ಗೌರಿ ಹಾಗೂ ಗಣೇಶ ಪೂಜೆ ಮತ್ತು ವಿಸರ್ಜನೆಗೆ ಸೂಕ್ತವಾದ ಸಮಯ ಯಾವುದು ಗೊತ್ತಾ?
ನಮ್ಮ ದೇಶದ ದೊಡ್ಡ ಸಂಭ್ರಮಾಚರಣೆಯ ಹಬ್ಬ ಎಂದರೇ ಅದೂ ಗೌರಿ ಹಾಗೂ ಗಣೇಶ ಚತುರ್ಥಿ ಎಂದ್ರೆ ತಪ್ಪಾಗಲಾರದು. ಏಕೆಂದ್ರೆ ಹಬ್ಬದ ದಿನ ಕೇವಲ ಮನೆ ಸಿಂಗರಿಸಿ ಆ ಮನೆಯವರು ಮಾತ್ರ ಸಂಭ್ರಮದ ಛಾಯೆಯಲ್ಲಿ ಇದ್ದು ಹಬ್ಬದ ಊಟ ಮಾಡಿದರೆ ಆದರೆ ಈ ಹಬ್ಬದಲ್ಲಿ ದೇಶದ ಯಾವುದೇ ಮೂಲೆಯಲ್ಲಿ ಕೂಡ ಗೌರಿ ಹಾಗೂ ಗಣೇಶ ಹಬ್ಬದ ಪ್ರಯುಕ್ತ ಬೀದಿಗಳಲ್ಲಿ ಮೂರ್ತಿಯನ್ನು ಇಟ್ಟು ಒಟ್ಟಾಗಿ ಪೂಜೆ ಸಲ್ಲಿಸುವುದು ಈ ಹಬ್ಬದ ವಿಶೇಷತೆ ಎಂದರೆ ತಪ್ಪಾಗಲಾರದು. ಇನ್ನೂ ನಮ್ಮ ಹಿಂದೂ ಸಂಪ್ರದಾಯದಲ್ಲಿ ಹೆಚ್ಚಾಗಿ ಒತ್ತು ಕೊಡುವ ವಿಚಾರ ಎಂದರೆ ಅದು ಪೂಜೆಗೆ ಸರಿಯಾದ ಹಾಗೂ ಸೂಕ್ತವಾದ ಸಮಯ. ಏಕೆಂದ್ರೆ ನಮ್ಮ ಹಿಂದೂಗಳು ತಾವು ಮಾಡುವ ಶುಭ ಕಾರ್ಯಕ್ಕೆ ನಿರ್ದಿಷ್ಟ ಒಳ್ಳೆಯ ಸಮಯ ಎಂದು ನಿಗದಿ ಮಾಡಿಕೊಂಡು ಆ ಸಮಯದಲ್ಲಿ ಮತ್ರವೆ ಅವರು ಅಂದುಕೊಂಡ ಕೆಲಸಗಳನ್ನು ಮಾಡುವರು.
