ಸ್ಪಂದನ ಹಾಗೂ ಸಿದ್ದರಾಮಯ್ಯ ಅವರ ಮಗನ ಮೃತ ದೇಹವನ್ನು ವಿದೇಶದಿಂದ ಹಸ್ತಾಂತರ ಮಾಡಿದ್ದು ಹೇಗೆ ಗೊತ್ತಾ?

ಸ್ಪಂದನ ಹಾಗೂ ಸಿದ್ದರಾಮಯ್ಯ ಅವರ ಮಗನ ಮೃತ ದೇಹವನ್ನು ವಿದೇಶದಿಂದ ಹಸ್ತಾಂತರ ಮಾಡಿದ್ದು ಹೇಗೆ ಗೊತ್ತಾ?

ನಮ್ಮ ಚಿತ್ರ ರಂಗದ ಮೇಲೆ ಬಿದ್ದಿರುವ ಈ ಕರಿ ನೆರಳು ನಮ್ಮ ಕಲಾವಿದರನ್ನು ಒಬ್ಬೊಬ್ಬರಾಗಿ ದೊರ ಮಾಡುತ್ತಿದೆ. ಅದ್ರಲ್ಲೂ ಊಹೆಗೂ ಮೀರಿದ ಅದ್ಬುತ ಜೀವವನ್ನು ದೂರ ಮಾಡುತ್ತಿದೆ. ಈ ನಾಲ್ಕು  ವರ್ಷದ ಹಿಂದೆ ಹೃದಯಾಘಾತ ದಿಂದ ಮರಣ ಹೊಂದಿದ "ಚಿರು" ಅವರಿಂದ ಕಳೆದ ತಿಂಗಳು ಕೂಡ ಈ ಹೃದಯಾಘಾತಕ್ಕೆ ಬಲಿಯಾದ "ಸ್ಪಂದನ" ವರೆಗೂ  ಇವರೆಲ್ಲರೂ ಯಾವ ಕಲ್ಮಶ ಇರದಂತೆ ಬದುಕುತ್ತಿದ್ದವರು ಎಂದರೆ ತಪ್ಪಾಗಲಾರದು. ಆದರೆ ಸ್ಪಂದನ ಅವರ ವಿಚಾರ ಕೊಂಚ ವಿಭಿನ್ನ ಏಕೆಂದರೆ ಚಿರು ಹಾಗೂ ಅಪ್ಪು ಅವರು ನಮ್ಮ ಭಾರತದಲ್ಲಿ ಮರಣ ಹೊಂದಿದರು. ಆದರೆ ಸ್ಪಂದನ ಅವರು ತಮ್ಮ ವಿವಾಹ ವಾರ್ಷಿಕೋತ್ಸವ ಆಚರಣೆಗೆ ತೈಲ್ಯಾಂಡ್ ಪ್ರವಾಸದಲ್ಲಿ ಇದ್ದ ವೇಳೆಯಲ್ಲಿ ಲೋ ಬಿಪಿ ಸಮಸ್ಯೆ ಇಂದ ಹೃದಯಾಘಾತ ದಿಂದ ಬಾರದ ಲೋಕಕ್ಕೆ ಪಯಣ ಬೆಳೆಸಿದರು.

