ಕಾಲಜ್ಞಾನದ ಪ್ರಕಾರ 2024 ರಲ್ಲಿ ಏನೆಲ್ಲಾ ನಡೆಯುತ್ತದೆ ಗೊತ್ತಾ..? ಬೆಚ್ಚಿ ಬೀಳುವಂತಿದೆ ನೋಡಿ
![ಕಾಲಜ್ಞಾನದ ಪ್ರಕಾರ 2024 ರಲ್ಲಿ ಏನೆಲ್ಲಾ ನಡೆಯುತ್ತದೆ ಗೊತ್ತಾ..? ಬೆಚ್ಚಿ ಬೀಳುವಂತಿದೆ ನೋಡಿ ಕಾಲಜ್ಞಾನದ ಪ್ರಕಾರ 2024 ರಲ್ಲಿ ಏನೆಲ್ಲಾ ನಡೆಯುತ್ತದೆ ಗೊತ್ತಾ..? ಬೆಚ್ಚಿ ಬೀಳುವಂತಿದೆ ನೋಡಿ](/news_images/2023/10/kalajayna1698143071.jpg)
ಕಾಲಜ್ಞಾನವನ್ನು ನಾವು ಸದಾ ನಂಬುತಲೆ ಬಂದಿದ್ದೇವೆ. ಕಾಲಜ್ಞಾನದ ಪ್ರಕಾರ ಕೆಲವೊಂದಿಷ್ಟು ಸ್ವಾಮೀಜಿಗಳು ಅವರ ಶಕ್ತಿ ಮೀರಿ ಮುಂದಿನ ದಿನಗಳಲ್ಲಿ ಮತ್ತು ಹಿಂದಿನ ದಿನಗಳಲ್ಲಿ ಏನಾಗುತ್ತದೆ ಎಂಬುದಾಗಿ ಹೆಚ್ಚು ಮೊದಲೇ ಬರೆದು ಹೋಗಿದ್ದರು. ಅವರ ಸಾಲಿಗೆ ಇದೀಗ ಪೋತಲೂರು ವೀರಬ್ರಹ್ಮೇಂದ್ರ ಸ್ವಾಮೀಜಿಗಳು ಕೂಡ ಸೇರಿದ್ದಾರೆ ಗೆಳೆಯರೇ. ಪೋಥಲೂರು ವೀರಬ್ರಹ್ಮೆಂದ್ರ ಗುರುಜಿಗಳು ಈ ಜೀವನದಲ್ಲಿ ಮುಂದೆ ಆಗುವ ಕೆಲ ಘಟನೆ ಬಗ್ಗೆ ಮುಂಚೆಯೇ ಹೇಳಿ ಹೋಗಿದ್ದಾರೆ ಎಂದು ತಿಳಿದು ಬಂದಿದೆ. ಕಾಲಜ್ಞಾನಿ ಪ್ರಕಾರ ಪುಸ್ತಕದಲ್ಲಿ ಕಾಲಜ್ಞಾನವನ್ನು ಮುಂದಿನ ದಿನಮಾನಗಳಲ್ಲಿ ಆಗುವ ಘಟನೆಗಳನ್ನು ಬರೆಯಲಾಗಿತ್ತಂತೆ, ಆ ಪುಸ್ತಕವನ್ನು ಮಣ್ಣಲ್ಲಿ ಮುಚ್ಚಿ ನಂತರ ಅದರ ಮೇಲೆ ಹುಣಸೆ ಮರವನ್ನು ಬೆಳೆಸಲಾಗಿದೆ. ಹೌದು ಪೋತಲೂರು ವೀರ ಬ್ರಹ್ಮೇಂದ್ರ ಸ್ವಾಮೀಜಿಗಳು ಅಸಲಿಗೆ ಹೇಳಿರುವ ಯಾವ ಘಟನೆಗಳು ಕಾಲಜ್ಞಾನದ ಪ್ರಕಾರ ನಡೆದಿದೆ ಗೊತ್ತಾ..?
