ಶಂಕರ್ ನಾಗ್ ಮಗಳು ಇದೀಗ ಎಂಥಾ ಕೆಲ್ಸ ಮಾಡುತ್ತಿದ್ದಾರೆ ಗೊತ್ತಾ..? ವಿಡಿಯೋ ವೈರಲ್
ಶಂಕರ್ ನಾಗರಕಟ್ಟೆ ಹೌದು ಈ ಹೆಸರಿನ ಮೂಲಕ ಇಡೀ ಕರ್ನಾಟಕದ ಮನೆ ಮಾತಾಗಿರುವ ನಟ ಶಂಕ್ರಣ್ಣ ಯಾರಿಗೇ ತಾನೇ ಗೊತ್ತಿಲ್ಲ ಹೇಳಿ. ಹೌದು ಇವರು ಹುಟ್ಟಿದ್ದು 9 ನವೆಂಬರ್ 1954 ರಂದು. ಒಬ್ಬ ಭಾರತೀಯ ನಟರಾಗಿ, ಚಿತ್ರಕಥೆಗಾರರಾಗಿ, ನಿರ್ದೇಶಕ ಆಗಿ ಮತ್ತು ನಿರ್ಮಾಪಕರಾಗಿಯೂ ಗಮನ ಸೆಳೆದ ನಟ ಇವರು. ಹೌದು ಕನ್ನಡ-ಭಾಷೆಯ ಚಲನಚಿತ್ರಗಳಿಗೆ ನಟ ಶಂಕರ್ನಾಗ್ ಅವರು ಹೆಚ್ಚು ಹೆಸರುವಾಸಿಯಾಗಿದ್ದಾರೆ. ಕರ್ನಾಟಕದ ಜನಪ್ರಿಯ ಸಾಂಸ್ಕೃತಿಕ ಐಕಾನ್ ಆಗಿರುವ ಶಂಕರ್ ನಾಗ್ ಅವರನ್ನು ಹೆಚ್ಚಾಗಿ ಎಲ್ಲರೂ ಕರಾಟೆ ಕಿಂಗ್ ಎಂದೆ ಕರೆಯುತ್ತಾರೆ.
ಅವರು ಕಾದಂಬರಿಕಾರ ಆರ್. ಕೆ. ನಾರಾಯಣ್ ಅವರ ಸಣ್ಣ ಕಥೆಗಳನ್ನು ಆಧರಿಸಿ ಮಾಲ್ಗುಡಿ ಡೇಸ್ ಎಂಬ ದೂರದರ್ಶನವನ್ನು ನಿರ್ದೇಶಿಸಿದ್ದರು, ಮತ್ತು ಕೆಲವು ಸಂಚಿಕೆಗಳಲ್ಲಿಯೂ ನಟಿಸಿದ್ದಾರೆ. ಎರಡು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು, ನಾಲ್ಕು ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಮತ್ತು ಎರಡು ಫಿಲ್ಮ್‌ಫೇರ್ ಪ್ರಶಸ್ತಿ ಸಹ ಶಂಕರ್ ನಾಗ್ ಅವರಿಗೆ ಲಭಿಸಿವೆ. ಹೌದು ನಟ ಶಂಕರ್ ನಾಗ್ ಅವರು ಕೇವಲ 36 ವರ್ಷಕ್ಕೆ ಎಲ್ಲರನ್ನು ಬಿಟ್ಟು ಹೋಗಿದ್ದು ತುಂಬಾನೇ ದುಃಖದ ವಿಷಯ... ಇಂದಿಗೂ ನಟ ಶಂಕರ್ ನಾಗ್ ಅಂದರೆ ಎಲ್ಲರಿಗೂ ಅಪಾರ ಪ್ರೀತಿ..ಈ ಆಟೋದವರಿಗಂತೂ ಶಂಕರ್ ನಾಗ್ ದೇವರು ಇದ್ದಂತೆ. ಅಷ್ಟರ ಮಟ್ಟಿಗೆ ಪ್ರೀತಿ ಗಳಿಸಿಕೊಂಡು ಹೋಗಿದ್ದಾರೆ ನಮ್ಮ ಶಂಕರ್ ನಾಗ್ ಅವರು.