ಇನ್ನೂ ವಿದೇಶದಲ್ಲಿ ಸಾವನ್ನಪ್ಪಿದರೆ ಅದನ್ನು ಅವರ ತವರಿಗೆ ತರುವುದು ಅಷ್ಟು ಸುಲಭದ ಮಾತಲ್ಲ ಇನ್ನೂ ವಿದೇಶದಲ್ಲಿ ಮರಣ ಹೊಂದಿರುವ ಮೃತದೇಹವನ್ನು ಹಸ್ತಾಂತರ ಮಾಡಲು ಅಲ್ಲಿನ ದೇಶದ ನಿಯಮಗಳನ್ನು ಪಾಲಿಸಿ ಆ ಮೃತ ದೇಹವನ್ನು ಅವರ ತಾಯ್ನಾಡಿಗೆ ತರಲು ಸಾಧ್ಯವಾಗತ್ತದೆ. ಕೆಲವೊಮ್ಮೆ ಆ ಮೃತ ದೇಹವನ್ನು ಅಲ್ಲಿಯೇ ಕೂಡ ಹುಳುವ ಅವಕಾಶ ಮಾಡಿಕೊಡಲಾಗಿದೆ. ಆದರೆ ಗಲ್ಫ್ ದೇಶಗಳಲ್ಲಿ ಮಾತ್ರ ಹಿಂದೂಗಳಿಗೆ ಅಲ್ಲಿ ಅವಕಾಶ ಮಾಡಿಕೊಡಲಾಗುವುದಿಲ್ಲ. ಕೇವಲ ಮುಸ್ಲಿಂ ಜನಾಂಗದ ಮಂದಿಗೆ ಮಾತ್ರ ಅಲ್ಲಿ ಹೂಳಲು ಅಥವಾ ಸುಡಲು ಅವಕಾಶ ಮಾಡಿಕೊಡಲಾಗುವುದು. ಇನ್ನೂ ವಿದೇಶದಲ್ಲಿ ಮೃತ ಪಟ್ಟವರನ್ನು ತಮ್ಮ ಊರಿಗೆ ಹೇಗೆ ಹಸ್ತಾಂತರ ಮಾಡುತ್ತಾರೆ ಹಾಗೂ ಮಾಡಲು ನಾವು ಯಾವ ಕ್ರಮಗಳನ್ನು ಪಾಲಿಸಬೇಕು ಎಂದು ನಾವು ತಿಳಿಯೋಣ ಬನ್ನಿ. 

ವಿದೇಶದಲ್ಲಿ ಮೃತ ಪಟ್ಟರೆ ಏನಾಗತ್ತೆ?
ವಿದೇಶದಲ್ಲಿ ಮೃತ ಪಟ್ಟರೆ ತಕ್ಷಣವೇ ಆ ದೇಶದ ಇಲಾಖೆಗಳ ಸಹಾಯವನ್ನು ತೆಗೆದುಕೊಳ್ಳಬೇಕು. ಏಕೆಂದ್ರೆ ಹಸ್ತಾಂತರ ಮಾಡಲು ವಿಭಿನ್ನ ರೀತಿಯ ಪ್ರೊಸೀಜರ್ ಗಳನ್ನ  ನಾವು ಪಾಲಿಸಬೇಕು. ಹಾಗಾಗಿ ಬಹಳ ಪ್ರೊಸೀಜರ್ಗಳು ಪಾಲಿಸಲು ಸಾಕಷ್ಟು ಸಮಯ ಹಿಡಿಯುವುದರಿಂದ ಆದಷ್ಟು ಬೇಗ ಈ ಸುದ್ದಿಯನ್ನು ಬೇಗ ಇಲಾಖೆಗಳಿಗೆ ಮುಟ್ಟಿಸಬೇಕು. ವಿದೇಶದಲ್ಲಿ ಮೃತ ಪಟ್ಟವರ ಜೊತೆ ಅವರ ಸಂಬಂಧಿಕರು ಇಲ್ಲದೆ ಇದ್ದರೆ ಅದರ ಹಸ್ತಾಂತರದ ಹೊಣೆಯನ್ನು ಆ ದೇಶದ ವಿದೇಶಾಂಗ ಇಲಾಖೆಯು ವಹಿಸಿಕೊಳ್ಳುವುದು.

ಮೃತ ದೇಹವನ್ನು ಹಸ್ತಾಂತರ ಮಾಡಲು ಬೇಕಾಗಿರುವ ದಾಖಲೆ?

