ಸಿಂಹ ರಾಶಿಯವರು ಯಾವ ರಾಶಿಯವರನ್ನ ಮದುವೆಯಾದ್ರೆ ಜೀವನ ಹಾಲು ಜೇನಿನಂತಿರುತ್ತೆ ?

ಸಿಂಹ ರಾಶಿಯವರು ಯಾವ ರಾಶಿಯವರನ್ನ ಮದುವೆಯಾದ್ರೆ ಜೀವನ ಹಾಲು ಜೇನಿನಂತಿರುತ್ತೆ ?

ನಮ್ಮ ರಾಶಿಯ ಮೂಲಕ ನಾವು ಮದುವೆಯಾಗುವ ಅಥವಾ ಪ್ರೀತಿಸುವ, ಪ್ರೀತಿ ಮಾಡಬೇಕು ಎಂದುಕೊಂಡಿರುವ ವ್ಯಕ್ತಿಯೊಂದಿಗೆ ನಾವು ಹೊಂದಿಕೊಳ್ಳುತ್ತೇವೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಬಹುದು. ಸರಿ ಈ ಲೇಖನದಲ್ಲಿ ಯಾವ ರಾಶಿಯವರಿಗೆ ಯಾವ ರಾಶಿಯವರು ಬೆಸ್ಟ್‌ ಜೋಡಿ ಎಂಬುದನ್ನು ತಿಳಿದುಕೊಳ್ಳೋಣ.

ಜಾತಕ(Horoscope) ಎಂಬುದು ವ್ಯಕ್ತಿಯ ವ್ಯಕ್ತಿತ್ವ ಹಾಗೂ ಭವಿಷ್ಯದ ಕುರಿತ ಜ್ಯೋತಿಷ್ಯ ದಾಖಲೆಯಾಗಿದೆ. ಇಬ್ಬರು ವ್ಯಕ್ತಿಗಳ ಜಾತಕದ ಹೊಂದಾಣಿಕೆಯು ಅವರ ಜೀವನ, ಸಂಬಂಧದ ಸುಮಧುರತೆಯನ್ನು ಲೆಕ್ಕ ಹಾಕುತ್ತದೆ. ಎಲ್ಲ ಸ್ವಭಾವದವರು ಎಲ್ಲರಿಗೂ ಇಷ್ಟವಾಗುವುದಿಲ್ಲ. ಆದರೆ ಕೆಲ ಸ್ವಭಾವದವರು ಕೆಲವರಿಗೆ ತುಂಬಾ ಚೆನ್ನಾಗಿ ಹಿಡಿಸುತ್ತಾರೆ. ಆ ಆಧಾರದ ಮೇಲೆ ಜ್ಯೋತಿಷ್ಯದಲ್ಲಿ ಜಾತಕ ಹೊಂದಾಣಿಕೆ ನೋಡಲಾಗುತ್ತದೆ. ಇದರಲ್ಲಿ ಪ್ರಮುಖವಾಗಿ ನೋಡುವುದು ರಾಶಿಚಕ್ರ(zodiac)ಗಳ ಹೊಂದಾಣಿಕೆ. ಯಾವ ರಾಶಿಗೆ ಯಾವ ರಾಶಿಗಳು ಹೊಂದುತ್ತವೆ ನೋಡೋಣ.

