ವಿಜಯ್ ದೇವರಕೊಂಡ ಹಾಗೂ ರಶ್ಮಿಕ ಎಂಗೇಜ್ಮೆಂಟ್ ಫಿಕ್ಸ್! ಯಾವಾಗ ಗೊತ್ತಾ

ವಿಜಯ್ ದೇವರಕೊಂಡ ಹಾಗೂ ರಶ್ಮಿಕ ಎಂಗೇಜ್ಮೆಂಟ್ ಫಿಕ್ಸ್! ಯಾವಾಗ ಗೊತ್ತಾ

ನಮ್ಮ ಬಣ್ಣದ ಲೋಕದಲ್ಲಿ ಸಾಕಷ್ಟು ಜನಪ್ರಿಯ ಜೋಡಿಗಳು ಇದ್ದಾರೆ. ಅದ್ರಲ್ಲಿ ಅಂದಿನಿಂದ ಇಂದಿನ ವರೆಗೂ ಟ್ರೆಂಡ್ ನಲ್ಲಿರುವ ಜೋಡಿಗಳು ಎಂದ್ರೆ ಅದು ಗೀತಾ ಗೋವಿಂದಂ ಚಿತ್ರದಿಂದ ದೊಡ್ಡ ಹಿಟ್ ಪಡೆದ ಜೋಡಿ ರಶ್ಮಿಕ ಮಂದಣ್ಣ ಹಾಗೂ ವಿಜಯ್ ದೇವರಕೊಂಡ. ಇನ್ನೂ ಕಿರಿಕ್ ಪಾರ್ಟಿ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ರಶ್ಮಿಕ ತಮ್ಮ ಮೊದಲ ಚಿತ್ರದಲ್ಲಿ ನ್ಯಾಷನಲ್ ಕ್ರಷ್ ಎಂಬ ಹೆಸರು ಪಡೆದುಕೊಂಡರು. ಅದಾದ ಬಳಿಕ ಸಾಕಷ್ಟು ಹಿಟ್ ಚಿತ್ರಗಳನ್ನು ಕೊಟ್ಟ ಈ ನಟಿಗೆ ಪರ ಭಾಷೆಯಿಂದ ಕೊಡ ಆಫರ್ ಬರುವುದಕ್ಕೆ ಶುರುವಾಯಿತು. ಮೊದಲ ಬಾರಿಗೆ ತೆಲಗು ಚಲೋ ಚಿತ್ರದ ಮೂಲಕ ಟಾಲಿವುಡ್ ಕೊಡ ಎಂಟ್ರಿ ಕೊಟ್ಟರು 

ಚಲೋ ಚಿತ್ರದ ಮೂಲಕ ಅಷ್ಟಾಗಿ ಹಿಟ್ ಪಡೆಯದೆ ಇದ್ದರೂ ಅದಾದ ಬಳಿಕ ಸಿಕ್ಕಿದ್ದೇ ವಿಜಯ್ ದೇವರಕೊಂಡ ಅವರೊಟ್ಟಿಗೆ ಗೀತಾ ಗೋವಿಂದಂ. ಈ ಚಿತ್ರ ದೊಡ್ಡ ಮಟ್ಟದ ಹೆಸ್ರು ಮಾಡಿತ್ತು. ಆದ್ರೆ ಈ ಚಿತ್ರದಿಂದ ಇವರ ಹಾಗೂ ರಕ್ಷಿತ್ ಶೆಟ್ಟಿ ಅವರ ನಿಶ್ಚಿತಾರ್ಥ ಕೊಡ ಮುರಿದು ಬಿತ್ತು ಎಂಬ ಸುದ್ದಿ ಕೊಡ ಇದೆ. ಆದರೆ ಇವರಿಬ್ಬರು ಈ ವರೆಗೂ ಸೂಕ್ತ ಕಾರಣವನ್ನು ತಿಳಿಸಿಲ್ಲ. ಅದಾದ ಬಳಿಕ ಇಬ್ಬರೂ ತಮ್ಮ ತಮ್ಮ ಸಿನಿಮಾ ಕೆರಿಯರ್ ನಲ್ಲಿ ಬ್ಯುಸಿ ಆದರೂ. ಇನ್ನೂ ರಶ್ಮಿಕ ಅವರು ಸದ್ಯದಲ್ಲಿ ಪಂಚ ಭಾಷಾ ನಟಿಯಾಗಿ ದೊಡ್ಡ ಮಟ್ಟದ ಪರ್ಸಿದ್ದಿಯನ್ನಿ ಪಡೆದುಕೊಂಡಿದ್ದಾರೆ. ಆಗಾಗ ಸಿನಿಮಾಗಳ ವಿಚಾರವನ್ನು ಹೊರತುಪಡಿಸಿ ಈ ನಟಿ ಸದ್ದು ಮಾಡುತ್ತಿರುವುದು ನನ್ನ ಬೆಸ್ಟ್ ಫ್ರೆಂಡ್ ಎಂದು ಹೇಳುವ ವಿಜಯ್ ದೇವರಕೊಂಡ ಅವರ ಹೆಸರಿನ ಜೊತೆ ತುಣುಕು ಹಾಕಿಕೊಳ್ಳುವುದು.    

ಇನ್ನೂ ಈ ನಟಿ ಹಾಗೂ ನಟ ಒಟ್ಟಾಗಿ ತೆರಳದೆ ಇದ್ದರು ಕೊಡ ಒಟ್ಟಾಗಿ ಇರುವ ಸಾಕಷ್ಟು ಹಿಂಟ್ ಅನ್ನು ಬಿಟ್ಟುಕೊಟ್ಟಿದ್ದಾರೆ. ಕಳೆದ ವರ್ಷ ಹೊಸ ವರ್ಷದ ಆಚರಣೆಯಲ್ಲಿ ಮಾಲ್ಡೀವ್ಸ್ ನಲ್ಲಿ ಫೋಟೋ ಹಂಚಿಕೊಂಡಾಗ ಹಾಗೂ ಇಟಲಿಯಲ್ಲಿ ಹೋಟೆಲ್ ಒಂದರಲ್ಲಿ ಒಟ್ಟಾಗಿ ಇರುವು ಹಿಂಟ್ ಬಿಟ್ಟುಕೊಟ್ಟರು. ಇನ್ನೂ ಆಗಾಗ ರಶ್ಮಿಕ ಅವರು ತಮ್ಮ ಫೋಟೋ ಹಂಚಿಕೊಂಡಾಗ ಅದು ವಿಜಯ್ ಅವ್ರ ಮನೆಯೇ ಎಂಬ ರಹಸ್ಯ ಈಗ ಎಲ್ಲರಿಗೂ ರಿವಿಲ್ ಆಗಿ ಇವರಿಬ್ಬರೂ ಒಟ್ಟಾಗಿ ಇದ್ದಾರೆ ಎನ್ನುವ ನಂಬಿಕೆ ದೃಢವಾಗಿದೆ. ಈಗ ಈ ಜೋಡಿ ಫೆಬ್ರವರಿ ತಿಂಗಳಲ್ಲಿ ಎಂಗೇಜ್ ಅಗಲಿದ್ದಾರೆ ಎಂಬ ಗಾಳಿ ಸುದ್ದಿ ಕೊಡ ಹರಿದಾಡುತ್ತಿದೆ.

(Video credit :NewsFirst Kannada )