ಶಂಕರ್ ನಾಗ್ ಅವರ ಕಾರು ಅಪಘಾತವಾಗಿದ್ದ ಇಲ್ಲವೇ ಬೇಕಂತಲೇ ಕೊಲೆ ಮಾಡಿಸಿದ್ದಾ..? ವಿಡಿಯೋ ನೋಡಿ
ಇಂದಿಗೂ ಕನ್ನಡಿಗರ ಆಟೋ ರಾಜ ಆಗಿ ಎಂದೂ ಮರೆಯದ ವ್ಯಕ್ತಿ ಎಂದರೆ ಅದು ಶಂಕರ್ ನಾಗ್. ಇಂದು ಅವರು ಬದುಕಿದ್ದರೆ ನಮ್ಮ ಕರ್ನಾಟಕವನ್ನು ಇಡೀ ಪ್ರಪಂಚವೇ ತಿರುಗಿ ನೋಡುವಂತೆ ಮಾಡುತ್ತಿದ್ದರೋ ಏನೋ.. ಸಿನಿಮಾ ಕ್ಷೇತ್ರದಲ್ಲಿ ಉತ್ತುಂಗದಲ್ಲಿದ್ದಾಗಲೇ ಅಪಘಾತಕ್ಕೀಡಾಗಿ ಸಾವನ್ನಪ್ಪಿದರು. ಕೇವಲ 36 ವರ್ಷ ವಯಸ್ಸಿಗೆ ಕೊನೆಯುಸಿರೆಳೆದಿದ್ದು, ಇಂದಿಗೂ ಕನ್ನಡಿಗರ ಮನದಲ್ಲಿ ಆ ನೋವು ಹಾಗೇ ಉಳಿದಿದೆ.
ಅಂದು ಗಿರೀಶ್ ಕಾರ್ನಾಡ್ ಅವರ ನಿರ್ದೇಶನದ ಜೋಕುಮಾರಸ್ವಾಮಿ ಸಿನಿಮಾಗೆ ಶಂಕರ್ ನಾಗ್ ಅವರು ಹೂಡಿಕೆ ಮಾಡಿದ್ದರು. ಅದರ ಶುಟಿಂಗ್ ಗೆಂದು ಹೊರಟ ಶಂಕರ್ ನಾಗ್ ಅವರನ್ನು ತಾಯಿ ತಡೆದಿರುತ್ತಾರೆ. ರಾತ್ರಿ ವೇಳೆಯಲ್ಲಿ ಪ್ರಯಾಣ ಮಾಡುವುದು ಬೇಡ ಎಂದರೂ ಕೇಳದ ಶಂಕರ್ ನಾಗ್ ಅವರು ಹೊರಟಿರುತ್ತಾರೆ. ಅದು 1990 ರ ಸೆಪ್ಟೆಂಬರ್ 30. ಮುಂಜಾನೆ ಹೆಚ್ಚುಕಡಿಮೆ ಐದು ಗಂಟೆ 5.30 ಆಗಿರಬಹುದು. ಬೆಂಗಳೂರು ದಾವಣಗೆರೆ ರಾಷ್ಟ್ರೀಯ ಹೆದ್ದಾರಿಯಲ್ಲಿ ವೇಗವಾಗಿ ಬಂದ ಶಂಕರ್ ನಾಗ್ ಅವರ ಕಾರು ಇದ್ದಕ್ಕಿದ್ದ ಹಾಗೆ ಲಾರಿಗೆ ಡಿಕ್ಕಿ ಹೊಡೆದಿತ್ತು. ಕಾರಿನಲ್ಲಿದ್ದವರೆಲ್ಲಾ ಚೆಲ್ಲಾ ಪಿಲ್ಲಿಯಾಗಿ ಬಿದ್ದರು.
ಬೆಳಗಿನ ಜಾವ ಕತ್ತಲು ಇದ್ದಿದ್ದರಿಂದ ಯಾರಿಗೂ ಅಲ್ಲಿ ಅಪಘಾತವಾಗಿದ್ದೇ ಗೊತ್ತಾಗಲಿಲ್ಲ. ಸೂರ್ಯೋದಯದ ಬಳಿಕ ಹಳ್ಳಿಗರು ನೋಡಿ, ಯಾರೋ ಎಂದು ತಿಳಿದರು. ಅಲ್ಲಿ ಬಿದ್ದಿದ್ದವರೆಲ್ಲಾ ಅಷ್ಟರಲ್ಲಿ ರಕ್ತದಲ್ಲಿ ತೋಯ್ದು ಹೋಗಿದ್ದರು. ಶಂಕರ್ ನಾಗ್ ಗೆ ಅಪಘಾತವಾಗಿದೆ. ಅವರೇ ರಸ್ತೆಯಲ್ಲಿ ಬಿದ್ದಿರುವುದು ಎಂದು ಯಾರಿಗೂ ತಿಳಿಯಲಿಲ್ಲ. ಆಗ ಅವರ ಪತ್ನಿ ಅರುಂಧತಿನಾಗ್ ಇದು ಬೇರಾರು ಅಲ್ಲ ಕನ್ನಡ ಸಿನಿಮಾ ಇಂಡಸ್ಟ್ರಿಯ ಮಿನುಗುತಾರೆ ಕನ್ನಡ ಸಿನಿಮಾ ಇಂಡಸ್ಟ್ರಿ ಧ್ರುವತಾರೆ ಶಂಕರ್ ನಾಗ್ ಅವತ್ತು ವಿಧಿವಶರಾಗಿದ್ದಾರೆ ಎನ್ನುತ್ತಾರೆ.
ಅಲ್ಲಿದ್ದ ಜನರಿಗೆ ಅರೆಕ್ಷಣ ದಂಗಾಗುತ್ತಾರೆ. ಈ ಸುದ್ದಿ ರಾಜ್ಯಾದ್ಯಂತ ಸದ್ದು ಮಾಡುತ್ತದೆ. ಅಲ್ಲಿ ನಡೆದ ಆ ಅಪಘಾತದ ಬಗ್ಗೆ ಇಂದಿಗೂ ಅನುಮಾನವಿದೆ. ಯಾಕೆಂದರೆ ಆ ಟ್ರಕ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಟ್ಟು ನಿಂತು ಬಹಳ ಕಾಲವಾಗಿತ್ತು. ಆದರೆ, ಶಂಕರ್ ನಾಗ್ ಅವರು ಬರುವ ದಿನವೇ ಆ ಟ್ರಕ್ ಅದು ಹೇಗೆ ರಿಪೇರಿಯಅಗಿ ಅಪಘಾತ ಮಾಡಿತೋ ಗೊತ್ತಿಲ್ಲ. ಇದು ಉದ್ಧೇಶ ಪೂರ್ವಕವಾಗಿಯೇ ಶಂಕರ್ ನಾಗ್ ಅವರ ಏಳಿಗೆಯನ್ನು ಸಹಿಸಲಾರದವರು ಈ ಕೆಲಸ ಮಾಡಿಸಿದ್ದಾರೆ ಎಂದು ಇಂದಿಗೂ ಹಲವರು ಅನುಮಾನವನ್ನು ವ್ಯಕ್ತಪಡಿಸುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ತಪ್ಪದೆ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು. ( video credit : third eye )