ಬಿಗ್ ಬಾಸ್ ಕನ್ನಡ ಸೀಸನ್ ಹತ್ತರ ಒಂಬತ್ತು ಸ್ಪರ್ಧಿ ಗಳು ಫೈನಲ್! ಆ ಸ್ಪರ್ಧಿಗಳು ಯಾರು ಗೊತ್ತಾ?

ಬಿಗ್ ಬಾಸ್ ಕನ್ನಡ ಸೀಸನ್ ಹತ್ತರ ಒಂಬತ್ತು ಸ್ಪರ್ಧಿ ಗಳು ಫೈನಲ್! ಆ ಸ್ಪರ್ಧಿಗಳು ಯಾರು ಗೊತ್ತಾ?

ನಮ್ಮ ಕಿರುತೆರೆಯಲ್ಲಿ ಪ್ರಸಾರವಾಗುವ ರಿಯಾಲಿಟಿ ಶೋ ಗಳ ಪೈಕಿ ಹೆಚ್ಚು ಜನಪ್ರಿಯತೆ ಹಾಗೂ ಸೆನ್ಸೇಷನ್ ಕ್ರಿಯೇಟ್ ಮಾಡುವ ರಿಯಾಲಿಟಿ ಶೋ ಎಂದರೆ ಅದು ಬಿಗ್ ಬಾಸ್. ಇನ್ನೂ ಈ ಬಿಗ್ ಬಾಸ್ ಶೋ ಹಿಂದಿಯಲ್ಲಿ ಮೊದಲ ಬಾರಿಗೆ ಆರಂಭವಾದ ಶೋ ಇದೀಗ ಎಲ್ಲಾ ಭಾಷೆಯಲ್ಲಿ ಕೂಡ ಶುರುವಾಗಿ ಸಾಕಷ್ಟು ಸೀಸನ್ ಗಳನ್ನು ಯಶಸ್ವಿಯಾಗಿ ಮುಗಿಸಿದೆ. ಕೆಲವೊಂದು ಶೋ ತನ್ನ ಆರಂಭಿಕ ದಿನಗಳಲ್ಲಿ ಕಳೆ ಕಂಡು ಅಂತ್ಯ ಆಗುವ ವೇಳೆಯಲ್ಲಿ ತನ್ನ ಛಾಪನ್ನು ಕಳೆದುಕೊಂಡಿರುತ್ತಾರೆ. ಆದರೆ ಈ ಬಿಗ್ ಬಾಸ್ ಶೋ ಇಂದಿನ ವರೆಗೂ ಅದೆಷ್ಟೋ ಸೀಸನ್ ಮುಗಿಸಿದ್ದರು ಕೂಡ ತನ್ನ ಹೈಪ್ ಕಡಿಮೆ ಮಾಡಿಕೊಂಡಿಲ್ಲ. ಇನ್ನೂ ಈ ಶೋ ಮುಖಾಂತರ ಅದೆಷ್ಟೋ ಸೆಲಬ್ರೆಟಿ ಅಸಲಿ ಮುಖ ಕೂಡ ಹೋರ ಬಿದ್ದಿದೆ ಎಂದರೆ ತಪ್ಪಾಗಲಾರದು .

