ಭೀಕರ ರಸ್ತೆ ಅಪಘಾತದಿಂದ ಅಂದು ಆಸ್ಪತ್ರೆ ಸೇರಿದ್ದ ಶಿಲ್ಪಾ ಗೌಡ ಇಂದು ಹೇಗಿದ್ದಾರೆ ನೋಡಿ..

ಭೀಕರ ರಸ್ತೆ ಅಪಘಾತದಿಂದ ಅಂದು ಆಸ್ಪತ್ರೆ ಸೇರಿದ್ದ ಶಿಲ್ಪಾ ಗೌಡ ಇಂದು ಹೇಗಿದ್ದಾರೆ ನೋಡಿ..

ಕನ್ನಡದ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಯುವ ಪ್ರತಿಭೆಗಳು ಹೊರಗಡೆ ಬಂದಿರುವುದನ್ನು ನೀವು ಈಗಾಗಲೇ ನೋಡಿದ್ದೀರಿ. ಹೌದು ಕೆಲವರು ಅವರವರ ನಟನೆ ಮೂಲಕ, ಹಾಡು ಹಾಡುವ ಮೂಲಕ, ಡ್ಯಾನ್ಸ್ ಮಾಡುವ ಮೂಲಕ, ಇನ್ನು ಕೆಲವೊಂದಿಷ್ಟು ಜನರು ಡಬ್ಸ್ಮ್ಯಾಶ್ ವಿಡಿಯೋಗಳ ಮೂಲಕ ಕನ್ನಡಿಗರ ಬಳಿ ಹೆಚ್ಚು ಜನರು ತಲುಪಿದ್ದಾರೆ. ಹೌದು ಅಂತಹವರಲ್ಲಿ ತುಂಬಾ ಸಾಕಷ್ಟು ಜನರು ವಿಭಿನ್ನ ವಿಭಿನ್ನವಾಗಿ ಒಳ್ಳೆ ಒಳ್ಳೆ ಪ್ರಯತ್ನದ ಮೂಲಕ ಸಿನಿಮಾರಂಗದಲ್ಲಿಯೇ ಏನಾದರೂ ದೊಡ್ಡ ಸಾಧನೆ ಮಾಡಬೇಕು ಎಂಬುದಾಗಿ ಮುನ್ನುಗ್ಗುತ್ತಿದ್ದಾರೆ. ಆದರೆ ಇನ್ನೂ ಕೆಲವರು ಇದ್ದಾರೆ ಬೇಕಾಬಿಟ್ಟಿ ಸೋಶಿಯಲ್ ಮೀಡಿಯಾದಲ್ಲಿ ಕೆಟ್ಟದಾಗಿ  ಕಾಣಿಸುತ್ತಾ ಅವರದ್ದೇ ಆದ ಅನುಯಾಯಿಗಳನ್ನು ಕೂಡ ಹೊಂದಿದ್ದಾರೆ.

ಸೋಶಿಯಲ್ ಮೀಡಿಯಾಸ್ ಸ್ಟಾರ್, ಡಬ್ಸ್ಮ್ಯಾಶ್ ಸ್ಟಾರ್ ಎಂದು ಕರೆಯಲ್ಪಡುವ ಸೋನು ಶ್ರೀನಿವಾಸ ಗೌಡ ಅವರ ಬಗ್ಗೆ ನಿಮಗೆ ಈಗಾಗಲೇ ಸಾಕಷ್ಟು ವಿಚಾರ ತಿಳಿದಿದೆ. ಇವರಷ್ಟೇ ಹೆಸರು ಮಾಡಿದವರು ಇನ್ನೊಬ್ಬರು ಎಂದರೆ ಅದು ಶಿಲ್ಪ ಗೌಡ. ಇವರು ಕೂಡ ಸಾಮಾಜಿಕ ಜಾಲತಾಣದಲ್ಲಿ ತುಂಬಾನೇ ಆಕ್ಟಿವ್ ಇರುವಂತಹ ಕಲಾವಿದೆ..ಇತ್ತೀಚಿಗೆ ಸೋನು ಗೌಡ ಅತ್ತ ಮಾಲ್ಡೀವ್ಸ್ ಕಡೆ ಹೋಗುತ್ತಿದ್ದಂತೆಯೇ ಇತ್ತ ಶಿಲ್ಪ ಗೌಡ ಅವರ ಒಂದು ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿತ್ತು. ಹೌದು, ಶಿಲ್ಪ ಗೌಡ ಅವರು ಆಸ್ಪತ್ರೆಯಲ್ಲಿ ಮಲಗಿರುವ ಒಂದು ಫೋಟೋ ಹೆಚ್ಚು ವೈರಲ್ ಆಗಿತ್ತು.     

