ಈ ದೇಶದಲ್ಲಿ ಅಧಿಕ ಮಕ್ಕಳ ಮಾಡಿಕೊಳ್ಳುವ ಜೋಡಿಗೆ ಪ್ರತಿ ತಿಂಗಳು ಸಾವಿರ ಡಾಲರ್ ಕೊಡ್ತಾರೆ..!!
ಹೌದು ಜಗತ್ತಿನಲ್ಲೇ ಖುಷಿಯಾಗಿ ಇರುವ ದೇಶ ಅಂದ್ರೆ ಅದು ಫಿನ್ಲ್ಯಾಂಡ್ ದೇಶ. ಈ ದೇಶ ಜಗತ್ತಿನಲ್ಲೆ ಹೆಚ್ಚು ಖುಷಿಯಾಗಿದೆ ಎಂದು 2019 ರಲ್ಲಿ ಖುಷಿ ದೇಶ ಎಂದೇ ಬಿರುದು ನೀಡಲಾಗಿತ್ತು.. ಫಿನ್ಲ್ಯಾಂಡ್ ದೇಶದಲ್ಲಿಯ ಸಾಕಷ್ಟು ವಿಚಾರಗಳು ಇಂದಿಗೂ ಸದ್ದು ಮಾಡುತ್ತಿವೆ. ಕೇವಲ 55 ಲಕ್ಷ ಜನರನ್ನು ಹೊಂದಿರುವ ಈ ದೇಶದ ಜನಸಂಖ್ಯೆ ಕೇಳಲು ಸಣ್ಣ ಸಂಖ್ಯೆ ಅಂದುಕೊಳ್ಳಿ. ಜಗತ್ತಿಗೆ ತನ್ನ ಶಕ್ತಿಯ ಬುದ್ಧಿವಾದ ತಿಳಿಸಿದ ದೇಶ ಇದು. ಆರ್ಥಿಕ ವ್ಯವಸ್ಥೆಯಲ್ಲಿಯೂ ಮುಂದಿದೆ.
ಕೇವಲ ೫೫ ಲಕ್ಷ ಜನ ಇರುವ ಈ ಫಿನ್ಲ್ಯಾಂಡ್ ದೇಶದ ಸುಮಾರು 40 ಲಕ್ಷ ಕಾರುಗಳನ್ನ ಈ ದೇಶದ ಜನರು ಹೊಂದಿದ್ದಾರೆ ಎಂದರೆ ನಂಬಲೇಬೇಕು. ಫಿನ್ಲ್ಯಾಂಡ್ ದೇಶದ ಜನರು ಆರೋಗ್ಯಕ್ಕೆ ಹೆಚ್ಚು ಒತ್ತು ಕೊಡುತ್ತಾರೆ. ಅಲ್ಲಿಯ ಸರಾಸರಿ 85 ವರ್ಷದ ತನಕ ಪುರುಷರು, 80 ವರ್ಷದ ತನಕ ಮಹಿಳೆಯರು ಬದುಕುತ್ತಾರೆ. ಅದಕ್ಕೆ ಕಾರಣ ಅಲ್ಲಿರುವ ಜೀವನದ ವ್ಯವಸ್ಥೆ. ಆರೋಗ್ಯದ ಮೇಲೆ ಹಿಡಿತ ಸಾಧಿಸಿದಂತಹ ಅಲ್ಲಿಯ ಜನರು. ಅಲ್ಲಿ ಕಾನೂನು ಕ್ರಮ ಕಟ್ಟು ನಿಟ್ಟಾಗಿ ನಡೆಯುತ್ತದೆ. ಟ್ರಾಫಿಕ್ ರೂಲ್ಸ್ ಬಗ್ಗೆ ಕೇಳಿದ್ರೆ ಅಚ್ಚರಿ ಪಡ್ತಿರಿ, ಹೆಚ್ಚು ಸ್ಪೀಡ್ ಆಗಿ ಅಲ್ಲಿ ವಾಹನ ಓಡಿಸುವಂತಿಲ್ಲ. ನಿಯಮಿತ ಮೀರಿ ಗಾಡಿ ಓಡಿಸಿದ್ದೆ ಆದ್ರೆ ಅಷ್ಟೇ ಸ್ಪೀಡ್ ಆಗಿ ಅಲ್ಲಿಯ ಜನರ ದುಡಿಮೆಯ ಆದರದ ಅಷ್ಟೇ ಫೈನ್ ಬಿಳುತ್ತ್ತೆ.
