ಮಣ್ಮುಕ್ ಹಾವಿನ ಬಗ್ಗೆ ನಿಮಗೆಷ್ಟು ಗೊತ್ತು..! ಇದನ್ನ ಸಾಗಾಟ ಮಾಡಿದರೆ ಎಷ್ಟು ವರ್ಷ ಜೈಲಶಿಕ್ಷೆ ಗೊತ್ತೇ
ಹೌದು, ಈ ಹಾವನ್ನು ನೀವು ಸಾಮಾನ್ಯವಾಗಿ ಹಳ್ಳಿಗಳಲ್ಲಿ ಹೊಲಗಳಲ್ಲಿ ಗುಡ್ಡಗಳಲ್ಲಿ ನೋಡಿರುತ್ತೀರಿ. ಈ ಹಾವನ್ನು ಇಂಗ್ಲಿಷ್ ನಲ್ಲಿ ಸ್ಯಾಂಡ್ ಗೋವಾ ಎಂದು ಕರೆಯುತ್ತಾರೆ..ಇದನ್ನ ಕೆಲವರು ಎರಡು ತಲೆ ಹಾವು ಎಂದು ಕರೆಯುವುದು ಉಂಟು. ಇದನ್ನು ಹಳ್ಳಿಗಳಲ್ಲಿ ಆಡು ಭಾಷೆಯಲ್ಲಿ ಹೇಳುವುದಾದರೆ ಮಣ್ಮುಕ್ ಹಾವು ಎಂದು ಕರೆಯಲಾಗುತ್ತದೆ..ಈ ಹಾವು ವಿಶೇಷವಾಗಿ ಹೆಚ್ಚಾಗಿ ಕಂಡುಬರುವುದಿಲ್ಲ ಸಿಟಿಗಳಲ್ಲಿ ಕಾಣುವುದಿಲ್ಲ. ಇದನ್ನು ಕೆಲವರು ಬೇರೆ ಬೇರೆಯ ಕೆಲಸಕ್ಕೆ ಉಪಯೋಗಿಸಿಕೊಳ್ಳುತ್ತಾರೆ ಎಂದು ಕೇಳಿಬಂದಿದೆ. ಈ ಹಾವಿಗೆ ಅತ್ಯಮೂಲ್ಯವಾದ ಬೆಲೆ ಕೂಡ ಇದೆ ಎಂದು ಕೆಲವು ಕಡೆ ಕೇಳಿ ಬಂದಿದೆ.
ಈ ಹಾವನ್ನು ಯಾರು ಕೂಡ ಕಳ್ಳ ಸಾಗಾಣಿಕೆ ಮಾಡಬಾರದು, ಯಾರು ಕೂಡ ಹಿಡಿದುಕೊಂಡು ಮನೆಯಲ್ಲಿ ಇಟ್ಟುಕೊಳ್ಳಬಾರದು, ಒಂದು ವೇಳೆ ಆ ರೀತಿ ಕಳ್ಳ ಸಾಗಾಣಿಕೆ ಈ ಮಣ್ಮುಕ್ ಹಾವನ್ನು ಮಾಡಿದರೆ ಸುಮಾರು ಏಳು ವರ್ಷಗಳ ಕಾಲ ಜೈಲು ಶಿಕ್ಷೆ, ಅದು ದಂಡ ರಹಿತ ಆಗಿರಲಿದೆ. ಈ ಶಿಕ್ಷೆ ಜೊತೆಗೆ 32 ಸಾವಿರ ರೂಪಾಯಿ ಹಣವನ್ನು ಕಟ್ಟಬೇಕಾಗುತ್ತದೆ. ಈ ಹಾವಿಗೆ ಎರಡು ತಲೆ ಇದೆ ಎನ್ನುತ್ತಾರೆ. ಅದು ಸುಳ್ಳು ಒಂದೇ ತಲೆ ಈ ಹಾವಿಗೆ ಇರುತ್ತದೆ. ಇನ್ನೊಂದು ಕೂಡ ಹಾವಿನ ತಲೆಯಂತೆಯೇ ಬಾಲ ಕೂಡ ಬಾಸವಾಗುತ್ತದೆ ಹಾಗಾಗಿ ಕೆಲವರು ಎರಡು ತಲೆ ಹಾವು ಎನ್ನುತ್ತಾರೆ.
