ಸಮರ್ಜಿತ್ ಜೊತೆ ಹಾಟ್ ಲುಕ್ ನಲ್ಲಿ ಫೋಟೋಶೂಟ್ ಮಾಡಿದ ಪುಟ್ಟ ಗೌರಿ! ಇಲ್ಲಿದೆ ಆ ಫೋಟೋಸ್

ಸಮರ್ಜಿತ್  ಜೊತೆ ಹಾಟ್ ಲುಕ್ ನಲ್ಲಿ ಫೋಟೋಶೂಟ್   ಮಾಡಿದ ಪುಟ್ಟ ಗೌರಿ! ಇಲ್ಲಿದೆ ಆ ಫೋಟೋಸ್

ನಮ್ಮ ಕಿರುತೆರೆಯ ರಂಗದಲ್ಲಿ "ಪುಟ್ಟ ಗೌರಿ" ಎಂದ ಕೂಡಲೇ ತಟ್ಟನೆ ನೆನಪಾಗುವ ಹೆಸರು ಎಂದರೆ ಅದು "ಸಾನಿಯಾ ಅಯ್ಯರ್". ಬಹಳ ಚಿಕ್ಕ ವಯಸ್ಸಿನಲ್ಲಿ ಬಣ್ಣ ಹಚ್ಚಿದ ಈ ಬೆಡಗಿ ಇಂದಿಗೂ ಆ ಪುಟ್ಟ ಗೌರಿ ಯಾಗಿಯೆ ಜನರಲ್ಲಿ ಅಚ್ಚಳಿದು ಬಿಟ್ಟಿದ್ದಾರೆ ಎಂದರೆ ತಪ್ಪಾಗಲಾರದು. ಇನ್ನೂ ಚಿಕ್ಕ ವಯಸ್ಸಿನಲ್ಲೆ "ದರ್ಶನ್" ಅವರೊಟ್ಟಿಗೆ ' ಗಜ'  ಸಿನಿಮಾ ಸೇರಿದಂತೆ ಇನ್ನೂ ಕೆಲವು ಸಿನಿಮಾಗಳಲ್ಲಿ ಬಾಲ ಕಲಾವಿದೆಯಾಗಿ ಕಾಣಿಸಿಕೊಂಡಿದ್ದಾರೆ. ಅದಾದ ಬಳಿಕ ಈ ನಟಿ ಎಂಟ್ರಿ ಕೊಟ್ಟಿದ್ದು ಕಿರುತೆರೆಗೆ. "ಪುಟ್ಟ ಗೌರಿ" ಎಂಬ ಧಾರಾವಾಹಿಯ ಮೂಲಕ ಈ ಬಾಲ ಕಲಾವಿದೆ ಕೊಡ ಪುಟ್ಟ ಗೌರಿ ಆಗಿ ಜನರ ಮನಸ್ಸು ಗೆದ್ದಿದ್ದರು. ಎಷ್ಟರ ಮಟ್ಟಿಗೆ ಎಂದ್ರೆ ಇಂದಿಗೂ ಕೂಡ ಈಕೆಯನ್ನು ಸಾನಿಯಾ ಅಯ್ಯರ್ ಎನ್ನುವುದಕ್ಕಿಂತ ಪುಟ್ಟ ಗೌರಿ ಎನ್ನುವ ಹೆಸರಲ್ಲಿ ಗುರುತಿಸುವವರೆ ಹೆಚ್ಚು ಎಂದರೆ ತಪ್ಪಾಗಲಾರದು.