ಫಿನ್ಲ್ಯಾಂಡ್ ದೇಶ ಸುಮಾರು ವರ್ಷಗಳಿಂದ ಅವರ ಜನಸಂಖ್ಯೆ ಪ್ರಮಾಣದಲ್ಲಿ ಇಳಿಕೆ ಕಾಣುತ್ತಿದ್ದು ಅಲ್ಲಿಯ ದಂಪತಿಗಳಿಗೆ ಎರಡಕ್ಕಿಂತ ಮೂರು ಅಥವಾ ಅದಕ್ಕಿಂತ ಹೆಚ್ಚಿಗೆ ಮಕ್ಕಳನ್ನು ಮಾಡಿಕೊಳ್ಳುವ ದಂಪತಿಗಳಿಗೆ ಪ್ರತಿ ತಿಂಗಳು ಸಾವಿರ ಡಾಲರ್ ಹಣ ಫಿನ್ಲ್ಯಾಂಡ್ ದೇಶದ ಸರ್ಕಾರ ನೀಡುತ್ತದೆ. ಈ ನೋಕಿಯಾ ಫೋನ್ ಎಲ್ಲರೂ ನೋಡಿದ್ದೀರಿ. ಮೊದಲು ಆರಂಭದಲ್ಲ್ಲಿ ಎಲ್ಲರ ಕೈಗೆ ಬಂದ ಈ ನೋಕಿಯಾ ಫೋನ್ ಅನ್ನು ಹುಟ್ಟು ಹಾಕಿದ್ದೆ ಈ ಫಿನ್ಲೆಂಡ್ ದೇಶ. ಅಲ್ಲಿಯೆ ಮೊದಲು ಈ ಫೋನ್ ನ ಉತ್ಪಾದನೆ ಆಗಿತ್ತು.
ಹೌದು ಇಲ್ಲಿ ಹೆಚ್ಚಾಗಿ ಕಾಫಿ ಪ್ರಿಯರು ಇದ್ದಾರೆ.. ಸುಮಾರು 2 ಲಕ್ಷ ಸರೋವರಗಳನ್ನು ಹೊಂದಿರುವ ಫಿನ್ಲ್ಯಾಂಡ್ ದೇಶ ಸರೋವರಗಳ ದೇಶ ಎಂದೆ ಕರೆಯಲ್ಪಡುತ್ತದೆ. ಒಬ್ಬ ವ್ಯಕ್ತಿ ಫಿನ್ಲ್ಯಾಂಡ್ ದೇಶದಲ್ಲಿ ವರ್ಷಕ್ಕೆ 12 ಕೆಜಿ ಕಾಫಿ ಪುಡಿ ಖಾಲಿ ಮಾಡುತ್ತಾನೆ. ಕಾಫಿ ಕುಡಿಯುವ ಮೂಲಕ ಎಂದರೆ ನೀವು ನಂಬಲೇಬೇಕು. ಸುಮಾರು 70 ಬಗೆಯ ಕಾಫಿ ಇಲ್ಲಿ ಸಿಗುತ್ತವೆ. ಅಲ್ಲಿಯ ಆಟಗಳು ನಿಜಕ್ಕೂ ನಿಮ್ಮನ್ನು ಸಹ ಮೈ ರೋಮಾಂಚನಗೊಳ್ಳುವಂತೆ ಮಾಡುತ್ತವೆ. ಹಾಗೆ ಫ್ರೀ ವಿಚಾರಕ್ಕೆ ಬರುವುದಾದರೆ ವಿದ್ಯಾಭ್ಯಾಸ ಮತ್ತು ಆಸ್ಪತ್ರೆ ಖರ್ಚನ್ನು ಫಿನ್ಲೆಂಡ್ ದೇಶದ ಸರ್ಕಾರವೇ ಪೂರ್ತಿ ನೋಡಿಕೊಳ್ಳುತ್ತದೆ ಎನ್ನಲಾಗಿದೆ. ವಿದ್ಯಾಭ್ಯಾಸ ಅಂದರೆ ಬಟ್ಟೆ ಬರೆ ಪುಸ್ತಕ ಅಷ್ಟೇ ಅಲ್ಲ, ಪ್ರತಿಯೊಂದು ಅಲ್ಲಿ ವಿದ್ಯಾಭ್ಯಾಸ ಹೇಳ್ಕೊಡುವ ಶಿಕ್ಷಕರು ಕೂಡ ಫ್ರೀ, ಬಟ್ಟೆ ಪುಸ್ತಕ ಅಲ್ಲಿಯ ಜನರಿಗೆ ಫ್ರೀಯಾಗಿ ವಿದ್ಯಾದಾನ ಮಾಡುತ್ತಾರೆ.