ಕಾಶಿಯಲ್ಲಿ ಅವರು ಹೇಳಿದ ಹಾಗೆ 40 ದಿನ ಆ ದೇವಾಲಯ ಮುಚ್ಚಲ್ಪಡುತ್ತದೆ ಎಂದು ಹೇಳಿದ್ದರು. ಅದರ ಪ್ರಕಾರ 1909 ರಿಂದ 1912 ರಲ್ಲಿ 40 ದಿನಗಳ ಕಾಲ ಕಾಶಿಯ ದೇವಾಲಯವನ್ನು ಮುಚ್ಚಲಾಗಿತ್ತಂತೆ. ಅವರು ಹೇಳಿದ ಹಾಗೆ ಬರು ಬರುತ್ತಾ ರಾಜರ ಆಳ್ವಿಕೆ ದೇಶದಲ್ಲಿ ಕಡಿಮೆ ಆಗುತ್ತದೆ ಎಂದು, ಅದು ಕೂಡ ನಿಜವಾಗಿದೆ. ಜೊತೆಗೆ ಒಬ್ಬ ಮಹಿಳೆ 16 ವರ್ಷ ರಾಜಕೀಯದಲ್ಲಿ ದೇಶ ಆಳುತ್ತಾರೇ ಎನ್ನಲಾಗಿ ಹೇಳಿದ್ದು ಸೋನಿಯಾ ಗಾಂಧಿ 16 ವರ್ಷ ಈ ದೇಶವನ್ನು ಆಳಿದ ಮಹಿಳೆ ಆಗಿದ್ದಾರೆ. ಬ್ರಾಹ್ಮಣರ ಅಗ್ರಹಾರಗಳು ಕಣ್ಮರೆ ಆಗುತ್ತವೆ ಎಂದಿದ್ದು, ಅವರ ಮಾತಿನಂತೆ ಅವು ಸಹ ಈಗ ಕಣ್ಮರೆಯಾಗಿವೆ.. ಜನಸಂಖ್ಯೆ ವಿಚಾರವಾಗಿಯೂ ಹೇಳಿದ್ದು ಇದೀಗ ಜನಸಂಖ್ಯೆ ಹೆಚ್ಚಳ ಸಹ ಆಗಿದೆ. ಅದೆಷ್ಟೇ ಯಂತ್ರ ತಂತ್ರ ಮುಂದುವರೆದರೂ ಯಾವುದೇ ಪ್ರಯೋಜನ ಇಲ್ಲ, ಮನುಷ್ಯನ ಸಾವು ಜನನವ ಎಂದಿಗೂ ಕಂಡು ಹಿಡಿಯಲು ಆಗುವುದಿಲ್ಲ, ಸಾವನ್ನು ಗೆಲ್ಲಲಾಗುವುದಿಲ್ಲ ಎಂದಿದರಂತೆ..ಅದರಂತೆ ಸಾವು ಬದುಕನ್ನ ಇಂದಿಗೂ ಕೂಡ ಯಾರು ಭೇದಿಸಲು ಆಗಿಲ್ಲ.
ಸಂಬಂಧಗಳಲ್ಲಿ ಯಾವ ಬೆಲೆಯೂ ಇಲ್ಲದೆ ಕೆಲವರು ಅ+ಕ್ರಮ ಸಂಬಂಧ ಬೆಳೆಸುತ್ತಾರೆ. ಅಣ್ಣ ತಂಗಿ ಎನ್ನದೆ ಕೆಟ್ಟ ಕೆಲಸಗಳನ್ನು ಮಾಡುತ್ತಾರೆ ಎಂದು ಹೇಳಿದ್ದರು. ಅದು ಕೂಡ ಇದೀಗ ಕೆಲವು ಘಟನೆಗಳ ಮೂಲಕ ನಿಜವಾಗುತಿದೆ. ನೀರಿನಲ್ಲಿ ಉದ್ಯುತ್ ದೀಪ ಉತ್ಪಾದನೆ ಅಂದರೆ, ಮಳೆ ಹೆಚ್ಚಾಗಿ ನೀರಿಂದ ಕರೆಂಟ್ ಅನ್ನು ಉತ್ಪಾದನೆ ಮಾಡಬಹುದು ಎನ್ನಲಾಗಿ ಮೊದಲೇ ಈ ಗುರೂಜಿ ಹೇಳಿದರಂತೆ. ಅದರ ಪ್ರಕಾರ ಅದು ಕೂಡ ಇದೀಗ ಸತ್ಯ ಆಗಿದೆ. ವಿದೇಶಿರು ನಮ್ಮ ದೇಶದಲ್ಲಿ ಆಳ್ವಿಕೆ ಮಾಡುತ್ತಾರೆ ಎಂದಿದ್ದರು. ಅದರಂತೆ ಬ್ರಿಟಿಷರು ನಮ್ಮ ದೇಶವನ್ನು ಕೊಳ್ಳೆ ಹೊಡೆದುದ್ದನ್ನು ನೀವು ಸಹ ನೋಡಿದ್ದೀರಿ.
