ಸೀತಾರಾಮ ಎನ್ನುವ ಧಾರಾವಾಹಿ ಬರುವ ಸಿಹಿಯ ಪಾತ್ರ ಮಾಡುತ್ತಿರುವ ಮಗುವಿನ ಕಥೆ ಕೇಳಿದರೆ ಕಣ್ಣೀರು ಬರುತ್ತದೆ..?
ಜೀ ಕನ್ನಡ ವಾಹಿನಿ ಮನರಂಜನೆ ನೀಡುವಲ್ಲಿ ಸದಾ ಮುಂದಿರುತ್ತೆ. ಈಗಾಗಲೇ ಹಲವು ಧಾರಾವಾಹಿಗಳು ನೀಡಿದೆ. ಜೀ ಕನ್ನಡದಲ್ಲಿ ಸೀತಾರಾಮ ಎನ್ನುವ ಧಾರಾವಾಹಿ ಬರುತಿದ್ದು. ಕಲರ್ಸ್ ಕನ್ನಡದ ನಟರು ಈಗ ಜೀ ಕನ್ನಡದಲ್ಲಿ ಅಭಿನಯ. ನಾಯಕನಾಗಿ ಅಂದ್ರೆ ರಾಮನ ಪಾತ್ರವನ್ನು ಮಂಗಳಗೌರಿ ಧಾರಾವಾಹಿ ಖ್ಯಾತಿಯ ಗಗನ್ ಚಿನ್ನಪ್ಪ ಮಾಡಲಿದ್ದಾರೆ. ಪ್ರೋಮೋ ಒಂದನ್ನು ಬಿಟ್ಟಿದ್ದಾರೆ. ನಾಯಕಿಯಾಗಿ ಅಗ್ನಿಸಾಕ್ಷಿ ಖ್ಯಾತಿಯ ವೈಷ್ಣವಿ ಗೌಡ ಇರಲಿದ್ದಾರೆ. ಈ ಧಾರಾವಾಹಿಯಲ್ಲಿ ಸೀತೆಯ ಪಾತ್ರವನ್ನು ಮಾಡುತ್ತಿದ್ದಾರೆ.
ಈ ದಾರವಾಹಿಯಲ್ಲಿ ಸಿಹಿಯ ಪಾತ್ರ ಮಾಡುತ್ತಿರುವ ಮಗುವಿನ ಹೆಸರು ರೀತು ಸಿಂಗ್. ಈ ಮಗು ಕನ್ನಡದವಳಲ್ಲ ಆದರೂ ತುಂಬಾ ಚೆನ್ನಾಗಿ ಪಾತ್ರವನ್ನು ನಿರ್ವಹಿಸುತ್ತದೆ ಆದರೆ ಈ ಮಗುವಿನ ಹಿಂದಿನ ಕಥೆಯನ್ನು ಕೇಳಿದರೆ ಕರುಳು ಹಿಂಡುತ್ತದೆ. ಈ ಮಗು ನೇಪಾಳ ಮೂಲದವರು ಇದರ ವಯಸ್ಸು ಕೇವಲ 4 ವರ್ಷ ಆದರೆ ಇಷ್ಟು ಚಿಕ್ಕವಯಸಿಗೆ ಇವಳು ಆಡುವ ಮಾತನ್ನು ಕೇಳಿ ಮತ್ತು ನಟನೆ ನೋಡಿ ಎಷ್ಟೋ ಮಂದಿ ನಮಗೆ ಈ ತರಹದ ಮಗು ಇರಬಾರದಿತ್ತೆ ಅಂದುಕೊಳ್ಳುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲಂತು ಈಕೆಯ ನಟನೆಗೆ ಬರಪೂರ ಪ್ರಶಂಸೆ ದೊರೆಯುತ್ತಿದೆ.
ತುಂಬಾ ಚೆನ್ನಾಗಿ ಪಾತ್ರ ಮಾಡುತ್ತಿರುವ ಈ ಮಗು ದಿನವೂ ಎಲ್ಲರನ್ನೂ ನಕ್ಕು ನಗಿಸುತ್ತ ನಟನೆ ಮಾಡುತ್ತಾ ಸಾಗುತ್ತಿದೆ ಆದರೆ ಈ ಮಗು ಶುಗರ್ ಕಾಯಿಲೆಯಿಂದ ಬಳಲುತ್ತಿದ್ದು ದಿನನಿತ್ಯ ಇಂಜೆಕ್ಷನ್ ತಗೊಂಡು ಜೀವಿಸುತ್ತಿದೆ ಎಂಥಾ ದುಃಖದ ಸಂಗತಿ ನೋಡಿ. ಮತ್ತು ಈ ಮಗು ತಂದೆಯನ್ನು ಕಳೆದುಕೊಂಡಿರುತ್ತದೆ ಇದನ್ನು ಧಾರವಾಹಿ ತಂಡದವರೇ ಆಡಿಸುತ್ತಾ ನಗಿಸುತ್ತ ನೋಡಿಕೊಳ್ಳುತ್ತಿದ್ದಾರೆ ಈ ಮಗು ಹಿಂದೆ ಡ್ರಾಮಾ ಜೂನಿಯರ್ಸ್ ನಲ್ಲೂ ಭಾಗವಹಿಸುತ್ತಿತ್ತು. ಯಾವಾಗಲೂ ತಾನು ರವಿಚಂದ್ರನ್ ಅವರ ಗರ್ಲ್ ಫ್ರೆಂಡ್ ಎಂದು ಹೇಳಿಕೊಳ್ಳುತ್ತಿತ್ತು. ಮೂಲವಾಗಿ ನೇಪಾಳ ಮೂಲದವರಾದ ರಿಕುಸಿಂಗ್ ಅಲಿಯಾ ಸಿಹಿ ಮತ್ತು ಅವಳ ಕುಟುಂಬದವರು ಈಗ ಸದ್ಯಕ್ಕೆ ಬೆಂಗಳೂರಿನಲ್ಲಿ ವಾಸ್ತವ್ಯವನ್ನು ಹೂಡಿದ್ದಾರೆ. ( video credit :Kannada Zone )