ಆಸ್ಪತ್ರೆಯಲ್ಲಿ ಎಲ್ಲವೂ ಕೂಡ ಅಲ್ಲಿ ಫ್ರೀ ಇದೆ. ಆದರೆ ಬೇರೆ ವಿಚಾರಕ್ಕೆ ಪ್ರತಿ ಕೆಲಸಕ್ಕೂ ದುಡ್ಡು ಕೊಡಬೇಕು. ದುಡಿದು ತಿನ್ನಲೇಬೇಕು, ಫಿನ್ಲ್ಯಾಂಡ್ ದೇಶದ ಜನರಿಗೆ ಕೋಪ ಅನ್ನುವುದೇ ಗೊತ್ತಿಲ್ಲ , ಶಾಂತ ಸ್ವಭಾವದವರು. ಅಸೂಯೆ ಹೊಟ್ಟೆಕಿಚ್ಚು ಎನ್ನುವ ಪದದ ಅರ್ಥವೇ ಅವರಿಗೆ ಗೊತ್ತಿಲ್ಲ, ಕೆಲಸ ಮಾಡುವುದು ಎಲ್ಲರ ಜೊತೆ ಚೆನ್ನಾಗಿ ಇರುವುದು, ಖುಷಿಯಾಗಿ ಇರುವುದು ಊಟ ಮಾಡಿ ಮಲಗುವುದು, ಇಷ್ಟೇ ಅಲ್ಲಿಯ ಜನರಿಗೆ ಗೊತ್ತಿರುವುದು. ಫಿನ್ಲ್ಯಾಂಡ್ ದೇಶದಲ್ಲಿ ಅದೆಷ್ಟು ಸರಳತೆಯಿಂದ ಜೀವನ ಮಾಡುತ್ತಿದ್ದಾರೆ, ಅಲ್ಲಿಯ ಹುಡುಗ ಹುಡುಗಿಯರ ಪದ್ಧತಿ ಹೇಗಿರುತ್ತದೆ, ಮದುವೆ ಆದ ಮೇಲೆ ಆಡಿಸುವ ಆಟಗಳ ಪದ್ಧತಿ, ಜೊತೆಗೆ ಬಹುಮಾನವಾಗಿ ನೀಡುವ ವಿಚಿತ್ರ ಪದ್ಧತಿ ಎಲ್ಲವನ್ನು ಕೂಡ ಈ ಲೇಖನದ ಕೊನೆಯಲ್ಲಿರುವ ವಿಡಿಯೋವನ್ನು ಸಂಕ್ಷಿಪ್ತವಾಗಿ ನೋಡಿ ತಿಳಿದುಕೊಳ್ಳಿ... ತುಂಬಾನೇ ಇಂಫಾರ್ಮೇಟಿಕ್ ಆಗಿದೆ ಈ ಮಾಹಿತಿ. ತಪ್ಪದೆ ಕೊನೆಯವರೆಗೂ ನೋಡಿ, ಶೇರ್ ಮಾಡಿ, ಮಾಹಿತಿ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ, ಧನ್ಯವಾದ.. ( video credit : CHARITRE )..