ಪ್ರಿಯಾ ಕೊಟ್ಟ ಸರ್ಪ್ರೈಸ್ ಗೆ ಭಾವುಕರಾದ ಕಿಚ್ಚ! ಅಷ್ಟಕ್ಕೂ ಆ ಸರ್ಪ್ರೈಸ್ ಏನು ಗೊತ್ತಾ?

ಪ್ರಿಯಾ ಕೊಟ್ಟ ಸರ್ಪ್ರೈಸ್ ಗೆ ಭಾವುಕರಾದ ಕಿಚ್ಚ! ಅಷ್ಟಕ್ಕೂ ಆ ಸರ್ಪ್ರೈಸ್ ಏನು ಗೊತ್ತಾ?

ಸ್ಯಾಂಡಲ್ ವುಡ್ ನ "ಅಭಿನಯ ಚಕ್ರವರ್ತಿ" ಎಂದರೆ ನಮ್ಮ ಕರ್ನಾಟಕಕ್ಕೆ ಅಲ್ಲದೆ ಪರ ಭಾಷಿಗರ ಚಿತ್ರರಂಗಕ್ಕೆ ಕೂಡ ಚಿರಪರಿಚಿತವಾದ ಹೆಸರು ಎಂದರೆ ತಪ್ಪಾಗಲಾರದು. ಇನ್ನೂ ನಮ್ಮ" ಕಿಚ್ಚ ಸುದೀಪ್"  ಅವರು ಬಣ್ಣ ಕುಟುಂಬದ ಹಿನ್ನಲೆ ಇಂದ ಬಂದವರು ಆದರೂ ಕೂಡ ತಮ್ಮ ಸ್ವಂತಿಕೆಯಿಂದ ಹಲವಾರು ಅಡೆತಡೆಗಳನ್ನು ಏದುರಿಸಿಕೊಂಡು ಚಿತ್ರ ರಂಗದಲ್ಲಿ ಇಂದು ಉನ್ನತ ಸ್ಥಾನದಲ್ಲಿ ಗುರುತಿಸಿಕೊಂಡಿದ್ದಾರೆ. ಇನ್ನೂ ನಮ್ಮ ಕರ್ನಾಟಕದ ಹೆಮ್ಮೆಯ ಕಿಚ್ಚ ಸುದೀಪ್ ಅವರು ಪಂಚ ಭಾಷೆಯಲ್ಲಿ ಕೂಡ ಗುರುತಿಸಿಕೊಂಡು ಎಲ್ಲಾ ಭಾಷೆಯ ಸಿನಿಮಾ ರಂಗದಲ್ಲಿ ಕೂಡ ತಮ್ಮ ನಟನೆಯ ಮೂಲಕ ಎಲ್ಲರ ಮನಸ್ಸು ಗೆದ್ದಿದ್ದಾರೆ.( video credit : cini stores )

