ಎದೆಯ ಮೇಲೆ ಗೂಬೆ ಟ್ಯಾಟೊ ಹಾಕಿಸಿಕೊಂಡ ನಟಿ ರಚಿತಾ ಮಹಾಲಕ್ಷ್ಮಿ! ನಟಿಯ ಟ್ಯಾಟೊ ಫೋಟೋ ವೈರಲ್!!
ಬಣ್ಣದ ಲೋಕದಲ್ಲಿ ಗುರುತಿಸಿಕೊಂಡಿರುವ ನಟ ನಟಿಯರು ಧಾರಾವಾಹಿ ಹಾಗೂ ಸಿನಿಮಾದ ಜೊತೆಗೆ ಇನ್ನಿತ್ತರ ವಿಚಾರಗಳಿಂದ ಸುದ್ದಿಯಾಗುತ್ತಾರೆ. ಈ ಸಾಲಿಗೆ ನಟಿ ರಚಿತಾ ಮಹಾಲಕ್ಷ್ಮಿ ಕೂಡ ಸೇರಿಕೊಳ್ಳುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿರುವ ನಟಿ ರಚಿತಾ ಮಹಾಲಕ್ಷ್ಮಿ ಫೋಟೋಹಾಗೂ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಾ ಸುದ್ದಿಯಾಗುತ್ತಾರೆ.
ಆದರೆ ಇದೀಗ ನಟಿ ಮಹಾಲಕ್ಷ್ಮಿ ಸುದ್ದಿಯಲ್ಲಿರುವುದು ಬೇರೆಯದ್ದೇ ವಿಚಾರವಾಗಿ ಎಂದರೆ ಶಾಕ್ ಆಗಬಹುದು. ಹೌದು, ನಟಿ ರಚಿತಾ ಮಹಾಲಕ್ಷ್ಮಿ ಶೇರ್ ಮಾಡಿಕೊಂಡಿರುವ ಟ್ಯಾಟೊ ಫೋಟೋವೊಂದು ಸದ್ಯಕ್ಕೆ ಎಲ್ಲರ ಗಮನ ಸೆಳೆಯುತ್ತಿದೆ. ನಟಿ ರಚಿತಾ ಮಹಾಲಕ್ಷ್ಮಿ ಎದೆ ಭಾಗದಲ್ಲಿ ಗೂಬೆಯ ಟ್ಯಾಟೊ ವೊಂದನ್ನು ಹಾಕಿಸಿದ್ದಾರೆ. ಈ ಟ್ಯಾಟೊದ ಫೋಟೋವನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಈ ಫೋಟೋ ಜೊತೆಗೆ, “ಭಯವನ್ನು ಶಕ್ತಿಯಾಗಿ ಪರಿವರ್ತಿಸುವುದು ಎಂದು ನಟಿ ಬರೆದುಕೊಂಡಿದ್ದಾರೆ. ಈ ಫೋಟೋಗೆ ನಲವತ್ತೈದು ಸಾವಿರಕ್ಕೂ ಅಧಿಕ ವ್ಯೂಸ್ ಬಂದಿದೆ. ಅದಲ್ಲದೇ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುವ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.ಇತ್ತೀಚೆಗಷ್ಟೇ ನಟಿ ರಚಿತಾ ಮಹಾಲಕ್ಷ್ಮಿಯವರು ಕಾರು ಖರೀದಿಸಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಹೊಸ ಕಾರ್ ಖರೀದಿ ಮಾಡಿದ ಫೋಟೋಗಳನ್ನು ಹಂಚಿಕೊಂಡಿದ್ದರು. ಈ ಫೋಟೋದಲ್ಲಿ ನಟಿಯ ಜೊತೆಗೆ ಅವರ ಸ್ನೇಹಿತರು ಕೂಡ ಸಾಥ್ ನೀಡಿದ್ದರು.
ಅಂದಹಾಗೆ, ಪ್ರಾರಂಭದಲ್ಲಿ ಕನ್ನಡ ಧಾರಾವಾಹಿಗಳಲ್ಲಿ ನಟಿಸುತ್ತಿದ್ದರು. ತದನಂತರದಲ್ಲಿ ನಟಿ ರಚಿತಾ ಮಹಾಲಕ್ಷ್ಮಿ ಲಕ್ಷ್ಮೀ ಅವರು ತಮಿಳು, ತೆಲುಗು ಸೀರಿಯಲ್ ಗಳಲ್ಲಿ ಸಕ್ರಿಯರಾಗಿದ್ದಾರೆ. ಈಗಾಗಲೇ ನಟಿ ರಚಿತಾ ಮಹಾಲಕ್ಷ್ಮಿ ಸಾಕಷ್ಟು ಧಾರಾವಾಹಿಯಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.
ನಟಿ ರಚಿತಾ ಮಹಾಲಕ್ಷ್ಮಿಯವರು ನಟಿಸಿದ ಧಾರಾವಾಹಿಗಳು ಇಂತಿದ್ದು, ಸಾಗುತ ದೂರ ದೂರ, ಸೂರ್ಯಕಾಂತಿ, ಮೇಘ ಮಂದಾರ, ಸವಿಗನಸು, ಬಂದೆ ಬರತವ್ವ ಕಾಲ, ಪಿರಿವೊಮ್ ಸಂತಿಪ್ಪೊಮ್, ಸುಪ್ರಭಾತ, ಜ್ಯೂನಿಯರ್ ಸೀನಿಯರ್, ಜ್ಯೂನಿಯರ್ ಸೂಪರ್ ಸ್ಟಾರ್ 3.0, ಮನೆಯೊಂದು ಮೂರು ಬಾಗಿಲು, ಮಸಾಲ ಕುದುಂಬಮ್, ಗೀತಾಂಜಲಿ, ನಚಿವರಪುರಂ, ಇಲ್ಲವರಸಿ, ಉಪ್ಪು ಕರುವಾಡು, ಸ್ವಾತಿ ಚಿಂಕುಲು ಹೀಗೆ ಸಾಕಷ್ಟು ಧಾರಾವಾಹಿ ಯಲ್ಲಿ ಪಾತ್ರವನ್ನು ನಿರ್ವಹಿಸಿದ್ದಾರೆ.
ಅದಲ್ಲದೇ, ತಮಿಳು ಬಿಗ್ ಬಾಸ್ ಸೀಸನ್ 6 ರಲ್ಲಿಯೂ ಭಾಗವಹಿಸಿ ಸೈ ಎನಿಸಿಕೊಂಡಿದ್ದರು. ಕಿರುತೆರೆಯ ಜೊತೆಗೆ ಬೆಳ್ಳಿತೆರೆಯಲ್ಲಿ ಗುರುತಿಸಿಕೊಂಡಿದ್ದಾರೆ. ಇತ್ತ ನಟಿ ರಚಿತಾ ಮಹಾಲಕ್ಷ್ಮಿ ವೃತ್ತಿ ಜೀವನದಲ್ಲಿ ಬ್ಯುಸಿಯಾಗಿದ್ದು, ಸಾಲು ಸಾಲು ಅವಕಾಶಗಳು ಬರುತ್ತಿದ್ದು, ಬ್ಯುಸಿಯಾಗಿದ್ದಾರೆ ಎಂದರೆ ತಪ್ಪಾಗಲಾರದು.