ಮತ್ತೆ ಒಂದಾದ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ; ವಿಡಿಯೋ ವೈರಲ್
ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರ ಬಗ್ಗೆ ಹೊಸ ವಿಷಯವೊಂದು ಗಮನ ಸೆಳೆಯುತ್ತಿದೆ. ಈ ವಿಷಯವನ್ನ ಕಣ್ಣಾರೆ ಕಂಡ ನೆಟ್ಟಿಗರು ಅರೇ ಈ ಏನಾಗ್ತಿದೆ ಅಂತ ಬೆರಗಾಗಿ ನೋಡ್ತಾ ಇದ್ದಾರೆ. ‘ಗೀತಾಗೋವಿಂದಂ’ ಸಿನಿಮಾದಿಂದಲೂ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ನಡುವಿನ ಫ್ರೆಂಡ್ಶಿಪ್, ರಿಲೇಶನ್ಷಿಪ್ ಬಗ್ಗೆ ಬಗೆ ಬಗೆಯ ಕಥೆ-ಕಾದಂಬರಿಗಳು ಹರಿದಾಡ್ತಾನೇ ಇದೆ. ಆದ್ರೆ, ಇಲ್ಲಿವರೆಗೂ ಇವರ ವಿಚಾರದಲ್ಲಿ ಕ್ಲಾರಿಟಿನೇ ಸಿಕ್ಕಿಲ್ಲ. ರಶ್ಮಿಕಾ-ವಿಜಯ್ ದೇವರಕೊಂಡ ಅವರ ರಿಲೇಶನ್ ಸ್ಟೇಟಸ್ ಏನು ಅಂತ ಕೇಳಿದ್ರೆ ‘ವೀ ಆರ್ ಜಸ್ಟ್ ಫ್ರೆಂಡ್ಸ್’ ಅಂತಾನೇ ಹೇಳ್ತಾರೆ. ಆದ್ರೆ ಇದನ್ನ ಯಾರೂ ನಂಬೋಕೆ ತಯಾರಿಲ್ಲ. ಯಾಕಂದ್ರೆ, ರಶ್ಮಿಕಾ ಮತ್ತು ದೇವರಕೊಂಡ ಹೇಳೋದೊಂದು, ಮಾಡೋದಂದಾಗಿದೆ.
ಆದ್ರೆ ಇತ್ತೀಚಿನ ದಿನಗಳಲ್ಲಿ ರಶ್ಮಿಕಾ ಮತ್ತು ದೇವರಕೊಂಡ ನಡುವೆ ಎಲ್ಲವೂ ಸರಿಯಲ್ಲ ಎನ್ನಲಾಗ್ತಿತ್ತು. ಇಬ್ಬರು ಬ್ರೇಕ್ ಅಪ್ ಮಾಡ್ಕೊಂಡಿದ್ದಾರೆ ಅನ್ನೋ ಸರ್ಪ್ರೈಸ್ ಅಂಡ್ ಶಾಕಿಂಗ್ ಸುದ್ದಿನೂ ಚಾಲ್ತಿಗೆ ಬಂತು. ಸಿನಿಮಾ, ಶೂಟಿಂಗ್ ಅಂತ ಹೈದರಾಬಾದ್, ಮುಂಬೈಗೆ ಸಾಕಷ್ಟು ಓಡಾಡುತ್ತಿದ್ದರು ಇಬ್ಬರು ಎಲ್ಲೂ ಬೇಟಿಯಾಗಿಲ್ಲ, ಒಟ್ಟಿಗೆ ಕಾಣಿಸಿಕೊಂಡಿಲ್ಲ. ಇದನ್ನೆಲ್ಲ ಗಮನಿಸಿದ ನೆಟ್ಟಿಗರು ಬಹುಶಃ ರಶ್ಮಿಕಾ ಮತ್ತು ದೇವರಕೊಂಡ ನಡುವೆ ಬ್ರೇಕ್ ಅಪ್ ಆಗಿದೆ ಅಂತಾನೇ ಬಿಂಬಿಸಿದ್ದರು.
ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾದ ಹೊಸ ಸೆನ್ಸೇಷನ್ ಆಗಿದೆ. ವೈರಲ್ ಆದ ವಿಡಿಯೋದಲ್ಲಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಇವರಷ್ಟೇ ಅಲ್ಲ ದೇವರಕೊಂಡ ಸಹೋದರ ಆನಂದ್ ಹಾಗೂ ಇನ್ನೊಂದಿಷ್ಟು ಫ್ರೆಂಡ್ಸ್ ಕೂಡ ಜೊತೆಗಿದ್ದಾರೆ. ಈ ವಿಡಿಯೋ ನೋಡಿದ ನೆಟ್ಟಿಗರು ಇದೀಗ ಆಲ್ ಈಸ್ ವೆಲ್, ಇಬ್ಬರು ಚೆನ್ನಾಗಿದ್ದಾರೆ, ಬ್ರೇಕ್ ಅಪ್ ಆಗಿಲ್ಲ ಅಂತಿದ್ದಾರೆ. ಸದ್ಯಕ್ಕೆ ಈ ವಿಡಿಯೋ ಯಾವಾಗಿಂದು, ಯಾವ ಸಂದರ್ಭದ್ದು ಅಂತಾ ಗೊತ್ತಾಗ್ತಿಲ್ಲ. ಆದ್ರೆ, ಇವರಿಬ್ಬರನ್ನ ಒಟ್ಟಿಗೆ ನೋಡಿದ್ದೇ ಹಾಲು ಕುಡಿದಷ್ಟು ಸಂತೋಷ ಆಯ್ತು ಅನ್ನೋ ಲೆವೆಲ್ಗೆ ಅವ್ರ ಫ್ಯಾನ್ಸ್ ಸಂಭ್ರಮಿಸ್ತಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ತಪ್ಪದೆ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.