ಮದುವೆ ಮಾಡಿಕೊಂಡು ಗಂಡನಿಗೆ ಮುಟ್ಟಲು ಬಿಡದ ಲೇಡಿ ಎಸ್ಕೇಪ್..! ಕಾರಣ ಗೊತ್ತಾದ್ರೆ ಬೆಚ್ಚಿ ಬೀಳ್ತಿರ..!

ಮದುವೆ ಮಾಡಿಕೊಂಡು ಗಂಡನಿಗೆ ಮುಟ್ಟಲು ಬಿಡದ ಲೇಡಿ ಎಸ್ಕೇಪ್..! ಕಾರಣ ಗೊತ್ತಾದ್ರೆ ಬೆಚ್ಚಿ ಬೀಳ್ತಿರ..!

ಹೌದು ಈ ಪ್ರೀತಿ ಪ್ರೇಮದ ವಿಚಾರಕ್ಕೆ ಬರುವುದಾದರೆ ಯಾವಾಗ ಯಾರ ಜೀವನದಲ್ಲಿ ಯಾವ ರೀತಿ ಮೋಸ ಆಗುತ್ತದೆ ಎಂದು ಹೇಳಲು ಕೂಡ ಅಸಾಧ್ಯ.. ಇದೀಗ ಅಂತಹದೊಂದು ಘಟನೆ ಬೆಂಗಳೂರಿನ ಚಂದ್ರಲೇಔಟ್ ನಲ್ಲಿ ನಡೆದಿದೆ. 2018 ರಲ್ಲಿ ಒಬ್ಬ ಯುವಕನಿಗೆ ಫೇಸ್ಬುಕ್ ಮೂಲಕ ಮಾಯ ಎನ್ನುವ ಹೆಸರಿನ ಹುಡುಗಿ ಪರಿಚಯ ಆಗಿದ್ದಾಳೆ, ಹುಡುಗಿಯ ಹೆಸರನ್ನು ಇಲ್ಲಿ ಬದಲಾಯಿಸಲಾಗಿದೆ. ಈಕೆಯ ಅಕ್ಕ ಛಾಯಾ ಮತ್ತು ಅಕ್ಕನ ಗಂಡ ಅರುಣ್ ಎಂಬಾತನ ವಿರುದ್ಧ ಮತ್ತು ಪತ್ನಿ ವಿರುದ್ಧ ಈಗ ಮೋಸ ಹೋಗಿರುವ ಸಂತೋಷ ಎಂಬ ಯುವಕ, ಈ ಮೂವರ ಮೇಲೆ ಕಂಪ್ಲೇಂಟ್ ದಾಖಲು ಮಾಡಿದ್ದಾನೆ.. 

ಸಂತೋಷ್ ಅವರಿಗೆ 2018ರಲ್ಲಿ ಫೇಸ್ಬುಕ್ ಮೂಲಕ ಮಾಯಾ ಎನ್ನುವ ಹುಡುಗಿ ಪರಿಚಯ ಆಗಿದ್ದಾಳೆ, ನಂತರ ಆತನ ಸಹಾಯ ಪಡೆದು ಆತನ ಕಂಪನಿಯಲ್ಲಿ ಕೆಲಸ ಕೂಡ ಗಿಟ್ಟಿಸಿಕೊಂಡಿದ್ದಾಳೆ. ನಂತರ ಹೋಗುತ್ತಾ ಹೋಗುತ್ತಾ ಇವರಿಬ್ಬರ ನಡುವೆ ಸ್ನೇಹ ಬೆಳೆದಿದ್ದು ಅದು ಪ್ರೀತಿಗೆ ತಿರುಗಿತ್ತಂತೆ. ಮದುವೆ ಮಾಡಿಕೊಳ್ಳಬೇಕೆಂದು ಇಬ್ಬರೂ ತೀರ್ಮಾನ ಮಾಡಿದ್ದು, ಅದರಂತೆಯೇ ಮದುವೆಗೂ ಮುನ್ನ ಹುಡುಗಿಯ ಅಕ್ಕ ಮತ್ತು ಭಾವ ಹುಡುಗನಿಂದ 5 ಲಕ್ಷ ಹಣವನ್ನು ಮದುವೆ ಕರ್ಚಿಗೆ ಎಂದು ಹೇಳಿ ಪೀಕಿದ್ದಾರೆ ಎನ್ನಲಾಗಿದೆ...

