ಶುರುವಾಗಲಿದೆಯಂತೆ ಮೂರನೇ ಮಹಾಯುದ್ದ? ಹರಿಹರದ ಶಿವಲಿಂಗ ಶಿವಾಚಾರ್ಯ ಗುರೂಜಿ ಹೇಳಿದ್ದೇನು ?

ಶುರುವಾಗಲಿದೆಯಂತೆ ಮೂರನೇ ಮಹಾಯುದ್ದ? ಹರಿಹರದ ಶಿವಲಿಂಗ ಶಿವಾಚಾರ್ಯ ಗುರೂಜಿ ಹೇಳಿದ್ದೇನು ?

ಹೌದು ನಾವು ಭವಿಷ್ಯವನ್ನು ನಂಬಲೇಬೇಕು, ಭವಿಷ್ಯವನ್ನು ನಂಬುವಂತಹ ಘಟನೆಗಳು ನಮ್ಮ ಎದುರು ಬಂದಾಗ ಅವರು ಹೇಳಿದಂತಹ ಮುಂದಿನ ಅನಾಹುತಗಳ ಬಗ್ಗೆ ಎಲ್ಲರೂ ಕೂಡ ಎಚ್ಚೆತ್ತುಕೊಂಡು ಅವರನ್ನು ಅವರ ಮಾತುಗಳನ್ನು ನಂಬುವಂತಿರಬೇಕು. ಅಂಥಹವರ ಹೆಸರಿನಲ್ಲಿ ಈಗಾಗಲೇ ಸಾಕಷ್ಟು  ಗುರೂಜಿಗಳು ಬಂದು ಹೋಗಿದ್ದಾರೆ. ಆದರೆ ನೀವು ದಾವಣಗೆರೆ ಜಿಲ್ಲೆ ಹರಿಹರದ ಖ್ಯಾತ ಗುರೂಜಿಗಳಾದ, ಸ್ವಾಮೀಜಿಗಳಾಗಿ ಹೆಚ್ಚು ಗಮನ ಸೆಳೆದ ಶಿವಲಿಂಗ ಶಿವಾಚಾರ್ಯ ಗುರೂಜಿ ಅವರ ಬಗ್ಗೆ ಎಲ್ಲಿಯೂ ಕೂಡ ಕೇಳಿರುವುದಿಲ್ಲ..ಅದಕ್ಕೆ ಕಾರಣ ಅವರು ಹೆಚ್ಚು ಸಂದರ್ಶನದಲ್ಲಿ ಕಂಡುಬಂದಿರಲಿಲ್ಲ..ಆದರೆ ಇದೀಗ ಕಂಡುಬಂದಿದ್ದಾರೆ. 

ರಾಜ್ಯದಲ್ಲಿ ಕೋಮುಗಲಭೆ ಆಗಲಿದೆ ಎಂದು ಆರು ತಿಂಗಳ ಹಿಂದೆಯೇ ಇವರು ಬರೆದುಕೊಂಡಿದ್ದರಂತೆ. ಅದೇ ರೀತಿ ಶಿವಮೊಗ್ಗ ಮತ್ತು ಮಂಗಳೂರಿನಲ್ಲಿ ಇತ್ತೀಚಿಗೆ ಕೋಮುಗಲಭೆ ನಡೆದ್ದಿದ್ದನ್ನು ನೀವು ಕೂಡ ಗಮನಿಸಿದ್ದೀರಿ. ಹೌದು, ಗುರೂಜಿ ಹೇಳಿದ್ದು ಎಲ್ಲವೂ ಕೂಡ ಸತ್ಯ ಆಗುತ್ತಿದೆ.. ಶಿವಲಿಂಗ ಶಿವಾಚಾರ್ಯ ಆಚಾರ್ಯರು ಹೇಳುವ ಹಾಗೆ ಹಮಾಸ್ ಮತ್ತು ಇಸ್ರೇಲ್ ನಡುವಿನ ಯುದ್ಧ ಮೂರನೇ ಮಹಾಯುದ್ಧಕ್ಕೆ ಮುನ್ನುಡಿ ಆಗಲಿದೆಯಂತೆ. ಮುಂದಿನ ವರ್ಷ ಮೂರನೇ ಮಹಾಯುದ್ಧ ನಡೆದರೂ ನಡೆಯಬಹುದು ಎಂದರು ಎಂದು ಕೇಳಿ ಬಂದಿದೆ.