ಗಂಡ-ಹೆಂಡತಿಯಾಗಿರಲಿ, ಪ್ರೇಮಿಗಳಾಗಿರಲಿ ಯಾವುದೇ ಪ್ರಣಯ ಸಂಬಂಧ ಉತ್ತಮ ರೀತಿಯಲ್ಲಿ ಮುಂದುವರಿಯಬೇಕು ಅಂದ್ರೆ ಪ್ರೀತಿ, ನಂಬಿಕೆ, ವಿಶ್ವಾಸ ಹಾಗೂ ಹೊಂದಾಣಿಕೆ ಬಹಳ ಮುಖ್ಯ. ಗಂಡು ಹೆಣ್ಣು ಒಬ್ಬರಿಗೆ ಒಬ್ಬರು ಆಕರ್ಷಿತರಾದರೂ ಸಂಬಂಧ ಉಳಿಯಲು ಸಾಕಷ್ಟು ತಿಳುವಳಿಕೆ ಬೇಕು. ಜೊತೆಗೆ ನಮ್ಮ ಗುಣ, ವರ್ತನೆಗಳು ನಾವು ಪ್ರೀತಿಸುವ ಅಥವಾ ಮದುವೆಯಾಗಲು ಬಯಸುವ ವ್ಯಕ್ತಿಯೊಂದಿಗೆ ಹೊಂದಾಣಿಕೆಯಾಗಬೇಕು. ನಮ್ಮ ವ್ಯಕ್ತಿತ್ವದ ಆಧಾರದ ಮೇಲೆ ನಮಗೆ ಯಾರು ಹೊಂದಿಕೆಯಾಗುತ್ತಾರೆ ಎಂದು ನಿರ್ಧರಿಸಲಾಗುತ್ತದೆ. ಹೀಗೆ ಜೋಡಿ ಹೊಂದಾಣಿಕೆ ತಿಳಿಯಲು ಇರುವ ಇನ್ನೊಂದು ಮಾರ್ಗವೆಂದರೆ ರಾಶಿ ನಕ್ಷತ್ರಗಳು. ನಮ್ಮ ರಾಶಿಯ ಮೂಲಕ ನಾವು ಮದುವೆಯಾಗುವ ಅಥವಾ ಪ್ರೀತಿಸುವ, ಪ್ರೀತಿ ಮಾಡಬೇಕು ಎಂದುಕೊಂಡಿರುವ ವ್ಯಕ್ತಿಯೊಂದಿಗೆ ನಾವು ಹೊಂದಿಕೊಳ್ಳುತ್ತೇವೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಬಹುದು. ಸರಿ ಈ ಲೇಖನದಲ್ಲಿ ಯಾವ ರಾಶಿಯವರಿಗೆ ಯಾವ ರಾಶಿಯವರು ಬೆಸ್ಟ್‌ ಜೋಡಿ ಎಂಬುದನ್ನು ತಿಳಿದುಕೊಳ್ಳೋಣ.

ಸಿಂಹ ರಾಶಿಯವರು ಮೇಷ ರಾಶಿಯವರೊಂದಿಗೆ ಜೀವನದಲ್ಲಿ ಹೊಂದಾಣಿಕೆ ಹೊಂದುತ್ತಾರೆ. ಇವರ ಪ್ರೀತಿಯ ಜೀವನದಲ್ಲಿ ಸಮಸ್ಯೆಗಳು ಅಷ್ಟೇನೂ ಇಲ್ಲ. ಅವರು ಸೌಮ್ಯ ಸ್ವಭಾವದ ಮೀನ ರಾಶಿಯವರೊಂದಿಗೆ ಸಂತೋಷದಿಂದ ಬಾಳುತ್ತಾರೆ. ಪ್ರೀತಿಯ ಜೀವನದಲ್ಲಿ ಈ ಜೋಡಿಗಳು ಸಮಸ್ಯೆಗಳನ್ನು ಎದುರಿಸುವುದಿಲ್ಲ
ಸಿಂಹವು ಅಗ್ನಿ ಚಿಹ್ನೆಯಾಗಿದ್ದು, ಸೂರ್ಯನೇ ಇದರ ಅಧಿಕಾರಕ. ಧೈರ್ಯ, ಶಕ್ತಿ, ಉತ್ಸಾಹ ಎಲ್ಲವೂ ಹೆಚ್ಚು. ಹುಟ್ಟಾ ನಾಯಕರು. ಸಂಬಂಧಕ್ಕೆ ಹೆಚ್ಚಿನ ಬೆಲೆ ಕೊಡುವವರು. ಸಿಂಹಕ್ಕೆ ತುಲಾ, ಮಿಥುನ ಪರ್ಫೆಕ್ಟ್ ಮ್ಯಾಚ್. ಜೊತೆಗೆ ಮೇಷ, ಧನು, ಕುಂಭ ರಾಶಿಯೂ ಆಗಿ ಬರುತ್ತದೆ.  ( video credit : News Prasara )