ನಂತರ ಮದುವೆಗೆ ಚಿನ್ನ ಆಭರಣ ಬೇಕು ಎಂದು ಇದೆ ಹುಡುಗನ ಕಡೆಯಿಂದ ಹದಿನೈದು ಲಕ್ಷದ ಮೊತ್ತವನ್ನೂ ಸಹ ತೆಗೆದುಕೊಳ್ಳಲು ಸ್ಕೆಚ್ ಕೂಡ ಹಾಕಿದ್ದರಂತೆ. ಅದೇ ರೀತಿ ಹಣವನ್ನ ಹುಡುಗನಿಂದ ಪಡೆದಿದ್ದು ಮದುವೆಗೂ ಮುಂಚೆ ಹುಡುಗಿ ನನಗೆ ಐಫೋನ್ ಬೇಕು ಎಂದು ಕೇಳಿದ್ದ ಕಾರಣಕ್ಕಾಗಿಯೇ, ಇದೆ ಸಂತೋಷ ಎರಡುವರೆ ಲಕ್ಷದ ಐಫೋನ್ ಕೂಡ ಕೊಡಿಸಿದ್ದನು ಎಂದು ತಿಳಿದು ಬಂದಿದೆ...  

ಅದಕ್ಕೆ ಎಲ್ಲಾ ದಾಖಲೆಯನ್ನು ಇದೀಗ ಪೊಲೀಸ್ ಠಾಣೆಯಲ್ಲಿ ಇಟ್ಟಿದ್ದು, ಸಂತೋಷ 2022 ರಲ್ಲಿ ತನಗಾದ ಮೋಸದ ಜಾಲವನ್ನು ಬಿಚ್ಚಿಟ್ಟಿದ್ದಾನೆ. ಹೌದು 2022 ನವೆಂಬರ್ ತಿಂಗಳಲ್ಲಿ ಒಂದು ದೇವಸ್ಥಾನದಲ್ಲಿ ಮಾಯ ಮಹೇಶ್ ಮದುವೆ ಮಾಡಿಕೊಂಡಿದ್ದಾರೆ. ಮದುವೆಯಾದ ಬಳಿಕ ನನ್ನನ್ನು ಮುಟ್ಟಲು ಸಹ ಆಕೆ ಬಿಟ್ಟಿಲ್ಲ ಸರ್ ಎಂದು ಪೊಲೀಸರ ಮುಂದೆ ಹೇಳಿದ್ದು, 3 ತಿಂಗಳ ಹಿಂದೆ ನನ್ನ ಹೆಂಡ್ತಿ ನಾಪತ್ತೆಯಾಗಿದ್ದಾಳೆ ದೂರು ದಾಖಲಿಸಿಕೊಳ್ಳಿ ಸರ್ ಎಂದು ಕೇಳಿರುವುದಾಗಿ ಇದೀಗ ತಿಳಿದುಬಂದಿದೆ. ಇದೆಲ್ಲ ನನಗೆ ಮೋಸ ಮಾಡಲೆಂದೆ ಆ ಮೂವರು ಸೇರಿ ಮೊದಲೇ ಪ್ಲಾನ್ ಮಾಡಿ, ನನಗೆ ಆಕೆ ಜೊತೆ ಮದುವೆ ಮಾಡಿಸಿ ಪರಾರಿಯಾಗಿದ್ದಾರೆ. ನನ್ನ ಪತ್ನಿ ಕೂಡ ಪರಾರಿಯಾಗಿದ್ದಾಳೆ. ನನಗೆ ನ್ಯಾಯ ಕೊಡಿಸಿ ಸರ್ ಎಂದು ಸಂತೋಷ್, ಚಂದ್ರ ಲೇಔಟ್ ಪೊಲೀಸ್ ಠಾಣೆಯಲ್ಲಿ ಇದೀಗ ಕೇಳಿಕೊಂಡಿದ್ದಾನೆ. 
ಸಂತೋಷ್ ಕೊಟ್ಟಿರುವ ದೂರನ್ನು ಚಂದ್ರ ಲೇಔಟ್ ಪೊಲೀಸರು ದಾಖಲಿಸಿಕೊಂಡಿದ್ದು ಛಾಯಾ ಹಾಗೂ ಮಾಯ, ಛಾಯಾ ಗಂಡನಾದ ಆ ಅರುಣ್ ನ ಹುಡುಕಾಟದಲ್ಲಿದ್ದಾರಂತೆ. ಈ ರೀತಿ ಘಟನೆಗಳು ಕೂಡ ನಿಜಕ್ಕೂ ನಡುತ್ತವೆಯೇ ಎಂದು ನಿಮಗೂ ಸಹ ಅನಿಸಿದರೆ, ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ, ತಪ್ಪದೆ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು...