ದೊಡ್ಡ ಮನೆಯಲ್ಲಿ ಇರುವುದಕ್ಕೆ ರಕ್ಷಕ್ ಬುಲೆಟ್ ಗೆ ಸಿಗುತ್ತಿರುವ ಸಂಭಾವನೆ ಎಷ್ಟು ಗೊತ್ತಾ?

ದೊಡ್ಡ ಮನೆಯಲ್ಲಿ ಇರುವುದಕ್ಕೆ ರಕ್ಷಕ್ ಬುಲೆಟ್ ಗೆ ಸಿಗುತ್ತಿರುವ ಸಂಭಾವನೆ ಎಷ್ಟು ಗೊತ್ತಾ?

ಈಗ ಕಿರುತೆರೆಯಲ್ಲಿ ದೊಡ್ಡ ಹಬ್ಬವೇ ಶುರುವಾಗಿದೆ ಎಂದರೆ ತಪ್ಪಾಗಲಾರದು. ಏಕೆಂದರೆ ಮನೋರಂಜನೆಯ ವಿಚಾರದಲ್ಲಿ ಯಾವ ಹಿರುತೆರೆಗಿಂತ ಕಡಿಮೆ ಇಲ್ಲದೆ ಮನೋರಂಜನೆಯನ್ನು ನೀಡುತ್ತಾ ಬರುತ್ತಿದ್ದಾರೆ. ಆದರೆ ಕಿರುತೆರೆಯಲ್ಲಿ ವಾರದ ಪೂರ್ತಿ ಧಾರಾವಾಹಿಗಳ ಮುಖಾಂತರ ಮನೋರಂಜನೆಯನ್ನು ನೀಡುತ್ತಾ ಬರುತ್ತಿದ್ದಾರೆ. ಇನ್ನೂ ವಾರದ ಅಂತ್ಯದಲ್ಲಿ ರಿಯಾಲಿಟಿ ಶೋಗಳು ಮುಖಾಂತರ ಮನೋರಂಜನೆಯನ್ನು ನೀಡುತ್ತಾ ಬರುತ್ತಿದ್ದಾರೆ. ಆದರೆ ಇದೀಗ ಬಿಗ್ ಬಾಸ್ ಶುರುವಾಗಿದೆ ವಾರದ ಪೂರ್ತಿ ಮನೋರಂಜನೆ ಅಲ್ಲದೆ ವಾರದ ಅಂತ್ಯದಲ್ಲಿ "ಸುದೀಪ್" ಅವರೊಟ್ಟಿಗೆ ಮನೋರಂಜನೆ ಇನ್ನಷ್ಟು ದುಪ್ಪಟ್ಟಾಗಲಿದೆ ಎಂದರೆ ತಪ್ಪಾಗಲಾರದು.

ಈಗ ಕಳೆದ ಒಂದು ತಿಂಗಳಿಂದಲೂ ಕೂಡ ಬಿಗ್ ಬಾಸ್ ಸೀಸನ್ ಹತ್ತಕ್ಕೆ ಸ್ಪರ್ಧಿಗಳು ಯಾರಿರಬಹುದು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಿನ ಸದ್ದು ಮಾಡುತ್ತಲೆ ಇತ್ತು. ಆದರೆ ಮೊನ್ನೆ ಆ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದೆ. ಈಗ ಬಿಗ್ ಬಾಸ್ ದಶಕದ ಸಂಬ್ರಮ ಆಗಿರುವ ಕಾರಣ ಸಾಕಷ್ಟು ಟ್ವಿಸ್ಟ್ ಗಳನ್ನೂ ನೀಡಲಾಗಿದೆ. ಇನ್ನೂ ಹೊಸ ಟ್ವಿಸ್ಟ್ ಪ್ರಕಾರ ಅನರ್ಹರು ಎಂದು ಗುರುತಿಸಿಕೊಂಡ "ಡ್ರೋನ್ ಪ್ರತಾಪ್ , ರಕ್ಷಕ್ ಬುಲೆಟ್, ಸಂಗೀತಾ, ಹಾಗೂ ಕಾರ್ತಿಕ್" ಅವರು ಈಗ ಡೇಂಜರ್ ಜೋನ್ ಅಲ್ಲಿರುವ ಸ್ಪರ್ಧಿಗಳಾಗಿ ದೊಡ್ಡ ಮನೆಗೆ ಎಂಟ್ರಿ ನೀಡಿದ್ದಾರೆ. ಇನ್ನೂ ಈ ಎಲ್ಲಾ ಸ್ಪರ್ಧಿ ಒಂದು ವಾರದಲ್ಲಿ ತಮ್ಮ ನಿಲುವನ್ನು ಕಂಡುಕೊಂಡವರಿಗೆ ಮಾತ್ರ ಅಳಿವು ಉಳಿವು ನಿರ್ಧಾರ ಮಾಡಲಾಗುವುದು ಎಂದು ಬಿಗ್ ಬಾಸ್ ತಿಳಿಸಿದ್ದಾರೆ.  

ಇದೀಗ ಬಿಗ್ ಬಾಸ್ ಸ್ಪರ್ಧಿಗಳ ಹೆಸರು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಿನ ಸದ್ದು ಮಾಡುತ್ತಿತ್ತು. ಆದ್ರೆ ಇದೀಗ ಬಿಗ್ ಬಾಸ್ ಸೀಸನ್ ಹತ್ತರ ಸ್ಪರ್ಧಿಗಳ ಸಂಭಾವನೆಯ ವಿಚಾರವಾಗಿ ಹೆಚ್ಚಿನ ಸುದ್ದಿ ಓಡಾಡುತ್ತಿದೆ. ಇದೀಗ "ಬುಲೆಟ್ ಪ್ರಕಾಶ್" ಅವರ ಪುತ್ರ "ರಕ್ಷಕ್" ಅವರ ಸಂಭಾವನೆ ರೀವಿಲ್ ಆಗಿದ್ದು ಎಲ್ಲರ ಉಬ್ಬೇರಿಸುವಂತೆ ಮಾಡಿದೆ. ಇನ್ನೂ ರಕ್ಷಕ್ ಅವರು ಶರಣ್ ಅವರ ಗುರು ಶಿಷ್ಯರು ಸಿನಿಮಾದಲ್ಲಿ ಗುರುತಿಸಿಕೊಂಡು ಬೆಳ್ಳಿ ತೆರೆಗೆ ಈಗಾಗಲೇ ಎಂಟ್ರಿ ಕೊಟ್ಟಿದ್ದಾರೆ. ಇನ್ನೂ ಅದರಿಂದ ಜನಪ್ರಿಯತೆಯನ್ನು ಪಡೆದುಕೊಂಡು ದೊಡ್ಡ ಮನೆಯ ಪ್ರವೇಶ ಪಡೆದುಕೊಂಡಿದ್ದಾರೆ. ಈಗ ರಕ್ಷಕ್ ಅವರು ದಿನಕ್ಕೆ "10-15 ಸಾವಿರದಂತೆ ವಾರಕ್ಕೆ 2ಲಕ್ಷದ" ವರೆಗೂ ಸಂಭಾವನೆಯನ್ನು ಪಡೆದುಕೊಳ್ಳಲಿದ್ದಾರೆ. ಈ ವಾರದ ಅಂತ್ಯದಲ್ಲಿ ರಕ್ಷಕ್ ಬುಲೆಟ್ ಅವರ ನಿರ್ಧಾರ ಆಗಲಿದೆ.