ಇನ್ಮುಂದೆ ಇಂತಹ ಕುಟುಂಬದ ರೇಷನ್ ಕಾರ್ಡ್ ಸಂಪೂರ್ಣ ಬಂದ್ ಆಗಲಿದೆ,ರಾಜ್ಯ ಸರ್ಕಾರದ ಮಹತ್ವದ ಘೋಷಣೆ

ಇನ್ಮುಂದೆ ಇಂತಹ ಕುಟುಂಬದ ರೇಷನ್ ಕಾರ್ಡ್ ಸಂಪೂರ್ಣ ಬಂದ್ ಆಗಲಿದೆ,ರಾಜ್ಯ ಸರ್ಕಾರದ ಮಹತ್ವದ ಘೋಷಣೆ
ಬಿಪಿಎಲ್ ರೇಷನ್ ಕಾರ್ಡ್ ಹೊಂದಿರುವ ಕುಟುಂಬವಾಗಿದ್ದು, ಮನೆಯಲ್ಲಿ ಯಾರ ಹೆಸರಲ್ಲಾದರೂ ಕಾರ್ ಇದ್ದವರಿಗೆ ಇದೀಗ ರಾಜ್ಯ ಸರ್ಕಾರದಿಂದ ಶಾಕಿಂಗ್ ಸುದ್ದಿಯೊಂದು ಹೊರಬಿದ್ದಿದೆ. ಬಿಪಿಎಲ್ ಕಾರ್ಡ್ ಗೂ ಕಾರಿಗೂ ಏನು ಲಿಂಕ್ ಎಂದು ಪ್ರಶ್ನೆಯೊಂದು ಮೂಡಿದ್ದರೆ ಈ ಲೇಖನದಲ್ಲಿ ಅಸಲಿ ವಿಚಾರವನ್ನು ತಿಳಿದುಕೊಳ್ಳಬಹುದು. 
 
ವೈಟ್ ಬೋರ್ಡ್ ಕಾರಿದ್ದರೆ ಬಿಪಿಎಲ್ ಕಾರ್ಡ್ ರದ್ದು ಪಕ್ಕನಾ?
ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ ಕೆ.ಎಚ್. ಮುನಿಯಪ್ಪ  ನವರು, “ವೈಟ್ ಬೋರ್ಡ್ ಕಾರು  ಹೊಂದಿರುವ ಕುಟುಂಬದ ಬಿಪಿಎಲ್ ಕಾರ್ಡ್ ರದ್ದು ಮಾಡಲಾಗುತ್ತದೆ. ಯಲ್ಲೋ ಬೋರ್ಡ್ ಕಾರು (Yellow Board Car) ಹೊಂದಿರುವವರ ಬಿಪಿಎಲ್ ಕಾರ್ಡ್ ರದ್ದನ್ನು ವಾಪಸ್ಸು ಪಡೆಯಲು ಚಿಂತನೆ ನಡೆಸಲಾಗುತ್ತಿದೆ. ದುಡಿಮೆಗಾಗಿ ಕಾರು ಖರೀದಿಸಿದವರ ಕಾರ್ಡ್ ನ್ನು ರದ್ದು ಮಾಡಲಾಗುವುದಿಲ್ಲ. ಸ್ವಂತ ಕಾರು ಯಾರು ಹೊಂದಿರುತ್ತಾರೆ ಅವರಿಗೆ ಬಿಪಿಎಲ್ ಕಾರ್ಡ್ ಅನ್ನು ರದ್ದು ಮಾಡಲಾಗುವುದು” ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ.  
 
ಸೆಪ್ಟೆಂಬರ್ ನಿಂದ 10 ಕೆಜಿ ಅಕ್ಕಿ ನೀಡಲು ಚಿಂತನೆ
“ಅನ್ನಭಾಗ್ಯದ ಉದ್ದೇಶ ಹಸಿದವರಿಗೆ ಅನ್ನ ಕೊಡಬೇಕು ಎಂಬುದು. ಈವರೆಗೆ ಒಂದು ಕೋಟಿ ಕುಟುಂಬಗಳಿಗೆ ಯೋಜನೆ ಅಡಿಯಲ್ಲಿ ಸುಮಾರು ₹556 ಕೋಟಿ ಹಣವನ್ನ ಹಣ ವರ್ಗಾಯಿಸಲಾಗಿದೆ. ಇದರಿಂದ 3.50 ಕೋಟಿ ಫಲಾನುಭವಿಗಳಿಗೆ ಅನುಕೂಲ ಆಗಿದೆ. ರೇಷನ್ ಕಾರ್ಡ್‌ಗಳಿಗೆ ಹೊಸ ಸದಸ್ಯರ ಸೇರ್ಪಡೆಗೆ ಅವಕಾಶ ಕೊಡಲಾಗಿದೆ.
 
ಈಗಾಗಲೇ ಹೊಸ ಪಡಿತರ ಚೀಟಿ ಪಡೆಯಲು ಅನುಮತಿ ನೀಡಲಾಗಿದೆ. ರಾಗಿ, ಜೋಳಕ್ಕೆ ಬೆಂಬಲ ಬೆಲೆ ಹೆಚ್ಚಸುವಂತೆ ಕೋರಿ ಕೇಂದ್ರ ಸಚಿವರಿಗೆ ಮನವಿ ಮಾಡಲಾಗುತ್ತಿದೆ. ಅದೇ ರೀತಿಯಾಗಿ ಸೆಪ್ಟೆಂಬರ್ ನಲ್ಲಿ 10 ಕೆಜಿ ಅಕ್ಕಿ ನೀಡಲು ಚಿಂತನೆ ನಡೆಸಲಾಗುತ್ತಿದೆ. ಹೀಗಾಗಿ ಹಣದ ಬದಲು ಅಕ್ಕಿ ನೀಡಲು ಸರ್ಕಾರ ನಿರ್ಧರಿಸಿದೆ ಹೆಚ್ಚು ದಿನ ಹಣ ನೀಡಲು ಆಗದ ಕಾರಣ ಅಕ್ಕಿ ಜೊತೆ ರಾಗಿ ಜೋಳ ನೀಡಲು ಸರ್ಕಾರ ಯೋಜನೆ ಹಾಕಿಕೊಂಡಿದೆ ಎಂದು ಸಚಿವರು ತಿಳಿಸಿದ್ದಾರೆ.
 

ವಿಶೇಷ ಸೂಚನೆ : ಈ ಮಾಹಿತಿಯನ್ನು ಮತ್ತೊಮ್ಮೆ ಪರಿಶೀಲಿಸಿ, ಇದು ನಮಗೆ ಗೂಗಲ್ ನಲ್ಲಿ ಮೂಲಕವೇ ದೊರಕಿದಂತಹ ಮಾಹಿತಿ ಆಗಿದೆ. ತಪ್ಪದೆ ಇನ್ನೊಮ್ಮೆ ಪರಿಶೀಲಿಸಿ, ಶೇರ್ ಮಾಡಿ ಧನ್ಯವಾದಗಳು..