ಇನ್ನೂ ನಮ್ಮ ಕನ್ನಡ ಬಿಗ್ ಬಾಸ್ ಬಗ್ಗೆ ಮಾತನಾಡುವುದಾದರೆ. ಈ ಶೋ ರುವರಿಯಾಗಿ ಮೊದಲ ಸೀಸನ್ ನಿಂದಾ ಈಗ ಯಶಸ್ವಿಯಾಗಿ ಮುಗಿದಿರುವ ಒಬಂತ್ತು ಸೀಸನ್ ಗಳು ಕೂಡ ನಮ್ಮ ಕರುನಾಡ ಚಕ್ರವರ್ತಿ "ಸುದೀಪ್" ಅವರ ನೇತೃತ್ವದಲ್ಲಿ ನಡೆದಿದೆ. ಇದೀಗ ಈ ತಿಂಗಳ ಅಂತ್ಯದಲ್ಲಿ ಶುರುವಾಗುವ ಬಿಗ್ ಬಾಸ್ ಕನ್ನಡ ಹತ್ತನೇ ಸೀಸನ್ ನ ಮೊದಲ ಪ್ರೋಮೋ ಕೂಡ ಬಿಡುಗಡೆ ಆಗಿದ್ದು. ತನ್ನ ಮೊದಲ ಪ್ರೋಮೋ ದಲ್ಲಿಯೆ ವಿಭಿನ್ನತೆಯನ್ನು ಎತ್ತಿ ಹಿಡಿಯುತ್ತಿದೆ ಎಂದರೆ ತಪ್ಪಾಗಲಾರದು. ಇನ್ನೂ ಸಿನಿಮಾಗಳಲ್ಲಿ ಬ್ಯುಸಿ ಇರುವ ಸುದೀಪ್ ಮತ್ತೆ ಎಲ್ಲಾ ಶೆಡ್ಯೂಲ್ ಬದಿಗಿಟ್ಟು ಕಿರುತೆರೆಗೆ ಮರಳುವ  ಸಮಯ ಬರಲಿದೆ. ಇನ್ನೂ ಇದೆಲ್ಲದಕ್ಕಿಂತ ಹೆಚ್ಚಾಗಿ ಈ ಸೀಸನ್ ಸ್ಪರ್ಧಿಗಳ ಹೆಸರು ಹೆಚ್ಚು ವೈರಲ್ ಆಗಿದೆ. ಆ ಸ್ಪರ್ಧಿಗಳು ಯಾರೆಂದು ನಾವು ತಿಳಿಯೋಣ ಬನ್ನಿ.  

ಜೀ ಕನ್ನಡದಲ್ಲಿ "ಜೊತೆ ಜೊತೆಯಲಿ" ಧಾರಾವಾಹಿ ಮೂಲಕ ಪರಿಚಿತರಾಗಿ ಈಗಾಗಲೇ ಇವರ ನಟನೆಯ ಮೂರು ಸಿನಿಮಾ ಕೂಡ ಬಿಡುಗಡೆ ಆಗು ಅದ್ಬುತ ನಟಿ ಎಂದು ಗುರುತಿಸಿಕೊಂಡಿರುವ "ಮೇಘ ಶೆಟ್ಟಿ". ದಿವಂಗತ 'ಬುಲೆಟ್ ಪ್ರಕಾಶ್ ' ಮಗ "ರಕ್ಷಕ್ ಬುಲೆಟ್", 'ಎಕ್ಸ್ಯಮಿ ' ಅಂತಹ ಅದ್ಬುತ ಸಿನಿಮಾಗಳನ್ನು ನೀಡಿ ಸದ್ಯದಲ್ಲಿ ಬಣ್ಣದ ರಂಗದಿಂದ ದೂರ ಉಳಿದು ಉದ್ಯಮಿ ಆಗಿರುವ "ಸುನಿಲ್ ಶೆಟ್ಟಿ". ಇತ್ತ ಸಿಂಗರ್ ಕಡೆ ನೀಡುವುದಾದರೆ ಕನ್ನಡ ರಾಪರ್ "ಇಶಾನಿ". "ನಾಗಿಣಿ 2" ಸೀರಿಯಲ್ ಜೋಡಿ "ನಮ್ರತಾ ಗೌಡ ಹಾಗೂ ನಿನಾದ್". ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗಿರುವ "ಭೂಮಿಕಾ ಬಸವರಾಜು" ಹಾಗೂ "ಡ್ರೋನ್ ಪ್ರತಾಪ್ " ಹೆಸರು ಕೇಳಿ ಬರುತ್ತಿದೆ. ಆದ್ರೆ ಎಷ್ಟೆಲ್ಲ ಹೆಸರ ನಡುವೆ ಯಾರು ದೊಡ್ಡ ಮನೆ ಪ್ರವೇಶ ಪಡೆಯಲಿದ್ದಾರೆ ಎಂದು ನಾವು ಈ ತಿಂಗಳ ಅಂತ್ಯದಲ್ಲಿ ತಿಳಿದುಕೊಳ್ಳಬಹುದಾಗಿದೆ.