ಇದೀಗ ಆ ಕುರಿತು ಶಿಲ್ಪ ಗೌಡ ಅವರೇ ಮಾತನಾಡಿದ್ದು ಅಂದು ಆಸ್ಪತ್ರೆಗೆ ಯಾಕೆ ಸೇರಿದ್ದರು, ಅದರ ಹಿನ್ನೆಲೆ ಏನು, ಅಂದು ನಾನು ಆ ರೀತಿ ಆಸ್ಪತ್ರೆಯಲ್ಲಿ ಸೇರಿದಾಗ ಯಾರೋ ನನ್ನ ಫೋಟೋ ತೆಗೆದು ಟ್ರೊಲ್ ನವರಿಗೆ ಕೊಟ್ಟರು, ಅವರಿಗೂ ನಾನು ಧನ್ಯವಾದ ತಿಳಿಸುತ್ತೇನೆ ಎಂದರು ಶಿಲ್ಪಾ ಗೌಡ. ಆ ರೀತಿಯಲ್ಲಿ ಆಸ್ಪತ್ರೆ ಸೇರಲು ನಿಜವಾದ ಕಾರಣ ಏನು ಎಂಬುದಾಗಿ ಶಿಲ್ಪ ಗೌಡ ಅವರೇ ಹೇಳಿಕೊಂಡಿದ್ದಾರೆ..ಹೌದು ಗೋವಾ ಟ್ರಿಪ್ ಪ್ಲಾನ್ ಮಾಡಿಕೊಂಡ ಶಿಲ್ಪ ಗೌಡ ಅವರು ರಸ್ತೆ ಮಧ್ಯೆ ಕಾರಿನ ಬ್ರೇಕ್ ಫೆಲ್ ಆಗಿ ಮೂರು ಪಲ್ಟಿ ಹೊಡೆದು ಹಳ್ಳಕ್ಕೆ ಕಾರು ಬಿದಿತ್ತಂತೆ. 

ಕಾಲು ಮತ್ತೆ ಕೈ ನೋವಾಗಿದ್ದು ಕಾಲಿಗೆ ವೈದ್ಯರು ರಾಡ್ ಹಾಕಿದ್ದಾರೆ ಎಂದರು. ಅದನ್ನೇ ಇದೀಗ ಶಿಲ್ಪ ಗೌಡ ಅವರು ಇಂಚಿಂಚಾಗಿ ತಮ್ಮಗಾದ ಆ ಘಟನೆ ಕುರಿತು ಹೇಳಿದರು. ಹಾಗೆ ತಾವು ಯಾವ ರೀತಿ ಮೇಕಪ್ ಮಾಡಿಕೊಳ್ಳುತ್ತಾರೆ ಎಂಬುದಾಗಿಯೂ ತೋರಿಸಿದ್ದಾರೆ. ಇಲ್ಲಿದೆ ನೋಡಿ ಆ ವಿಡಿಯೋ. ಪೂರ್ತಿಯಾಗಿ ನೋಡಿ ಮತ್ತು ಈ ಮಾಹಿತಿ ಬಗ್ಗೆ ನಿಮ್ಮದೇ ಆದ ಅನಿಸಿಕೆ ತಿಳಿಸಿ ಧನ್ಯವಾದಗಳು...