ಧರ್ಮಸ್ಥಳದ ಸುತ್ತ ಅಲೆದಾಡುತ್ತಿದೆ ಒಂದು ಹೆಣ್ಣು ಆತ್ಮ! ಆ ಆತ್ಮ ಯಾವುದು ಗೊತ್ತಾ?
ಪುರಾಣಗಳಲ್ಲಿ ಆತ್ಮಗಳ ಬಗ್ಗೆ ವೈವಿಧ್ಯಮಯವಾದ ವಿವರಣೆಗಳಿವೆ. ಕೆಲವು ಪುರಾಣಗಳಲ್ಲಿ ಆತ್ಮವು ಮೋಕ್ಷ ಅಥವಾ ದೇವಲೋಕಗಳಲ್ಲಿ ಶಾಂತಿಯನ್ನು ಹೊಂದುತ್ತದೆ ಎಂದು ಬರೆದಿಡಲಾಗಿದೆ. ಇನ್ನು ಕೆಲವರು ಹೇಳುವುದು ಕರ್ಮಗಳ ಪರಿಣಾಮವಾಗಿ ಅವರ ಮೋಕ್ಷ ಹಾಗೂ ಮರು ಜನ್ಮ ನಿರ್ಧಾರ ಆಗಲಿದೆ ಎಂದು ಹೇಳಲಾಗುವುದು. ಇನ್ನೂ ಮೋಕ್ಷ ಪಡೆದ ಆ ಆತ್ಮ ಮತ್ತೆ ಹುಟ್ಟಿ ಬರುತ್ತದೆ ಎಂಬ ನಂಬಿಕೆ ಇದೆ. ಇನ್ನೂ ಈ ವಿಷಯದಲ್ಲಿ ಅನೇಕ ಧಾರ್ಮಿಕ ದರ್ಶನಗಳಲ್ಲಿ ಭಿನ್ನಾಭಿಪ್ರಾಯಗಳಿವೆ ಎಂದ್ರೆ ತಪ್ಪಾಗಲಾರದು. ನಮ್ಮ ಸೈನ್ಸ್ ಹಾಗೂ ಟೆಕ್ನಾಲಜಿ ಎಷ್ಟೇ ಮುಂದುವರೆದಿದ್ದರೂ ಕೊಡ ಈ ವಿಚಾರಕ್ಕೆ ಬಂದಾಗ ಮೌನ ವಹಿಸುತ್ತಾರೆ.
ಕೆಲವು ಪುರಾಣಗಳ ಪ್ರಕಾರ, ದೇಹ ಸತ್ತ ನಂತರ ಆತ್ಮವು ಮೋಕ್ಷ ಅಥವಾ ಪರಲೋಕಕ್ಕೆ ಹೋಗಲಾಗದೇ ಇದ್ದರೂ ಅದು ಹೊಸ ದೇಹದಲ್ಲಿ ಹುಟ್ಟಬಹುದು ಅಥವಾ ಹೊಸ ದೇಹ ಸಿಗದೆ ಇದ್ದಾಗ ಆ ಆತ್ಮ ಅಲ್ಲಿಯೇ ಸಂಚಾರ ಕೊಡ ಮಾಡಬಹುದು. ಇದಕ್ಕೆ ದೇಹ ಸಂಚಾರ ಅಥವಾ ಪುನರ್ಜನ್ಮ ಎಂದು ಪುರಾಣಗಳ ಪ್ರಕಾರ ಹೇಳಲಾಗುವುದು. ಅನೇಕ ಪುರಾಣಗಳಲ್ಲಿ ದೇಹ ಸತ್ತ ನಂತರ ಆತ್ಮವು ವಿವಿಧ ಗತಿಗಳನ್ನು ಪಡೆಯುತ್ತದೆ ಎಂದು ಹೇಳಲಾಗಿದೆ. ಕೆಲವು ಪುರಾಣಗಳು ಅದು ಬ್ರಹ್ಮಲೋಕ, ಕೈವಲ್ಯ, ಕಾಳೀ ಲೋಕ ಮೊದಲಾದ ಸ್ಥಳಗಳಲ್ಲಿ ಶಾಂತಿಯನ್ನು