ಇಂತಹ ಕೋಟ್ಯಂತರ ಮಂದಿ ಅಭಿಮಾನಿಗಳನ್ನು ಹೊಂದಿರುವ ಈ ಚಕ್ರವರ್ತಿಗೆ ಇಂದು "50ನೆ" ಹುಟ್ಟು ಹಬ್ಬದ ಸಂಭ್ರಮ. ಇನ್ನೂ ನೆನ್ನೆ ರಾತ್ರಿ ಇಂದಲೇ ಇವರ ಹುಟ್ಟುಹಬ್ಬದ ಪ್ರಯುಕ್ತ ಅವರ ಅಭಿಮಾನಿಗಳು ವಿಭಿನ್ನ ರೀತಿಯಲ್ಲಿ ಆಚರಿಸುತ್ತಿದ್ದಾರೆ. ಅದರೊಟ್ಟಿಗೆ  ಕಿಚ್ಚ ಹುಟ್ಟು ಹಬ್ಬ ವನ್ನೂ ಆಚರಿಸಿಕೊಳ್ಳಲು "ಲಿಂಕ್ಸ್‌ ಗ್ರೌಂಡ್‌" ನಲ್ಲಿ ಜನ ಸಾಗರವೇ ನೆರೆದಿತ್ತು. ಅಲ್ಲಿ ತಮ್ಮ ಅಭಿಮಾನಿಗಳ ಒಟ್ಟಿಗೆ ಕಿಚ್ಚ ತಮ್ಮ ಹುಟ್ಟುಹಬ್ಬವನ್ನು ಕೇಕ್ ಕಟ್ ಮಾಡುವ ಮೂಲಕ ಆಚರಿಸಿಕೊಂಡರು. ಆ ಸಮಯದಲ್ಲಿ ಕಿಚ್ಚನ ಅಭಿಮಾನಿಗಳ ಜೊತೆಗೆ ಕಿಚ್ಚನ ಪ್ರೀತಿಯ ಮಡದಿ "ಪ್ರಿಯ ಸುದೀಪ್" ಹಾಗೂ ಅಚ್ಚು ಮೆಚ್ಚಿನ ಮಗಳಾದ "ಸ್ಪಂದನ" ಅವರು ಕೂಡ ಭಾಗಿ ಆಗಿದ್ದರು.   

ಆ ಸಂಧರ್ಭದಲ್ಲಿ ಕಿಚ್ಚನ  ಪ್ರೀತಿಯ ಮಡದಿ  ಹುಟ್ಟು ಹಬ್ಬಕ್ಕೆ ಬಹಳ ಪ್ರೀತಿಯಿಂದ ಕೊಟ್ಟ ಸರ್ಪ್ರೈಸ್ ಕಿಚ್ಚನನ್ನು ಕೆಲ ಕ್ಷಣ ಭಾವುಕರನ್ನಾಗಿ ಮಾಡಿತ್ತು. ಆ ಸ್ಸರ್ಪ್ರೈಸ್ ಏನೆಂದು ತಿಳಿಯಲು ಮುಂದಿನ ಸಾಲುಗಳನ್ನು ಓದಿ. ಕಿಚ್ಚನ ಮಡದಿ ತನ್ನ ಪತಿಯ 50ನೆ ಹುಟ್ಟು ಹಬ್ಬಕ್ಕೆ ಡ್ರೋನ್ ಸಹಾಯದಿಂದ "ಡ್ರೋನ್‌ ಲೈಟಿಂಗ್‌"  ಮೂಲಕ ಕಿಚ್ಚನ ಹುಟ್ಟು ಹಬ್ಬಕ್ಕೆ  ತುಂಬಾ ವಿಶೇಷವಾಗಿ ಶುಭಕೋರಿದರು. ಇದನ್ನು ನೋಡಿ ಕಿಚ್ಚ ಥ್ರಿಲ್‌  ಕೂಡ ಆಗಿದ್ದಾರೆ. ಹೀಗೆ ಶುರುವಾದ ಕಿಚ್ಚನ ಹುಟ್ಟು ಹಬ್ಬದ ಸಂಭ್ರಮ ಈಗಲೂ ಕೂಡ ಅಭಿಮಾನಿಗಳ ಶುಭಾಶಯದೊಂದಿಗೆ ಮುಗಿಯುತ್ತಾ ಬಂದಿದೆ. ಇನ್ನೂ ನಮ್ಮ ಸ್ಯಾಂಡಲ್ ವುಡ್ ನ ನಟರ ಗತ್ತನ್ನು ಪರ ಭಾಷಿಗರಿಗೆ ತೋರಿಸಿಕೊಟ್ಟ ನಮ್ಮ ಕರುನಾಡ ಚಕ್ರವರ್ತಿ ಗೆ ಹುಟ್ಟು ಹಬ್ಬದ ಶುಭಾಶಯ ತಿಳಿಸಿ ಅವರ ಮುಂಬರುವ ಚಿತ್ರಕ್ಕೆ ಒಳ್ಳೆಯದಾಗಲಿ ಎಂದು ನಾವೆಲ್ಲರೂ ಆಶಿಸೋಣ.