ಅದರ ಜೊತೆಗೆ ಅತ್ತ ಚೀನಾದ ರಕ್ಷಣಾ ಸಚಿವಾಲಯದ ಪ್ರಕಾರ, ಗಾಜಾ ಪಟ್ಟಿಯಲ್ಲಿ ಇಸ್ರೇಲ್ ಮತ್ತು ಹಮಾಸ್ ಉಗ್ರಗಾಮಿ ಗುಂಪಿನ ನಡುವಿನ ಯುದ್ಧದ ನಡುವೆಯೇ ಕಳೆದ ವಾರದಲ್ಲಿ 6 ಯುದ್ಧನೌಕೆಗಳನ್ನು ಚೈನಿಸ್ನವರು ಮಧ್ಯಪ್ರಾಚ್ಯದಲ್ಲಿ ಸ್ಥಳಾಂತರಿಸಿದ್ದಾರೆ. ಈ ಮೂಲಕ ಯುಸ್ ಮಿಲಿಟರಿ ಎದುರಿಗೆ ಚೈನಿಸ್ ನವರು ಯುದ್ಧ ಸಾರಿದ್ದಾರೆ ಎಂದು ತಿಳಿದು ಬಂದಿದೆ.. ನಮ್ಮ ಭಾರತದ ಮೇಲೆ ಕೆನಡದ ಖಲಿಸ್ತಾನಿಗಳು ಸಹ ಆಕ್ರಮಣ ಮಾಡುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ ಎನ್ನಲಾಗಿದೆ. ಉತ್ತರ ಭಾರತದಲ್ಲಿ ಭೂಕಂಪ ಆಗಲಿದೆ ಎಂದು ಹೇಳಿದ್ದರು. ಅದೇ ರೀತಿ ನೇಪಾಳದಲ್ಲಿಯ ಪರಿಣಾಮದಿಂದಾಗಿ ದೆಹಲಿ, ಹರಿಯಾಣದಲ್ಲಿ ಕೂಡ ಭೂಕಂಪನ ಆಗಿತ್ತು. 2024ರಲ್ಲಿ ಮಹಾಯುದ್ಧ ನಡೆಯುವ ಸಾಧ್ಯತೆ ಇದ್ದು 2024ರ ರಾಜಕೀಯ ವಿಷಯವಾಗಿಯೂ ಕೂಡ ಈ ಶಿವಲಿಂಗ ಶಿವಾಚಾರ್ಯ ಗುರೂಜಿಗಳು ಒಂದು ಮಹತ್ವದ ಭವಿಷ್ಯ ನುಡಿದು ಸದ್ದು ಮಾಡುತ್ತಿದ್ದಾರೆ.  

ಅದು ಏನು ಅಂತೀರಾ, ಮುಂದೆ ಓದಿ. ಹೌದು ಅವರು ಹೇಳುವ ಹಾಗೆ ಮುಂದಿನ ವರ್ಷ ಚುನಾವಣೆಯಲ್ಲಿ ಕಮಲವೇ ಬರಲಿದ್ದು, ಮತ್ತೆ ಪ್ರಧಾನಮಂತ್ರಿಯಾಗಿ ನರೇಂದ್ರ ಮೋದಿಯವರೇ ದೇಶವನ್ನು ಆಳುತ್ತಾರೆ ಎಂದು ಹೇಳಿಕೊಂಡಿದ್ದಾರೆ. ಅವರು ಹೇಳಿರುವ ಈ ಮಾತುಗಳ ಮತ್ತೊಮ್ಮೆ ಈ ವಿಡಿಯೋದಲ್ಲಿ ನೋಡಿ. ಇನ್ನು ಸಾಕಷ್ಟು ವಿಚಾರಗಳ ಭವಿಷ್ಯವನ್ನು ಇವರು ಮುಂಚಿತವಾಗಿಯೇ ಪ್ರಸ್ತುತಪಡಿಸಿರುವ ವಿಚಾರ ನಿಮಗೂ ಗೊತ್ತಾಗುತ್ತದೆ.. ವಿಡಿಯೋ ಪೂರ್ತಿ ನೋಡಿ ಮತ್ತು ವಿಡಿಯೋ ಶೇರ್ ಮಾಡಿ ಧನ್ಯವಾದಗಳು.. ( video credit : Focus )