ಮೂಡ್ ನಲ್ಲಿ ಬೆರಳು ಕಚ್ಚುತ್ತ ಬೆಡ್ ರೂಮ್ ಶೂಟಿಂಗ್ ನಲ್ಲಿ ಕಾಣಿಸಿಕೊಂಡ ರಾಧಿಕಾ ಕುಮಾರಸ್ವಾಮಿ! ವಿಡಿಯೋ ವೈರಲ್
ಚಂದನವನದಲ್ಲಿ ಒಂದು ಕಾಲದಲ್ಲಿ ಬೇಡಿಕೆಯನ್ನು ಹೊಂದಿದ್ದ ನಟಿಯರ ಪೈಕಿ ರಾಧಿಕಾ ಕುಮಾರಸ್ವಾಮಿ (Radhika Kumarswami) ಕೂಡ ಒಬ್ಬರು ಎನ್ನುವುದು ಕೂಡ ಗೊತ್ತಿರುವ ವಿಚಾರ. ಒಂದು ಮಗುವಿನ ತಾಯಿಯಾಗಿದ್ದರೂ ಕೂಡ ನಟಿ ರಾಧಿಕಾ ಕುಮಾರಸ್ವಾಮಿ ಯಾವ ಯುವ ನಟಿಗೂ ಕೂಡ ಕಡಿಮೆಯಿಲ್ಲ. ನಟನೆಗೂ ಸೈ ಡಾನ್ಸ್ ಸೈ ಎನ್ನುವ ರಾಧಿಕಾ ಕುಮಾರಸ್ವಾಮಿಯವರ ಡಾನ್ಸ್ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವುದಿದೆ.
ನಟಿ ರಾಧಿಕಾ ಕುಮಾರಸ್ವಾಮಿ ಹೆಸರಿನಲ್ಲಿ ಎರಡು ಇನ್‌ಸ್ಟಾಗ್ರಾಂ ಖಾತೆಗಳಿದ್ದು, ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದಾರೆ. ರಾಧಿಕಾ ಕುಮಾರಸ್ವಾಮಿ ಫೋಟೊಗಳು, ವಿಡಿಯೋಗಳು ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ನಟಿ ರಾಧಿಕಾ ಕುಮಾರಸ್ವಾಮಿಯವರು ವಿಡಿಯೋವೊಂದು ವೈರಲ್ ಆಗಿವೆ. ಈ ವಿಡಿಯೋದಲ್ಲಿ ರಾಧಿಕಾ ಕುಮಾರಸ್ವಾಮಿಯವರ ಶೂಟಿಂಗ್ ದೃಶ್ಯವಾಗಿದ್ದು, ಸದ್ಯಕ್ಕೆ ಈ ವಿಡಿಯೋಗ ಹತ್ತೊಂಬತ್ತು ಸಾವಿರಕ್ಕೂ ಹೆಚ್ಚು ವ್ಯೂಸ್ ಕಂಡಿದೆ.
ಇತ್ತೀಚೆಗಷ್ಟೇ ಬಾಲಿವುಡ್ ನಟ ಶ್ರೇಯಸ್ ತಲ್ಪಾಡೆ ಜೊತೆ ರಾಧಿಕಾ ಕುಮಾರಸ್ವಾಮಿ (Radhika Kumaraswamy) ಡ್ಯಾನ್ಸ್ ಮಾಡಿದ್ದರು. ನಟಿಯು ಬರಹಲಾ ಹಾ ಮಧುಮಾಸ ಎನ್ನುವ ಹಾಡಿಗೆ ಸ್ಟೆಪ್ ಹಾಕಿದ್ದರು. ಈ ಡಾನ್ಸ್ ವಿಡಿಯೋದಲ್ಲಿ ನಟಿ ರಾಧಿಕಾ ಕುಮಾರಸ್ವಾಮಿ ಲಂಗ ದಾವಣಿ ತೊಟ್ಟಿದ್ದರು. ಈ ಡಾನ್ಸ್ ವಿಡಿಯೋಗೆ ಮೆಚ್ಚುಗೆ ವ್ಯಕ್ತವಾಗಿತ್ತು.
ಸದ್ಯಕ್ಕೆ ರಾಧಿಕಾ ಕುಮಾರಸ್ವಾಮಿ ಜೊತೆ ಶ್ರೇಯಸ್ ತಲ್ಪಾಡೆ ‘ಅಜಾಗ್ರತ’ (Ajagatra) ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರವನ್ನು ನಿರ್ಮಿಸುತ್ತಿರುವ ತನ್ನ ಸಹೋದರ ರವಿರಾಜ್ಗಾಗಿ ಅಜಾಗ್ರತ ಚಿತ್ರವನ್ನು ಒಪ್ಪಿಕೊಂಡಿದ್ದೇನೆ. ಭೈರಾದೇವಿ ಬಿಡುಗಡೆಯಾಗುವವರೆಗೂ ನಾನು ಯಾವುದೇ ಚಿತ್ರವನ್ನು ಒಪ್ಪಿಕೊಳ್ಳಲು ಬಯಸಲಿಲ್ಲ. ವಾಸ್ತವವಾಗಿ, ನನಗೆ ಮಲಯಾಳಂ ಇಂಡಸ್ಟ್ರಿಯಿಂದಲೂ ಆಫರ್ಗಳು ಬಂದವು ಆದರೆ ಬೇರೆ ಯಾವುದೇ ಪ್ರಾಜೆಕ್ಟ್ಗಳನ್ನು ತೆಗೆದುಕೊಳ್ಳುವ ಮೊದಲು ನನ್ನ ಚಿತ್ರವನ್ನು ಮೊದಲು ಬಿಡುಗಡೆ ಮಾಡಲು ನಾನು ಅವುಗಳನ್ನು ಕೈಬಿಡಬೇಕಾಯಿತು ಎಂದಿದ್ದರು.
ಶಶಿಧರ್ ನಿರ್ದೇಶನದ ಮುಂದಿನ ಚಿತ್ರವನ್ನು ನನ್ನ ಸಹೋದರ ನಿರ್ಮಿಸುತ್ತಿದ್ದರು ಮತ್ತು ನಾನು ಚಿತ್ರದ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿದ್ದೇನೆ. ನಾನು ಕೆಲವು ನಾಯಕಿಯರ ಹೆಸರುಗಳನ್ನು ಸೂಚಿಸಿದ್ದೇನೆ ಆದರೆ ಯಾವುದೂ ಅವರಿಗೆ ಸರಿಹೊಂದಲಿಲ್ಲ, ನಾಯಕಿಯನ್ನು ಹುಡುಕಲು ನಡೆಸುತ್ತಿದ್ದ ಹೋರಾಟವನ್ನು ನಾನು ನೋಡಿದೆ . ಹೀಗಾಗಿ ನಾನು ಚಿತ್ರ ಒಪ್ಪಿಕೊಂಡೆ. ನಾನು ಸಿನಿಮಾ ಒಪ್ಪಿಕೊಂಡಿದ್ದರಿಂದ ಅವರು ಸಂತೋಷ ಪಟ್ಟಿದ್ದಾರೆ ಎಂದಿದ್ದರು.