ದೇಹದ ಅಂಗಾಗ ತೋರಿಸಿ ಜಿಮ್ ಮಾಡುವದಲ್ಲ ಸೀರೆ ಉಟ್ಟು ಮಾಡಿ ತೋರಿಸಿ ಎಂದ ಭಾರತೀಯ ನಾರಿ ಭೇಷ್ ಎಂದ ನೆಟ್ಟಿಗರು ; ವಿಡಿಯೋ ವೈರಲ್
ಜಿಮ್ ಮಾಡ ಬೇಕಾದರೆ ಅದಕ್ಕೆ ತಕ್ಕಂತ ಬಿಗಿಯಾದ ಉಡುಪು ಧರಿಸಿ ಮಾಡುವುದು ಸಾಮಾನ್ಯ . ಆದರೆ ಅಂತಹ ಬಟ್ಟೆಯಲ್ಲಿ ದೇಹದ ಅಂಗಾಗ ಎತ್ತಿ ಕಾಣಿಸುತ್ತದೆ . ನೋಡುಗರ ದ್ರಷ್ಟಿಯನ್ನು ಕೆರಳಿಸುತ್ತದೆ . ಆದರೆ ಈಗ ಕೆಲವು ಮಹಿಳೆಯರು ಭಾರತದ ಸೀರೆ ಧರಿಸಿ ಸಹ ಜಿಮ್ ಮಾಡ ಬಹುದು ಎಂದು ತೋರಿಸಿ ಕೊಟ್ಟಿದಾರೆ . ಅವರು ಯಾರೆಂದು ನೋಡಣ ಬನ್ನಿ
ಸೀರೆಯುಟ್ಟರೆ ವ್ಯಾಯಾಮ ಸಾಧ್ಯವೇ ಇಲ್ಲ ಎನ್ನುವರು ಹೆಚ್ಚು. ಆದರೆ ರೀನಾ ಸಿಂಗ್ ಈ ನಂಬಿಕೆಯನ್ನು ಸೀರೆಯುಟ್ಟೇ ವ್ಯಾಯಾಮ ಮಾಡಿ ಮುರಿದಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಅನೇಕರು ಪ್ರೇರಣೆಗೊಂಡಿದ್ದಾರೆ. ಸೀರೆ ಬಿಟ್ಟರೆ ಬೇರೆ ದಿರಿಸುಗಳನ್ನು ಧರಿಸುವುದಿಲ್ಲ ಎಂದು ರ್ಧರಿಸಿದವರಿಗೂ ರೀನಾ ಮಾದರಿ.
24 ವರ್ಷದ ಜಿಮ್ನಾಸ್ಟಿಕ್ ಪರಿಣಿತೆ ಪಾರೂಲ್ ಅರೋರಾ (Parul Arora) ಸೀರೆಯಲ್ಲಿ ಬ್ಯಾಕ್ಫ್ಲಿಪ್ ಮಾಡಿದ ಕ್ಷಣಗಳು ನಿಮ್ಮ ಮೈನವಿರೇಳಿಸುತ್ತವೆ. ಜಿಮ್ಯಾಸ್ಟಿಕ್ನ ಉಡುಗೆಯಂತೆ ಸೀರೆ ಧರಿಸಿದಾಗಲೂ ಸರಾಗವಾಗಿ ಪ್ರದರ್ಶನ ನೀಡಿದ್ದಾರೆ. ಇದೂ ಕೂಡ ಸಾಮಾಜಿಕ ಜಾಲತಾಣದಲ್ಲಿ ಜನಮನಸೂರೆಗೊಂಡು ವೈರಲ್ ಆಗಿದೆ..
ನರ್ತಕಿ ರುಕ್ಮಿಣಿ ವಿಜಯಕುಮಾರ್ (Rukmini Vijayakumar) ಕಚ್ಚೆ ಸೀರೆಯುಟ್ಟು ಯೋಗ ಮತ್ತು ಸಾಹಸದಿಂದ ಮಿಳಿತಗೊಂಡ ನಮಾಮಿ ಯೋಗ ವಿದ್ಯೆ ಎಂಬ ನೃತ್ಯ ಪ್ರದರ್ಶನವನ್ನು ಮಾಡಿದ್ದಾರೆ. ಇದು ಅನೇಕರನ್ನು ಬೆರಗುಗೊಳಿಸಿದೆ. ಸರಿಯಾಗಿ ಸೀರೆ ಉಟ್ಟುಕೊಂಡರೆ ಏನೆಲ್ಲವನ್ನೂ ಮಾಡಬಹುದು ಎಂಬ ಆತ್ಮವಿಶ್ವಾಸ ಅವರದು.