ದೇಶದಲ್ಲಿ ಕಳ್ಳ ಸ್ವಾಮಿಗಳು ನಕಲಿ ಬಾಬಾಗಳು ಹೆಚ್ಚಾಗಿ ಹುಟ್ಟಿಕೊಳ್ಳುತ್ತಾರೆ ಎಂದಿದ್ರು. ಈಗ ಹೆಚ್ಚು ಕಳ್ಳರೇ ಇದ್ದಾರೆ. ಮುಂದಿನ ಐದು ಸಾವಿರ ವರ್ಷದ ನಂತರ ಕಾಶಿಯ ಗಂಗಾ ನೀರು ಇಂಗಿ ಹೋಗುತ್ತದೆ ಎಂದಿರುವ ಸ್ವಾಮೀಜಿ, ಬೆಂಗಳೂರು ಕಾಮಾಕ್ಷಿ ದೇವಾಲಯದಲ್ಲಿ ಅಂದರೆ ಬೆಂಗಳೂರಿನ ಕಾಮಾಕ್ಷಿ ದೇವಾಲಯದಲ್ಲಿ ರಕ್ತ ಸುರಿಯಲಿದೆಯಂತೆ. ಬೇವಿನ ಮರದಲ್ಲಿ ಅಮೃತ ಬರಲಿದೆ, ಶ್ರೀಶೈಲ ಬೆಟ್ಟದಲ್ಲಿ ಬೆಟ್ಟಗಳು ಉರುಳಿ ಪ್ರಾಣ ನಷ್ಟ ಆಗಲಿದೆ ಎಂದಿದ್ದಾರೆ.
ಜೊತೆಗೆ 2024ರಲ್ಲಿ ಆಗುವ ಕೆಲ ಘಟನೆಗಳ ಬಗ್ಗೆಯೂ ಹೇಳಿಕೊಂಡಿರುವ ಸ್ವಾಮೀಜಿ ಅವರು ಮನುಷ್ಯರ ಪಾಪಕ್ಕೆ ಪ್ರಕೃತಿ ಸೇಡು ತೀರಿಸಿಕೊಳ್ಳುತ್ತದೆ ಎಂದಿದ್ದಾರೆ. ಜೊತೆಗೆ ಹೆಚ್ಚಾಗಿ ಈಗ ಮಳೆಬಿಸಿಲು ಆಗದಿರುವ ಸಮಯಕ್ಕೆ ಆಗಿ, ಈ ಮನುಷ್ಯನನ್ನ ಸಂಕಷ್ಟಕ್ಕೆ ಸಿಲುಕಿಸುತ್ತಿದೆ. ಈ ಮಾನವರ ಪಾಪ ಹೆಚ್ಚಾಗುತ್ತಿದ್ದು ಸಂಬಂಧಗಳಲ್ಲಿ ಯಾವ ಬೆಲೆ ಇಲ್ಲದೆ, ಜನರು ತಮ್ಮ ಮೋಹವನ್ನು ಹೆಚ್ಚಿಸಿಕೊಂಡು, ಪರ ಸ್ತ್ರೀಯರ ಮೇಲೆ ಕಣ್ಣು ಹಾಕುತ್ತಿದ್ದಾರೆ. ಅ+ಕ್ರಮ ಸಂಬಂಧಗಳ ಹೆಚ್ಚು ಇಟ್ಟುಕೊಳ್ಳುತ್ತಿದ್ದಾರೆ, ಜೊತೆಗೆ ಕೆಲವರು ಅಣ್ಣ ತಂಗಿ ಸಂಬಂಧ ತಿಳಿಯದೇನೆ ತಪ್ಪು ಕೆಲಸ ಮಾಡುತ್ತಿದ್ದಾರೆ. ಮೆಡಿಸಿನ್ ಸಿಗದಿರುವ ಕಾಯಿಲೆಗಳು 2024ರಲ್ಲಿ ಬರಲಿದೆ, ಪ್ರಾಣ ಹಾನಿಗಳು ಆಗಲಿವೆ, ಇಂಟರ್ ಕ್ಯಾಸ್ಟ್ ಮದುವೆ, ಧರ್ಮ ಧರ್ಮಗಳ ನಡುವೆ ಗುದ್ದಾಟ ಎಲ್ಲವೂ ಕೂಡ 2024ರಲ್ಲಿ ಹೆಚ್ಚು ಸಂಭವಿಸಬಹುದು ಎಂದು ವೀರ ಬ್ರಹ್ಮೆಂದ್ರ ಗುರುಜಿ ಅವರು ತಮ್ಮ ಕಾಲಜ್ಞಾನದಲ್ಲಿ ತಿಳಿಸಿದ್ದಾರೆ ಎಂದು ಈ ವಿಡಿಯೋದಲ್ಲಿ ತಿಳಿಸಲಾಗಿದೆ. ಒಮ್ಮೆ ಪೂರ್ತಿ ನೋಡಿ, ಮತ್ತು ವಿಡಿಯೋ ಇಷ್ಟವಾದಲ್ಲಿ ಶೇರ್ ಮಾಡಿ, ಮತ್ತು ಈ ಕಾಲಜ್ಞಾನದ ಮಾತಿನ ಪ್ರಕಾರ, ಈ ಬಗ್ಗೆ ನಿಮ್ಮ ಅನಿಸಿಕೆ ಏನು ಎಂಬುದಾಗಿ ತಿಳಿಸಿ ಧನ್ಯವಾದಗಳು.... ( video credit :Mr suggestions )