ಇನ್ನೂ ಈ ಪುಟ್ಟ ಗೌರಿ ಧಾರಾವಾಹಿ ಮುಗಿದ ಬಳಿಕ ತಮ್ಮ ವಿದ್ಯಾಭ್ಯಾಸದ ಕಡೆಗೆ ಈಕೆಯ ಚಿತ್ತ ಸೆಳೆದಿತ್ತು. ಅದಾದ ಬಳಿಕ ಈ ನಟಿ ಕ್ಯಾಮರಾ ಮುಂದೆ ಬಂದಿದ್ದು ಎಂದರೆ ಅದು ಕಳೆದ ಬಾರಿಯ "ಓಟಿಟಿ ಸೀಸನ್ 1"ರ ಮೂಲಕ. ಇನ್ನೂ ಅಲ್ಲಿಯೂ ಕೊಡ ಅವರ ಸರಳತೆಗೆ ಜನರ ಮನಸ್ಸನ್ನು ಗೆದ್ದು ಓಟಿಟಿ ಸೀಸನ್ ನಿಂದಾ ನೇರ ಟಿವಿ ಸಿಸನ್ ಪ್ರವೇಶ ಕೂಡ ಪಡೆದುಕೊಂಡರು. ಇನ್ನೂ ಅಲ್ಲಿಯೂ ಉತ್ತಮ ಪ್ರದರ್ಶನ ನೀಡಿ ಫಿನಾಲೆ ಹತ್ತಿರದ ದಿನಗಳಲ್ಲಿ ಈಕೆ ಮನೆಯಿಂದ ಹೊರ ಬಂದರು. ಆ ನಂತರ ಕೂಡ ಈಕೆ ಸಿನಿಮಾ ರಂಗಕ್ಕೆ ಎಂಟ್ರಿ ಕೊಡಬಹುದು ಎನ್ನುವ ಮಾತುಗಳು ಕೂಡ ಕೇಳಿ ಬರುತ್ತಿತ್ತು. ಆದರೆ ಯಾವುದು ಕಚಿತ ಮಾಹಿತಿ ಅಧಿಕೃತವಾಗಿ ಹೊರಬಿದ್ದಿರಲಿಲ್ಲ. ಆದರೆ ಇದೀಗ ಎಲ್ಲವು ಅಧಿಕೃತವಾಗಿ. ಇನ್ನೂ ಸಾನಿಯಾ ಅಯ್ಯರ್ ಅವರ ಸಿನಿಮಾ ನಾಯಕ ನಟ ಹಾಗೂ ಟೈಟಲ್ ಕೂಡ ರಿವಿಲ್ ಆಗಿದ್ದು ಈ ಸಿನಿಮಾ ಪೋಸ್ಟರ್ ಹಾಗೂ ಲುಕ್ ಕೂಡ ಸಿಕ್ಕಾಪಟ್ಟೆ ವೈರಲ್ ಆಗಿದೆ.  

ಇನ್ನೂ ಸಾನಿಯಾ ಅಯ್ಯರ್ ಅವರು ನಮ್ಮ ಸ್ಯಾಂಡಲ್ ವುಡ್ ನ ಖ್ಯಾತ ನಿರ್ದೇಶಕ ಹಾಗೂ ನಿರ್ಮಾಪಕ ಎಂದು ಪ್ರಸಿದ್ದಿ ಪಡೆದಿರುವ "ಇಂದ್ರಜಿತ್ ಲಂಕೇಶ್" ಅವರ ಪುತ್ರ "ಸಮರ್ಜಿತ್ ಲಂಕೇಶ್" ಅವರೊಟ್ಟಿಗೆ ತೆರೆ ಹಂಚಿಕೊಳ್ಳುತ್ತಿದ್ದು. ಇನ್ನೂ ಇವರಿಬ್ಬರ ಈ ನಟನೆಗೆ "ಗೌರಿ" ಎಂಬ ಶ್ರೀಶಿಕೆ ನೀಡಲಾಗಿದೆ. ಇನ್ನೂ ಈ ಚಿತ್ರದ ಮೊದಲ ಲುಕ್ ಅನ್ನು KGF ಸಿನಿಮಾ ಖ್ಯಾತಿಯ ಕ್ಯಾಮರಾಮ್ಯಾನ್ "ಭುವನ್ ಗೌಡ" ಹಾಗೂ "ಕಬ್ಜ " ಕ್ಯಾಮಾರಾಮ್ಯಾನ್ "ಎ.ಜೆ.ಶೆಟ್ಟಿ"  ಫೋಟೋಶೂಟ್ ಮಾಡಿದ್ದು ಇವರು ತೆಗೆದಿರುವ ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗಿದೆ. ಇನ್ನೂ ಈ ಜೋಡಿ ಗಾಂಧಿ ನಗರದಲ್ಲಿ ಚೂಚ್ಚಲ ಹೆಜ್ಜೆಯನ್ನು ಇಡಿತ್ತುದ್ದು. ಇವರಿಗೆ ತಮ್ಮ ಮೊದಲ ಸಿನಿಮಾ ಮೂಲಕ ದೊಡ್ಡ ಮಟ್ಟದ ಯಶಸ್ಸು ಸಿಗಲಿ ಎಂದು ನಾವೆಲ್ಲರೂ ಆಶಿಸೋಣ. ( video credit :first day first show kannada )