ಗಂಡಸರ ಸಾಮರ್ಥ್ಯ ಮ್ಯಾಗಿ ಮಾಡಿದ ಹಾಗೆ ಎರಡೇ ನಿಮಿಷಕ್ಕೆ ಔಟ್ ಎಂದ ನಟಿ ವಿಡಿಯೋ ವೈರಲ್ ..! ನೆಟ್ಟಿಗರು ಗರಂ

ಗಂಡಸರ ಸಾಮರ್ಥ್ಯ ಮ್ಯಾಗಿ ಮಾಡಿದ ಹಾಗೆ ಎರಡೇ ನಿಮಿಷಕ್ಕೆ ಔಟ್ ಎಂದ ನಟಿ  ವಿಡಿಯೋ ವೈರಲ್ ..! ನೆಟ್ಟಿಗರು ಗರಂ

ಸ್ಟಾರ್ ಸೆಲೆಬ್ರಿಟಿ ಅಂದ ತಕ್ಷಣ ಅವರು ತುಂಬಾನೇ ಸುದ್ದಿಯಲ್ಲಿರುತ್ತಾರೆ. ಖಾಸಗಿ ವಾಹಿನಿಗಳಲ್ಲಿ ಅಥವಾ ಸಂದರ್ಶನಗಳಲ್ಲಿ ಮಾತನಾಡುವಾಗ ಕೆಲವೊಂದಿಷ್ಟು ಎಡವಟ್ಟು ಮಾಡಿಕೊಂಡು ಬಿಡುತ್ತಾರೆ. ಆದರೆ ಆ ರೀತಿ ಎಡವಟ್ಟು ಮಾಡಿಕೊಳ್ಳುವುದು ಇದೇ ಮೊದಲೇನಲ್ಲ. ಒಬ್ಬರು ಒಂದು ಸ್ಟಾರ್ ಸ್ಥಾನಕ್ಕೆ ಹೋಗಿದ್ದಾರೆ ಎಂದರೆ ಪ್ರತಿಯೊಂದು ಮಾತಿನ ಮೇಲೆ ಹೆಚ್ಚು ನಿಗಾ ಇರಬೇಕು. ಸಾರ್ವನಿಕವಾಗಿ ಯಾವ ರೀತಿ ಮಾತನಾಡಬೇಕು, ಯಾವ ರೀತಿ ಮಾತನಾಡಬಾರದು ಎನ್ನುವ ಸಣ್ಣ ಅರಿವು ಅವರಿಗೆ ಇರಬೇಕು.. ಇಡೀ ಮನೆಮಂದಿ ಕುಳಿತುಕೊಂಡು ನೋಡುವ ಟಿವಿ ಕಾರ್ಯಕ್ರಮಗಳ ಬಗ್ಗೆ ಮೊದಲೇ ಅವರಿಗೆ ಅರಿವು ಇರಬೇಕು ಅಲ್ವೇ.

ಹೌದು ಅಂತಹವರ ಸಾಲಿಗೆ ಇದೀಗ ನಟಿ ರೇಜಿನಾ ಕಸಂದ್ರ ಸೇರಿದ್ದಾರೆ ಗೆಳೆಯರೇ. ಇತ್ತೀಚಿಗೆ ಸಾಕಿನಿ ಡಾಕಿನ ಎನ್ನುವ ಸಿನಿಮಾ ಪ್ರಮೋಶನ್ ನಲ್ಲಿ ನಟಿ ರೇಜಿನಾ ಕಸಂದ್ರ ಹಾಗೂ ನಿವೇದ ಥಾಮಸ್ ಅವರು ಕಾಣಿಸಿಕೊಂಡಿದ್ದರು.. ಸಂದರ್ಶನದಲ್ಲಿ ಮಾತನಾಡುವ ವೇಳೆ ರೇಜೆನಾ ಕಸಂದ್ರ ಅವರು ಪುರುಷರ ಬಗ್ಗೆ ನನಗೆ ಒಂದು ಜೋಕ್ ಇದೆ, ಆದರೆ ಅದನ್ನು ಇಲ್ಲಿ ಹೇಳಬೇಕು ಬೇಡ್ವೋ ನನಗೆ ಗೊತ್ತಾಗುತ್ತಿಲ್ಲ, ಆದರೂ ಹೇಳುತ್ತೇನೆ, ಪುರುಷರ ಲೈಂಗಿಕ ಸಾಮರ್ಥ್ಯ ಮ್ಯಾಗಿ ಮಾಡಿದ ರೀತಿ, ಕೇವಲ ಎರಡು ನಿಮಿಷದಲ್ಲಿ ಟುಸ್ ಆಗಿ ಬಿಡುತ್ತಾರೆ ಎಂದು ನಗು ಚೆಲ್ಲಿದ್ದಾರೆ ಎನ್ನಲಾಗಿ ಈ ಹೇಳಿಕೆಯನ್ನು ಕೊಟ್ಟಿದ್ದಾರೆ ಎಂದು ತಿಳಿದು ಬಂದಿದೆ.    

ಈ ಹೇಳಿಕೆಯ ನಂತರ ಈ ನಟಿಯನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡಲಾಗುತ್ತಿದ್ದು, ಪುರುಷರ ಸಾಮರ್ಥ್ಯದ ಬಗ್ಗೆ ನಿಮಗೇನು ಗೊತ್ತು, ಅದೇ ಎರಡು ನಿಮಿಷದ ಕೆಲಸಕ್ಕೆ 9 ತಿಂಗಳು ನಿಮ್ಮ ಮೇಲೆ ಅತಿ ದೊಡ್ಡ ಪ್ರಭಾವ ಬೀರುವುದಿಲ್ಲವೇ ಎಂದು ಮರು ಪ್ರಶ್ನೆ ಮಾಡಿದ್ದಾರೆ. ಇನ್ನೂ ಕೆಲವರು ನಟಿಯ ಕಾಲೆಳೆದಿದ್ದಾರೆ. ಈ ಹೇಳಿಕೆ ಎಷ್ಟು ಗಲೀಜು ಆಗಿದೆ ಈ ರೀತಿ ಮಾತನಾಡಬಾರದು ರೆಜಿನಾ ಎಂದು ಇನ್ನೂ ಕೆಲವರು ಕಮೆಂಟ್ ಮೂಲಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ. ಹೌದು ನಟಿಯ ಹೇಳಿಕೆ ಪ್ರಕಾರ ಈ ಪುರುಷರ ಎರಡು ನಿಮಿಷದ ಮ್ಯಾಗಿ ಮಾತಿನ ಬಗ್ಗೆ ನಿಮ್ಮ ಅನಿಸಿಕೆ ಏನು.? ಪುರುಷರ ಸಾಮರ್ಥ್ಯ ಮ್ಯಾಗಿ ಮಾಡಿದ ರೀತಿ ಕೇವಲ ಎರಡು ನಿಮಿಷ ಅಷ್ಟೇ ಇರುತ್ತದೆಯಾ, ಅಥವಾ ಬೇರೆ ರೀತಿಯಲ್ಲಿ ಈ ನಟಿಯ ಮಾತಿಗೆ ನಿಮ್ಮದೇ ಆದ ಮಾತಿನಲ್ಲಿ ಉತ್ತರ ತಿಳಿಸಿ, ಧನ್ಯವಾದಗಳು...