ಇದೀಗ ಗೌರಿ ಹಾಗೂ ಗಣೇಶನ ವಿಗ್ರಹ ತೆಗೆದುಕೊಳ್ಳಲು ಹಾಗೂ ನೀವು ನಿರ್ಮಿಸಿರುವ ಗುಡಿಯಲ್ಲಿ ಕೂರಿಸಲು ಹಾಗೂ ನಿರ್ಧಿಷ್ಟವಾದ ದಿನಗಳ ಕಳೆದ ಬಳಿಕ ನಿಮ್ಮ ಮೂರ್ತಿಯನ್ನು ವಿಸರ್ಜಿಸಲು ಕೂಡ ನೀವು ಸೂಕ್ತವಾದ ಸಮಯ ನೋಡುವುದು ಕಡ್ಡಾಯ ಎಂದರೆ ತಪ್ಪಾಗಲಾರದು. ಏಕೆಂದ್ರೆ ನಾವು ಮಾಡುವ ಎಲ್ಲಾ ಒಳ್ಳೆಯ ಕೆಲ್ಸದಲ್ಲಿ ಒಳ್ಳೆತನದ ಜೊತೆಗೆ ಒಳ್ಳೆಯ ಸಮಯ ಹಾಗೂ ಸಂದರ್ಭ ಕೂಡ ನಮ್ಮೊಟ್ಟಿಗೆ ಇರಬೇಕು ಎಂದರೆ ತಪ್ಪಾಗಲಾರದು. ಇದೀಗ ನಮ್ಮ ಲೇಖನದಲ್ಲಿ ಮೂರ್ತಿಯನ್ನು ತೆಗೆದುಕೊಳ್ಳಲು ಹಾಗೂ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲು ಹಾಗೆಯೇ ಆ ಪೂಜೆ ಸಲ್ಲಿಸಿದ ಮೂರ್ತಿಯನ್ನು ವಿಸರ್ಜಿಸಲು ಯಾವ ಯಾವ ಸಮಯ ಸೂಕ್ತ ಎಂಬ ಮಾಹಿತಿಯನ್ನು ನಾವು ತಂದಿದ್ದೇವೆ. ಈ ಮಾಹಿತಿಯನ್ನು ಓದಿ ಆ ಸೂಕ್ತ ಸಮಯ ತಿಳಿದುಕೊಂಡು ಆ ಸೂಕ್ತವಾದ ಸಮಯದಲ್ಲಿ ಕ್ರಮ ಬದ್ದವಾಗಿ ಗೌರಿ ಹಾಗೂ ಗಣೇಶನ ಕರೆ ತಂದು ಪೂಜೆ ಸಲ್ಲಿಸಿ ಅವರನ್ನು ಅಷ್ಟೇ ಒಳ್ಳೆಯ ಸಮಯದಲ್ಲಿ ಬೀಳ್ಕೊಟ್ಟು ಅವರ ಕೃಪೆಗೆ ಪಾತ್ರರಾಗಬೇಕೆಂಬುದು ನಮ್ಮ ಲೇಖನದ ಉದ್ದೆಶವಾಗಿದೆ.
ಸ್ವರ್ಣ ಗೌರಿ ವ್ರತ;
ಶ್ರೀ ಶೋಭಿಕುತ್ ನಾಮ್ ಸಂವತ್ಸರ ದಕ್ಷಿಣಾಯಾನೆ ಬದ್ರಪದಾ ಮಾಸೆ 18/9/23 ಕೃಷ್ಣ ಪಕ್ಷ ತೃತೀಯ ಸೋಮವಾರ ಬೆಳಿಗ್ಗೆ 9-16 ರಿಂದ 9-55 ರವರೆಗು ಸ್ವರ್ಣ ಗೌರಿ ವ್ರತಕ್ಕೆ ಸೂಕ್ತವಾದ ಸಮಯ.
ಶ್ರೀ ವರಸಿದ್ದಿ ವಿನಾಯಕನ ವ್ರತ;
ಶ್ರೀ ಶೋಭಿಕುತ್ ನಾಮ್ ಸಂವತ್ಸರ ದಕ್ಷಿಣಾಯಾನೆ ಬದ್ರಪದಾ ಮಾಸೆ 18/9/23 ಕೃಷ್ಣ ಪಕ್ಷ ತೃತೀಯ ಸೋಮವಾರ ಮದ್ಯಾಹ್ನ 12-45 ರಿಂದ 1-30 ರವರೆಗು ಶ್ರೀ ವರಸಿದ್ದಿ ವಿನಾಯಕನ ವ್ರತಕ್ಕೆ ಸೂಕ್ತವಾದ ಸಮಯ.
ಗೌರಿ ಹಾಗೂ ಗಣೇಶ ವಿಸರ್ಜನೆ;
ಶ್ರೀ ಶೋಭಿಕುತ್ ನಾಮ್ ಸಂವತ್ಸರ ದಕ್ಷಿಣಾಯಾನೆ ಬದ್ರಪದಾ ಮಾಸೆ 18/9/23 ಕೃಷ್ಣ ಪಕ್ಷ ತೃತೀಯ ಸೋಮವಾರ ರಾತ್ರಿ 8-00 ರಿಂದ 9-00 ಒಳಗೆ ಗೌರಿ ಹಾಗೂ ಗಣೇಶ ವಿಸರ್ಜನೆಗೆ ಸೂಕ್ತವಾಗುವ ಸಮ