ಇದಕ್ಕೆ ಇರುವುದು ಒಂದು ತಲೆ ಮಾತ್ರ. ಜೊತೆಗೆ ಇದು ಎರೆಹುಳದಂತೆ ಮಣ್ಣನ್ನು ಸೇವಿಸುವುದು. ಸುಮಾರು ಒಂದು ವರ್ಷಗಳ ಕಾಲ ಏನನ್ನು ತಿನ್ನದೇ ಹಾಗೆ ಇದ್ದು ಬದುಕಬಲ್ಲದು.. ಇನ್ನು ಕೆಲವರು ಹೇಳುತ್ತಾರೆ ಈ ಹಾವನ್ನು ಬಳಸಿ ಕೆಲವರು ಮಾಟ ಮಂತ್ರ ಮಾಡುತ್ತಾರೆ ಎಂದು..ಜೊತೆಗೆ ಈ ಹಾವನ್ನು ಮಾರಾಟ ಮಾಡುವ ಮೂಲಕ ಇದರಲ್ಲಿ ಬಂಗಾರ ಸಿಗುತ್ತದೆ ಎನ್ನುವ ಕೆಲವರ ಮಾತು ಕೂಡ ಆಗಾಗ ಕೇಳಿ ಬರುತ್ತದೆ.. ಈ ಮಣ್ಮುಕ್ ಹಾವಿನಲ್ಲಿ ಕೆಲವು ವಿಶೇಷತೆ ಇದ್ದು ಇಂಜೆಕ್ಷನ್ ಮೂಲಕ ಬಣ್ಣ ಬದಲಾಯಿಸಿ ಬಂಗಾರ ತಯಾರು ಮಾಡುತ್ತಾರೆ ಹಾಗೆ ಹೀಗೆ ಎಂದು ಹಳ್ಳಿಗಳ ಕಡೆ ಹೇಳುತ್ತಾರೆ. ಅದು ಎಷ್ಟರಮಟ್ಟಿಗೆ ಸತ್ಯ ಎಷ್ಟರಮಟ್ಟಿಗೆ ಸುಳ್ಳು ಎಂದು ಯಾರಿಗೂ ಕೂಡ ಗೊತ್ತಿಲ್ಲ.. ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ... ಜೊತೆಗೆ ಬಂಗಾರ ನಮ್ಮ ಪ್ರಪಂಚದಲ್ಲಿ ಎಷ್ಟಿದೆ ಅದು ಭೂಮಿ ಮೇಲೆ ಹೆಚ್ಚು ಬಂದರೆ, ಅದರ ಬೆಲೆ ಹೇಗೆ ಕಡಿಮೆ ಆಗುತ್ತದೆ. ಜೊತೆಗೆ ಗುರು ಗ್ರಹ ದೈತ್ಯವಾದ ಧೂಮಕೇತುಗಳಿಂದ ನಮ್ಮ ಭೂಮಿಯನ್ನು ಹೇಗೆ ರಕ್ಷಣೆ ಮಾಡುತ್ತದೆಂದು ಈ ವಿಡಿಯೋ ನೋಡಿ ತಿಳಿದುಕೊಳ್ಳಿ. ಈ ವಿಡಿಯೋ ತುಂಬಾನೇ ಇನ್ಫಾಮೆಟಿಕ್ ಆಗಿದೆ. ಕೆಲವೊಂದಿಷ್ಟು ವಿಚಾರಗಳನ್ನು ನೀವೂ ಸಹ ಖಂಡಿತ ಇದರಿಂದ ತಿಳಿದುಕೊಳ್ಳುವಿರಿ, ಧನ್ಯವಾದಗಳು...( video credit : KK.TV )