್ಲಿ ಬದುಕುತ್ತಿರುವ ಕ್ರೂರಿ ಗಳಿಂದ ಸತ್ಯ ನಾಶವಾಗುತ್ತಾ ಕೇವಲ ಸುಳ್ಳು ಹಾಗೂ ತಟವಟ ಗಳಿಗೆ ಹೆಚ್ಚಿನ ಆದ್ಯತೆ ಕೊಡ ಹೆಚ್ಚಾಗಿದೆ. ಈಗಂತೂ ಹಣ ಇದ್ದಾರೆ ನ್ಯಾಯ ಯಾರ ಕಡೆಗೆ ಬೇಕಾದರೂ ಪಡೆಯುವಂತಹ ಕಾಲದಲ್ಲಿ ನಾವು ಬದುಕುತ್ತಿದ್ದೇವೆ ಎಂದ್ರೆ ತಪ್ಪಾಗಲಾರದು. ಇದೀಗ ಇದಕ್ಕೆ ಸೌಜನ್ಯ ಅವರ ಕೇಸ್ ದೊಡ್ಡ ಉಧಹರಣೆಯಾಗಿ ನಿಂತಿದೆ.

ಇನ್ನೂ "ಸೌಜನ್ಯ" ಅವರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದ ಬಳಿಯ ಉಜಿರೆಯಲ್ಲಿರುವ ಒಬ್ಬ ಯುವತಿ. ಈ ಯುವತಿ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ಓದುತ್ತಿದ್ದಳು. ಹೀಗೆ ಪ್ರತಿಭಾನ್ವಿತ ಹಾಗೂ ಸನ್ನಡತೆಯ ಈ ಯುವತಿ ಇದೆ ಅಕ್ಟೋಬರ್ 9, 2012 ರಲ್ಲಿ  ತನ್ನ ಮನೆಗೆ ಹೋಗುತ್ತಿದ್ದ ವೇಳೆಯಲ್ಲಿ ಅಪಹರಣಕ್ಕೊಳಗಾಗಿದ್ದಳು. ಮನೆಗೆ ಬಾರದ ಮಗಳ ಬಗ್ಗೆ ದೂರು ನೀಡಿದ ಪೋಷಕರಿಗೆ  ಮರುದಿನ ಆಕೆಯ ಶವವು ನೇತ್ರಾವತಿ ನದಿಯ ಬಳಿ  ಆಕೆಯ ಮನೆಯ ಸಮೀಪವೆ ಪತ್ತೆಯಾಗಿದೆ.

ಇನ್ನೂ ಆ ಮೃತದೇಹ ಪೊಲೀಸರು ತಿಳಿಸಿರುವ ಹಾಗೇ  ಅರೆಬೆತ್ತಲೆಯ ಸ್ಥಿತಿಯಲ್ಲಿ ಪತ್ತೆಯಾಗಿದೆ. ಇನ್ನೂ ಅವಳ ಒಂದು ಕೈಯನ್ನು ಅವಳೇ ಧರಿಸಿದ್ದ ದುಪಟ್ಟಾದಿಂದ ಮರಕ್ಕೆ ಕಟ್ಟಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ಆ ಸಂಧರ್ಭದಲ್ಲಿ ಹೆಚ್ಚಿನ ರಾಜಕಾರಣಿಗಳ ಒತ್ತಡ ಇದ್ದ ಕಾರಣ ಅಲ್ಲಿಗೆ ತನಿಖಾಧಿಕಾರಿಗಳು ಹಾಗೂ ಮರಣೋತ್ತರ ಪರೀಕ್ಷೆ ನಡೆಸಲು ಆಗಿರಲಿಲ್ಲ. ಅಂತ್ಯದಲ್ಲಿ ಇದೆ ಆತ್ಮಹತ್ಯೆ ಎಂದು ಕೇಸ್ ಮುಚ್ಚಲಾಗಿತ್ತು. 

