ಭೀಮಾ ಚಿತ್ರದ ಅಶ್ವಿನಿ ಅಂಬರೀಷ್ ಅವರ ಲೈಫ್ ಸ್ಟೋರಿ

ಭೀಮಾ ಚಿತ್ರದ  ಅಶ್ವಿನಿ ಅಂಬರೀಷ್ ಅವರ ಲೈಫ್ ಸ್ಟೋರಿ

ದುನಿಯಾ ವಿಜಯ್ ಭಾರತೀಯ ಚಲನಚಿತ್ರ ನಟನಾಗಿದ್ದು,  ಕನ್ನಡ  ಚಿತ್ರರಂಗದಲ್ಲಿ ಪ್ರಮುಖವಾಗಿ ಕಾರ್ಯನಿರ್ವಹಿಸುತ್ತಾನೆ. 2007ರಲ್ಲಿ ಬಿಡುಗಡೆಯಾದ "ದುನಿಯಾ" ಚಿತ್ರದಿಂದ ಖ್ಯಾತಿಯನ್ನು ಗಳಿಸಿದ ಅವರು, ಆ ಚಿತ್ರದ ಯಶಸ್ಸಿನಿಂದ 'ದುನಿಯಾ' ಎಂಬ ಹೆಸರು ತನ್ನ ಹೆಸರಿನೊಂದಿಗೆ ಸೇರಿಸಿಕೊಂಡರು. ದುನಿಯಾ ವಿಜಯ್ ವಿಶೇಷವಾಗಿ ತನ್ನ ಕ್ರಿಯಾತ್ಮಕ ಪಾತ್ರಗಳಿಗಾಗಿ ಹೆಸರುವಾಸಿಯಾಗಿದ್ದು, ಹಲವಾರು ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ. "ಜಂಗ್ಲಿ",   ಮತ್ತು "ಮಾಸ್ತಿ" ಅವರ ಕೆಲ ಪ್ರಚಲಿತ ಚಿತ್ರಗಳು. ಇವರು ಅಕ್ಷನ್ ಭರಿತ ಪಾತ್ರದಲ್ಲಿ ನಟಿಸುವುದಕ್ಕೆ ಹೆಸರಾಗಿದ್ದರೂ, ಅವರ ನಟನೆಗೆ ಖ್ಯಾತಿಯುಂಟು. 

ದುನಿಯಾ ವಿಜಯ್ ಅವರ ಜೀವನದಲ್ಲಿ ಅನೇಕ ವಿವಾದಗಳು ಮತ್ತು ಕಾನೂನು ಸಮಸ್ಯೆಗಳು ಎದುರಿಸಿವೆ, ಆದರೆ ಅವರು ಇನ್ನೂ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದಾರೆ. ಇನ್ನು ಇತ್ತೀಚೆಗೆ ಇವರ ಭಾರಿ ನಿರೀಕ್ಷೆ ಹುಟ್ಟಿಸಿದ್ದ ಭೀಮಾ ಸಿನಿಮಾ ಕೊಡ ಕಳೆದ ವಾರ ಬಿಡುಗಡೆ ಪಡೆದಿತ್ತು. ಇವ್ರು ಸಿನಿಮಾಗಳಲ್ಲಿ ಹೆಚ್ಚು ಸಕ್ರಿಯರಾಗಿ ಇರದೆ  ಇದ್ದರೂ ಕೊಡ ವರ್ಷಕ್ಕೆ ಒಂದೇ ಸಿನಿಮಾ ಇಡೀ ವರ್ಷ ಸದ್ದು ಮಾಡುವಂತೆ ಪ್ರೇಕ್ಷಕರಿಗೆ ಮನೋರಂಜನೆಯನ್ನು ನೀಡುತ್ತಾರೆ.

ಇನ್ನು ಈಗ ಎಲ್ಲೆಡೆ ಸದ್ದು ಮಾಡುತ್ತಿರುವ ಭೀಮಾ ಚಿತ್ರದ ನಟಿಯ ಬಗ್ಗೆ ಎಲ್ಲೆಡೆ ಚರ್ಚೆ ನಡೆಯುತ್ತಿದೆ. ಏಕೆಂದ್ರೆ ಇನ್ನೂ BBA ಓದುತ್ತಿರುವ ಈ ಚಲುವೆ ರಂಗ ಕಲಾವಿದೆಯಾಗಿ ಗುರುತಿಸಿಕೊಂಡು ಅತ್ಯಂತ ಚಿಕ್ಕ ವಯಸ್ಸಿನಲ್ಲಿಯೇ ವಿಜಯ್ ಅಂತಹ ಸ್ಟಾರ್ ನಟನ ಜೊತೆ ಕಾಣಿಸಿಕೊಂಡಿರುವ ಬಗ್ಗೆ ಈಕೆ ಮಾದ್ಯಮಗಳ ಮುಂದೆ ಹೇಳಿದ್ದಾರೆ.ಬೆಂಗಳೂರಿನಿಂದ ಎಂಎಲ್ಎಸಿಡಬ್ಲ್ಯೂನಲ್ಲಿ ಪದವಿಯನ್ನು ಮುಗಿಸಿದ ನಂತರ, ಅಶ್ವಿನಿ ದೂರಶಿಕ್ಷಣದ ಮೂಲಕ ತನ್ನ ಮಾಸ್ಟರ್ ಅನ್ನು ಮುಂದುವರಿಸುವುದರ ಜೊತೆಗೆ ಥಿಯೇಟರ್ ತತ್ಕಾಲ್ ಎಂಬ ನಾಟಕ ಗುಂಪಿಗೆ ಸೇರಿದರು. ಅವರು ಟಿವಿ ಧಾರಾವಾಹಿಗಳಾದ ಮಗಳು ಜಾನಕಿ ಮತ್ತು ಜೀವನದಿಗಳಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ. ಭೀಮಾ (2023) ಚಿತ್ರದ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದರು.

ರಂಗಭೂಮಿ ಕಲಾವಿದೆಯಾಗಿ ಮೊದಲ ಬಾರಿಗೆ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದು ಬಹಳ ಭಯ  ಖುಷಿ  ಎಲ್ಲವು ಇತ್ತು ಹಾಗೆ ನನ್ನ ತಂಡ ಹಾಗೂ ವಿಜಯ್ ಸರ್ ತುಂಬಾ ಸಪೋರ್ಟ್ ಮಾಡಿದ್ದಾರೆ. ನಮ್ಮ ಅಪ್ಪನ ಅಮ್ಮನಿಗೆ ಈ ವರೆಗೂ ತಿಳಿದಿಲ್ಲ ಈ ಬಗ್ಗೆ ಅವರಿಗೂ ಕೊಡ ಸರ್ಪ್ರೈಸ್   ಆಗಿಯೇ ಇದೆ ಎಂದು ಕೊಡ ತಿಳಿಸಿದ್ದಾರೆ.