ಇನ್ನು ನೂರು ವರ್ಷ ಹೋದರೂ ಕೂಡ ಶಂಕ್ರಣ್ಣ ಅವರ ಹೆಸರು ಮಾಸುವುದಿಲ್ಲ. ಕಡಿಮೆ ಸಮಯದಲ್ಲಿ ಅಷ್ಟು ಹೆಸರು ಮಾಡಿ ಹೋಗಿದ್ದಾರೆ. ಇವರ ಮಗಳು ಅಸಲಿಗೆ ಯಾರು ಗೊತ್ತಾ..? ಇದೀಗ ಎಲ್ಲಿದ್ದಾರೆ? ಮತ್ತೆ ಯಾವ ಕೆಲ್ಸ ಮಾಡುತ್ತಿದ್ದಾರೆ..? ಎಂಬ ಎಲ್ಲಾ ಮಾಹಿತಿಯ ಈ ಲೇಖನದ ಮೂಲಕ ತಿಳಿದುಕೊಳ್ಳೋಣ. ಶಂಕರ್ ನಾಗ್ ಮತ್ತು ಅರುಂಧತಿ ನಾಗ್ ಅವರ ಮುದ್ದಾದ ಒಬ್ಬಳೇ ಒಬ್ಬರು ಪುತ್ರಿ, ಅದು ಕಾವ್ಯ ನಾಗ್ ಅವರು. ಅವರ ತಂದೆಯಂತೆ ತುಂಬಾನೇ ಮುದ್ದಾಗಿದ್ದಾರೆ ಕಾವ್ಯ ನಾಗ್ ವನ್ಯಜೀವಿ ವಲಯದಲ್ಲಿ ಎಂ ಎ ಮಾಡಿ ಮುಗಿಸಿದ್ದಾರೆ.
ಇದೀಗ ಕಾವ್ಯ ನಾಗ್ ಅವರು ಹೊಸೂರಿನ ಅವರ ತಂದೆ ಶಂಕರ್ ನಾಗ್ ಅವರ ಜಮೀನಿನಲ್ಲಿ ಒಂದು ಖಾಸಗಿ ಕಂಪನಿಯನ್ನು ತೆರೆದಿದ್ದು ಅದು ನೈಸರ್ಗಿಕ ಎಣ್ಣೆ ಮತ್ತು ನೈಸರ್ಗಿಕ ಸೋಪನ್ನು ಉತ್ಪಾದನೆ ಮಾಡುವ ಕಂಪನಿ ಆಗಿದೆಯಂತೆ..ಕೋಕೋನೆಸ್ ಎನ್ನುವ ಹೆಸರಿನ ಮೂಲಕ ಶಂಕರ್ ನಾಗ್ ಅವರ ಪುತ್ರಿ ಕಾವ್ಯ ನಾಗ್ ಅವರು ಕೆಮಿಕಲ್ ಮುಕ್ತ ಸೋಪುಗಳನ್ನು ಮತ್ತು ಆಯಿಲ್ ಗಳನ್ನು ತಯಾರಿಸಿ ಮಾರಾಟ ಮಾಡುತ್ತಾರೆ ಎಂದು ತಿಳಿದುಬಂದಿದೆ. ಹೌದು ಶಂಕರ್ ನಾಗ್ ಅವರ ಪುತ್ರಿ ಕಾವ್ಯ ಅವರು ತಂದೆ ಇಲ್ಲದಿದ್ದರೂ, ಧೈರ್ಯದಿಂದ ಮುನ್ನುಗ್ಗಿ ಕಂಪನಿಯನ್ನ ನಡೆಸುತ್ತಿದ್ದಾರೆ. ಅವರ ದೈರ್ಯ ಎಲ್ರೂ ಮೆಚ್ಚಲೇಬೇಕು. ಅವರು ಯಾರನ್ನು ಮದುವೆಯಾಗಿದ್ದಾರೆ, ಜೊತೆಗೆ ಈಗ ಹೇಗಿದ್ದಾರೆ ಎಲ್ಲವನ್ನು ತಿಳಿಯಲು ಈ ವಿಡಿಯೋ ನೋಡಿ, ಮತ್ತು ವಿಡಿಯೋ ತಪ್ಪದೇ ಶೇರ್ ಮಾಡಿ ಧನ್ಯವಾದಗಳು...( video credit : kannada taja suddi )