ತಾನು ಇನ್ನು ಮದುವೆ ಆಗದಿರುವದಕ್ಕೆ ಕಾರಣ ತಿಳಿಸಿದ ಮೋಹಕ ತಾರೆ ರಮ್ಯಾ ಏನೆಂದು ನೋಡಿ

ತಾನು ಇನ್ನು ಮದುವೆ ಆಗದಿರುವದಕ್ಕೆ ಕಾರಣ ತಿಳಿಸಿದ ಮೋಹಕ ತಾರೆ ರಮ್ಯಾ  ಏನೆಂದು ನೋಡಿ

ನಮ್ಮ ಸ್ಯಾಂಡಲ್ ವುಡ್ ನಲ್ಲಿ ಅಂದಿನಿಂದ ಇಂದಿನ ವರೆಗು ಮೋಹಕ ತಾರೆಯಾಗಿಯೆ ಉಳಿದಿರುವ ನಟಿ ಎಂದ್ರೆ ಅದು ನಮ್ಮ ಸ್ಯಾಂಡಲ್ ವುಡ್ ಕ್ವೀನ್ "ಮೋಹಕ ತಾರೆ ರಮ್ಯಾ" ಎಂದರೆ ತಪ್ಪಾಗಲಾರದು. ಇನ್ನೂ ಈ ನಟಿ 2003 ರಲ್ಲಿ ನಮ್ಮ ಸ್ಯಾಂಡಲ್ ವುಡ್ ಗೆ ಕಾಲಿಟ್ಟರು. "ಪುನೀತ್" ಜೊತೆ ಕಾಣಿಸಿಕೊಂಡ ಮೊದಲನೆಯ ಸಿನಿಮಾದಲ್ಲಿಯೆ ದೊಡ್ಡ ಹೆಸರು ಹಾಗೂ ಜನಪ್ರಿಯತೆ ಗಳಿಸಿದ ಈ ನಟಿ ಇಂದಿಗೂ ಕೊಡ ಆ ಛಾಪನ್ನು ಕೊಂಚವೂ ಕಳೆದುಕೊಂಡಿಲ್ಲ. ಇನ್ನೂ ಅಂದಿನಿಂದ ಶುರುವಾದ ಇವ್ರ ಪಯಣ 2020ರಲ್ಲೀ ತೆರೆಕಂಡ "ನಾಗರಹಾವು" ಚಿತ್ರದ ವರೆಗೂ ಅಷ್ಟೇ ಸೊಗಸಾಗಿ ಇತ್ತು. ಹೀಗೆ ಹಿಟ್ ಚಿತ್ರಗಳ ಮೂಲಕ ಹೆಸರು ಮಾಡುತ್ತಿದ್ದ ನಟಿ ತಮ್ಮ ನಟನೆಯ ಬಗ್ಗೆ ಬೇಡಿಕೆ ಇದ್ದಾಗಲೇ ದೂರ ಉಳಿಯುವ ನಿರ್ಧಾರ ಮಾಡುತ್ತಾರೆ.

ಇನ್ನೂ 2020ರ ನಂತರ ನಾಗರಹಾವು ಚಿತ್ರ ಮುಗಿದ ಬಳಿಕ ಈ ನಟಿ ರಾಜಕೀಯದ ಕಡೆ ಮುಖ ಮಾಡುತ್ತಾರೆ. ಇನ್ನೂ ತಾವು ಸ್ಪರ್ಧಿಸಿದ್ದ ಮೊದಲ ಬಾರಿಗೆ "ಕಾಂಗ್ರೆಸ್" ಪಕ್ಷದ "ಮಂಡ್ಯ" ಜಿಲ್ಲೆಯ ಲೋಕ ಸಭೆಯ ಅಭ್ಯರ್ಥಿಯಾಗಿ ಕೊಡ ಆಯ್ಕೆ ಆಗುತ್ತಾರೆ. ಹೀಗೆ ಕಾರ್ಯ ನಿರ್ವಹಿಸುತ್ತಿದ್ದ ಈಕೆಯನ್ನು ಮತ್ತೆ ತಮ್ಮ ಸಿನಿಮಾ ರಂಗಕ್ಕೆ ಯಾವಾಗ ಮರಳುತ್ತಿರಾ ಎನ್ನುವ ಪ್ರಶ್ನೆ ಬರುತ್ತಲೆ ಇತ್ತು.ಆದರೂ ಕೊಡ ಈಕೆ ಆ ಪ್ರಶ್ನೆಗೆ ಉತ್ತರ ನೀಡುತ್ತಿರಲಿಲ್ಲ. ಆ ನಂತರ ರಾಜಕೀಯದಲ್ಲಿ ಕೊಡ ಕೊಂಚ ಹಿನ್ನಡೆ ಕಂಡ ಈಕೆ ರಾಜಕೀಯದಿಂದಲೇ ದೊರ ಉಳಿಯುವ ನಿರ್ಧಾರ ಮಾಡುತ್ತಾರೆ. ಆ ನಂತರ ಹೆಚ್ಚಿನ ವಿದ್ಯಾಭ್ಯಾಸಕ್ಕೆ ವಿದೇಶಕ್ಕೆ ಕೊಡ ಹಾರುತ್ತಾರೆ.  

