ಕಿರಿಕ್ ಬೆಡಗಿ ಸಂಯುಕ್ತ ವಿಡಿಯೋ ನೋಡಿ ದೊಡ್ಡ ಚಡ್ಡಿ ಹಾಕೋಕೆ ಬರಲ್ವಾ ಎಂದ ನೆಟ್ಟಿಗರು..!

ಕಿರಿಕ್ ಬೆಡಗಿ ಸಂಯುಕ್ತ ವಿಡಿಯೋ ನೋಡಿ ದೊಡ್ಡ ಚಡ್ಡಿ ಹಾಕೋಕೆ ಬರಲ್ವಾ ಎಂದ ನೆಟ್ಟಿಗರು..!

ರಕ್ಷಿತ್ ಶೆಟ್ಟಿ ಅಭಿನಯದ ನಿರ್ದೇಶಕ ರಿಷಬ್ ಶೆಟ್ಟಿ ಮಾಡಿದಂತಹ ಕಿರಿಕ್ ಪಾರ್ಟಿ ಸಿನಿಮಾ ಯಾವ ರೀತಿ ಯಶಸ್ಸನ್ನು ಕಂಡಿತ್ತು ಎಂಬುದು ಈಗಾಗಲೇ ಎಲ್ಲರಿಗೂ ಗೊತ್ತಿದೆ. ಹೌದು ಈ ಸಿನಿಮಾ ಮೂಲಕವೇ ರಶ್ಮಿಕ ಮಂದಣ್ಣ ಅವರು ತುಂಬಾನೇ ಪ್ರಸಿದ್ಧಿ ಪಡೆದರು. ಇವರ ಜೊತೆಗೆ ಕರ್ನಾಟಕದ ಮನೆ ಮಾತಾಗಿ ಇನ್ನೊಬ್ಬ ನಟಿ ಸಹ ಗಮನ ಸೆಳೆದಿದ್ದರು. ಈ ಸಿನಿಮಾ ಬಿಡುಗಡೆ ಆದ ಮೇಲೆ ಹೆಚ್ಚು ಪ್ರಖ್ಯಾತಿ ಹೊಂದಿದ್ದರು.. ಅವರೇ ನಟಿ ಸಂಯುಕ್ತ ಹೆಗಡೆ.. ನಟಿ ಸಂಯುಕ್ತ ಹೆಗಡೆ ಈ ಚಿತ್ರದಲ್ಲಿ ರಗಡ್ ಆಗಿ ಅಭಿನಯ ಮಾಡುತ್ತಾ ಮೆಕ್ಯಾನಿಕಲ್ ಹುಡುಗರಿಗೆ ಪ್ರೋತ್ಸಾಹ ನೀಡಿದ್ದನ್ನು ನೋಡಿ ಸಂಯುಕ್ತ ಹೆಗಡೆ ತುಂಬಾನೇ ದೊಡ್ಡ ನಟಿಯಾಗಿ ಬೆಳೆಯುತ್ತಾರೆ ಎಂದು ಅಂದು ಕೆಲವರು ಅಂದುಕೊಂಡಿದ್ದರು.  