ಹೊಂದುತ್ತದೆ ಎನ್ನುತ್ತವೆ. ಮತ್ತೆ ಕೆಲವು ಪುರಾಣಗಳು ಕರ್ಮಫಲದ ಆಧಾರದ ಮೇಲೆ ಹುಟ್ಟಿ ಬರುವುದು ಎಂದೂ ಹೇಳುತ್ತವೆ. ಧಾರ್ಮಿಕ ಹಿನ್ನೆಲೆಯಲ್ಲಿ ನಂಬಿಕೆಗಳು ವೈವಿಧ್ಯಮಯವಾಗಿರುವುದರಿಂದ, ದೇಹ ಬಿಟ್ಟ ನಂತರ ಆತ್ಮವು ಏನು ಮಾಡುವುದೆಂಬುದು ಧಾರ್ಮಿಕ ವಿಚಾರಗಳ ಬಗ್ಗೆ ವ್ಯಕ್ತಿಗತವಾಗಿ ಬದಲಾಗಬಹುದು.
ಇನ್ನೂ ಮಂಗಳೂರಿನ ಧರ್ಮಸ್ಥಳದಲ್ಲಿ 2012ರಲ್ಲೇ ನಡೆದಿರುವ ಘಟನೆಗೆ ಈ ವರೆಗೂ ನ್ಯಾಯ ದೊರಕಿಲ್ಲ. ನಾವು ಯಾವ ಪ್ರಕರಣದ ಬಗ್ಗೆ ಮಾತನಾಡುತ್ತಿದ್ದೇವೆ ಎಂದು ನಿಮಗೆಲ್ಲರಿಗೂ ಈಗಾಗಲೇ ತಿಳಿದಿರುತ್ತದೆ. ಹೌದು ಧರ್ಮಸ್ಥಳದ SDM ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಸೌಜನ್ಯ ಅವರು ಮನೆಯ ಹತ್ತಿರದಲ್ಲಿ ನಮಪತ್ತೆಯಾಗಿ ಅವರ ಮನೆಯ ಪಕ್ಕದ ನಾಲೆಯಲ್ಲಿ ಶವವಾಗಿ ಪತ್ತೆ ಆಗಿದ್ದರು. ಇನ್ನೂ ಆಕೆಯ ಮೇಲೆ ಅತ್ಯಾಚಾರ ಆಗಿದೆ ಎನ್ನುವ ಶಂಕೆಯ ಮೇಲೆ ಅದೇ ಊರಿನ ಶಂಕರ್ ಎನ್ನುವ ವ್ಯಕ್ತಿಯನ್ನು ಕೊಡ ಅರೆಸ್ಟ್ ಮಾಡಲಾಗಿತ್ತು. ಆದರೆ ಯಾವ ಸಾಕ್ಷಿ ಬಲವಾಗಿಲ್ಲದ ಕಾರಣದಿಂದ ಅವರನ್ನು ಬಿಡುಗಡೆ ಮಾಡಿ ಇಂದಿನ ವರೆಗು ಈ ಕೇಸ್ ಗೆ ಯಾವ ನ್ಯಾಯ ಸಿಕ್ಕಿಲ್ಲ. ಇನ್ನೂ ಆ ಊರಿನ ನಂಬಿಕೆ ಹಾಗೂ ಪುರಾಣಗಳ ಪ್ರಕಾರ ಸೌಜನ್ಯ ಅವರ ಆತ್ಮ ಸಮಯ ನೋಡಿ ತನ್ನ ಕೊಲೆ ಮಾಡಿದವರ ಮೇಲೆ ಸೇಡು ತೀರಿಸಿಕೊಳ್ಳುತ್ತಾರೆ ಎನ್ನುವ ನಂಬಿಕೆ ಇದೆ. ( video credit : FOCUS )