ಮೆಡಿಕಲ್ ಸರ್ಟಿಫಿಕೇಟ್/ ಮರಣೋತ್ತರ ಪರೀಕ್ಷೆ ದಾಖಲೆ.
ಪೊಲೀಸ್ ರಿಪೋರ್ಟ್ ನ ಕಾಪಿ.
ಹಸ್ತಾಂತರ ಮಾಡಲು ಸಂಬಂಧಿಕರ ಒಪ್ಪಿಗೆಯ ಪತ್ರ.
ಮೃತರ ಪಾಸ್ ಪೋರ್ಟ್ ಹಾಗೂ ವೀಸಾ 
ಪೊಲೀಸ್ ಕಸ್ಟಂ ಅಧಿಕಾರಿಗಳಿಂದ ಕ್ಲಿಯರೆನ್ಸ್ ಸರ್ಟಿಫಿಕೇಟ್.

ವಿಮಾನದಲ್ಲಿ ತರಲು ಅನುಸರಿಸಬೇಕಾದ ನಿಯಮ?

48 ಗಂಟೆ ಮುನ್ನವೇ ವಿಮಾನ ಇಲಾಖೆಗೆ ಮಾಹಿತಿ.
ಎಲ್ಲಾ ರೀತಿಯ ಕ್ಲಿಯರೆನ್ಸ್ ಸರ್ಟಿಫಿಕೇಟ್.
ಗಟ್ಟಿ ಮುಟ್ಟಗಿದ್ದ ಬಾಕ್ಸ್ ನಲ್ಲಿ ಮೃತ ದೇಹ ತರಬೇಕು.
ಆ ಬಾಕ್ಸ್  ಏರ್ ಟೈಟ್  ಕಫಿನ್ ನದ್ದು ಆಗಿರಬೇಕು.
ಆ ಮೃತ ದೇಹ ಸಾಂಕ್ರಾಮಿಕ ರೋಗದಿಂದ ಮರಣ ಹೊಂದಿರಬಾರದು.
ಆ ಬಾಕ್ಸ್ ಮೇಲೆ ಆ ಮೃತ ದೇಹದ ಮರಣ ಪ್ರಮಾಣ ಪತ್ರ ಅಂಟಿಸಿರಬೇಕು.
ಆ ಬಾಕ್ಸ್ ಮೇಲೆ ಹುಮನ್ ರಿಮೆನ್ಸ್ ಎಂದು ಬರದಿರಬೇಕು.

ಮೃತ ದೇಹ ಸಾಗಿಸಲು ಎಷ್ಟು ಖರ್ಚಾಗುತ್ತದೆ?
ಮೃತ ದೇಹ ಸಾಗಿಸಲು 35 ಸಾವಿರನಿಂದ ಲಕ್ಷದ ವರೆಗೂ ವೆಚ್ಚ ಆಗಬಹುದು. ಆ ಎಲ್ಲಾ ಖರ್ಚನ್ನು ಮೃತರ ಸಂಬಂಧಿಕರು ನೀಡಬೇಕು.

ಇನ್ನೂ ಸಿದ್ದರಾಮಯ್ಯ ಅವ್ರ ಮಗ ಕೊಡ ವಿದೇಶಗಳಲ್ಲಿ ಮರಣ ಹೊಂದಿದ ಸಮಯದಲ್ಲಿ ಅವರು ತೀರಿಕೊಂಡ 2 ದಿನಗಳ ನಂತರ ಮೃತ ದೇಹ ನಮ್ಮ ಭಾರತಕ್ಕೆ ಬಂದಿತ್ತು. ಇತ್ತ ಸ್ಪಂದನ ಅವರ ವಿಷಯದಲ್ಲಿ ಕೂಡ ಅಷ್ಟು ಸಮಯ ಹಿಡಿಯಿತು. ಇನ್ನೂ ಅವರ ಸಾವು ಅಸಹಾಯಕ ಸವಾಗಿದ್ದರೆ ಆ ಪರೀಕ್ಷೆ ಕೆಲವೊಮ್ಮೆ 4-5 ದಿನಗಳ ವರೆಗೂ ನಡೆಯುವುದು.  ( video credit : india reports )