ಆದರೆ ತದನಂತರದ ದಿನಗಳಲ್ಲಿ ಬೇರೆ ಬೇರೆ ಟಿವಿ ಕಾರ್ಯಕ್ರಮಗಳಿಗೆ ನಟಿ ಸಂಯುಕ್ತ ಹೆಗಡೆ ಹೋಗಿದ್ದು ತುಂಬಾನೇ ಟ್ರೋಲ್ ಆದರು. ಕೆಲವೊಂದಿಷ್ಟು ವಿಚಾರಗಳಿಗೆ ಸುದ್ದಿ ಆಗಿದ್ದರು. ನಟಿ ಸಂಯುಕ್ತ ಹೆಗಡೆ ಡಾನ್ಸ್ ಮಾಡುವಾಗ ಮೈಮೇಲೆ ಬಟ್ಟೆ ಹೆಚ್ಚು ಇರುವುದೇ ಇಲ್ಲ ಎಂದು ನೆಟ್ಟಿಗರು ಆಗಾಗ ಹೇಳುತ್ತಲೆ  ಬಂದಿರುವುದನ್ನ ನಾವು ನೀವು ಆಗಾಗ ಗಮನಿಸಿದ್ದೇವೆ. ಅದರಂತೆ ಇದೀಗ ಮತ್ತೊಂದು ವಿಡಿಯೋದಲ್ಲಿ ಕಂಡು ಬಂದಿದ್ದು ಬಿಗ್ ಬಾಸ್ ಮನೆಯಲ್ಲಿ ಕಾಣಿಸಿದ ಕಿಶನ್ ಜೊತೆ ಸಕತ್ತಾಗಿ ಹೆಜ್ಜೆ ಹಾಕಿದ್ದಾರೆ ಹೆಗಡೆ. ಹೌದು ಇದು ನೋಡಲು ತುಂಬಾ ಮುದ್ದಾಗಿಯೇ ಇದೆ..

ಆದರೂ ನೆಟ್ಟಿಗರು ಅವರ ಮೈ ಮೇಲೆ ಬಟ್ಟೆಗಳನ್ನು ನೋಡಿ ಇನ್ನೂ ಹತ್ತು ರೂಪಾಯಿ ಕೊಟ್ಟಿದ್ದರೆ ಒಳ್ಳೆ ಒಳ್ಳೆಯ ಬಟ್ಟೆ ಸಿಗುತ್ತಿತ್ತು ಎಂದು ತುಂಬಾ ಕೆಟ್ಟದಾಗಿ ಕಮೆಂಟ್ ಮಾಡಿದ್ದಾರೆ.. ಕೆಲವರು ಇದು ಯಾವ ರೀತಿ ಡಾನ್ಸ್ ಮಾರಾಯ, ಆ ಹುಡುಗಿಗೆ ಸರಿಯಾಗಿ ಮೊದಲು ಬಟ್ಟೆ ಹಾಕಿಕೊಳ್ಳಲು ಹೇಳಿ ಎಂದು ಇನ್ನೂ ಕೆಲವರು ಬುದ್ಧಿ ಮಾತು ತಿಳಿಸಿದ್ದಾರೆ..ಸಂಯುಕ್ತ ಹೆಗಡೆ ಅಸಲಿಗೆ ಡಾನ್ಸ್ ಇಷ್ಟಪಡುವುದು ಸರಿಯೇ, ಆದರೆ ಈ ರೀತಿ ಇನ್ನೊಬ್ಬರಿಗೆ ಕಿರಿಕಿರಿ ಉಂಟು ಮಾಡುವ ರೀತಿ ಬಟ್ಟೆ ತೊಡುವುದು ಸರಿಯಲ್ಲ ಎಂದು ಇನ್ನೂ ಕೆಲವರ ವಾದ.  ಇಲ್ಲಿದೆ ನೋಡಿ ಆ ವಿಡಿಯೋ, ನೀವು ಈ ವಿಡಿಯೋ ನೋಡಿದ ಬಳಿಕ ಸಂಯುಕ್ತ ಹೆಗಡೆ, ಹಾಗೂ ಕಿಶನ್ ಮಾಡಿರುವ ಈ ಡಾನ್ಸ್ ಹೇಗಿದೆ ಎಂದು ಕಮೆಂಟ್ ಮಾಡಿ.. ಜೊತೆಗೆ ಈ ರೀತಿ ಬಟ್ಟೆ ತೊಡುವ ವಿಷಯಕ್ಕೆ ಸುದ್ದಿಯಾಗಿರುವ ಸಂಯುಕ್ತ ಹೆಗಡೆ ಬಗ್ಗೆ , ಈ ಡ್ಯಾನ್ಸ್ ಬಗ್ಗೆ ನಿಮ್ಮದೇ ಆದ ಅನಿಸಿಕೆಯನ್ನು ಕೂಡ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಬಹುದು, ಧನ್ಯವಾದಗಳು..