ಆದರೆ ಅವರ ಮನೆಯವರ ಒತ್ತಡಕ್ಕೆ ತನಿಖೆ ಶುರು ಮಾಡಿದ ಬಳಿಕ. ಆ ಹುಡುಗಿ ಮನೆಗೆ ಹೋಗುತ್ತಿದ್ದನು ಪ್ರತ್ಯಕ್ಷವಾಗಿ ಕಂಡ "ರವಿ ಪೂಜಾರಿ"  ಅವರು ಹೇಳಿಕೆ ನೀಡಿದ್ದರು. ಆದರೆ ಕೆಲ ದಿನಗಳ ಬಳಿಕ ರವಿ ಪೂಜಾರಿ ಅವರು ಕೂಡ ಅನುಮಾನಸ್ಪದವಾಗಿ ಮರಣವನ್ನು ಹೊಂದುತ್ತಾರೆ. ಹೀಗೆ ಸಿಬಿಐ ಕೈ ಸೇರಿದ ಈ ಪ್ರಕರಣಗಳಿಗೆ ಆರೋಪಿಗಳಾಗಿ ಅಕ್ಟೋಬರ್ 11 ರಂದು "ಸಂತೋಷ್ ರಾವ್" ಎನ್ನುವ ಯುವಕನನ್ನು ಬಂಧಿಸಿದರು. ಈತ ಸೌಜನ್ಯ ಳನ್ನು ಅತ್ಯಾಚಾರ ಮಾಡಿ ಕೊಂದಿದ್ದಾನೆ ಎಂದು ವರದಿ ಮಾಡಿದರೇ ಇತ್ತಾ  "ಧರ್ಮಸ್ಥಳ ಟ್ರಸ್ಟ್‌"ನ ಅಕೌಂಟೆಂಟ್ "ಮಲಿಕ್ ಜೈನ್" , ಅನ್ನಪೂರ್ಣ ಟ್ರಸ್ಟ್‌ನ ಹಿರಿಯ ವ್ಯವಸ್ಥಾಪಕರ ಪುತ್ರ "ಧೀರಜ್" ಮತ್ತು ರಾಜ್ಯಸಭಾ ಸದಸ್ಯ "ಡಿ.ವೀರೇಂದ್ರ ಹೆಗ್ಗಡೆ" ಅವರ ಸೋದರಳಿಯ "ನಿಶ್ಚಲ್ ಜೈನ್" ವಿರುದ್ಧ ಪ್ರತಿಭಟನಾಕಾರರು ಮತ್ತು ಸೌಜನ್ಯ ಅವರ ಕುಟುಂಬಸ್ಥರು ಆರೋಪ ಮಾಡಿದ್ದಾರೆ.

ಆದ್ರೆ ಸಾಕ್ಷಿಗಳ ಕೊರತೆಯ ಕಾರಣ ಈ ಮೂವರನ್ನು ವಿಚಾರಣೆ ಮಾಡಿ ಬಿಡುಗಡೆ ಮಾಡಲಾಗಿದೆ. ಇನ್ನೂ 2012 ರಲ್ಲಿ ವರದಿ ಆಗಿರುವ ಈ ಪ್ರಕರಣ ಇಂದಿಗೂ ಪ್ರತಿಭಟನೆ ಮಾಡುವ ಮೂಲಕ ನಡೆಸುತ್ತಾ ಬಂದಿದ್ದಾರೆ. ಇನ್ನೂ ನಿನ್ನೆ ನಡೆದ ಒಂದು ಪ್ರತಿಭಟನೆ ಸಮಾರಂಭದಲ್ಲಿ ಸಾಜನ್ಯ ಅವರ ತಾಯಿ ನನ್ನ ಮಗಳು ಸಾಯುವ ವೇಳೆಯಲ್ಲಿ ಎಷ್ಟು ಬಾರಿ ಅಮ್ಮ ಅಮ್ಮ ಎಂದು ಕೋಗಿದ್ದಾಲೋ ಎಂದು ತಮ್ಮ ನೋವನ್ನು ಹೊರಹಾಕಿದ್ದಾರೆ. ಆದರೆ ಇಂದಿಗೂ ಕೊಡ ಅವರ ಸಾವಿಗೆ ಸೂಕ್ತ ಕಾರಣ ಕೊಡ ಸಿಗದೆ ಇರುವುದು ಒಂದು ದೊಡ್ಡ ದುರಂತ ಎಂದರೆ ತಪ್ಪಾಗಲಾರದು  ( video credit : third eye )