ಇನ್ನೂ 2023ರಲ್ಲಿ ಮರಳಿ ಬಂದ ಈ ನಟಿ ಈಗ ಮತ್ತೆ ಚಿತ್ರ ರಂಗದಲ್ಲಿ ನಿರ್ಮಾಪಕಿ ಹಾಗೂ ನಟಿಯಾಗಿ ತೊಡಗಿಸಿಕೊಂಡಿದ್ದಾರೆ. ಇನ್ನೂ ಇವರದ್ದೇ ಪ್ರೊಡಕ್ಷನ್ ನ "ಆಪಲ್ ಬಾಕ್ಸ್" ಕಡೆಯಿಂದ "ಸ್ವಾತಿ ಮುತ್ತಿನ ಮಳೆಹನಿಯೇ" ಚಿತ್ರ ಬಿಡುಗಡೆ ಪಡೆದು ಯಶಸ್ವಿ ಕೊಡ ಆಗಿದೆ. ಹಾಗೆಯೇ ಈಗ ಗೆಸ್ಟ್ ಅಪಿಯರೆನ್ಸ್ ಆಗಿ "ಹಾಸ್ಟೆಲ್ ಹುಡುಗರು" ಚಿತ್ರದ ಮೂಲಕ ಕಮ್ ಬ್ಯಾಕ್ ಮಾಡಿರುವ ಈ ನಟಿ ಸದ್ಯದಲ್ಲಿ "ಡಾಲಿ ಧನಂಜಯ್" ಅವ್ರ ಜೊತೆ "ಯುದ್ದ ಕಾಂಡ" ಸಂಪೂರ್ಣ ನಟಿಯಾಗಿ ಆದಷ್ಟು ಬೇಗ ತೆರೆಗೆ ಬರಲಿದ್ದಾರೆ. ಇನ್ನೂ ಮೊನ್ನೆಯಷ್ಟೇ ತಮ್ಮ 41ನೆ ವಯಸ್ಸಿನ ಹುಟ್ಟು ಹಬ್ಬ ಆಚರಿಸಿಕೊಂಡ ಈಕೆಗೆ ಶುಭಾಶಯಗಳ ಜೊತೆಗೆ ಮದುವೆಯ ಪ್ರಶ್ನೆಗಳು ಕೊಡ ಬಂತು. ಆ ವೇಳೆ ಸಂತೋಷ ಹಾಗೂ ಮದುವೆ ಈ ಎರಡು ವಿಚಾರದಲ್ಲಿ ಯಾವುದನ್ನು ಆಯ್ಕೆ ಮಾಡಿಕೊಳ್ಳುತ್ತಿರಾ ಎಂದಾಗ ರಮ್ಯ ಸಂತೋಷ ಎಂದು ಹೇಳಿ ಮದುವೆಯ ಬಗ್ಗೆ ತನಗೆ ಇರುವ ಅಭಿಪ್ರಾಯದ ಬಗ್ಗೆ ತಿಳಿಸಿದರು

​( video credit : Asianet Suvarna News )