ನಟಿ ಪೂಜಾಗಾಂಧಿ ಮದುವೆ!ಹೊಸ ಜೀವನಕ್ಕೆ ಮುಂಗಾರು ಮಳೆ ನಟಿ!ಹುಡುಗ ಯಾರು? ಹೇಗಿದೆ ಜೋಡಿ?

ನಟಿ ಪೂಜಾಗಾಂಧಿ ಮದುವೆ!ಹೊಸ ಜೀವನಕ್ಕೆ ಮುಂಗಾರು ಮಳೆ ನಟಿ!ಹುಡುಗ ಯಾರು? ಹೇಗಿದೆ ಜೋಡಿ?

ಮುಂಗಾರು ಮಳೆ ಚಿತ್ರದ ಮೂಲಕ ಕನ್ನಡಿಗರಿಗೆ ಹತ್ತಿರ ಆದಂತಹ ಮುದ್ದು ಚೆಲುವೆ, ನಮ್ಮ ಕನ್ನಡಿಗರ ನೆಚ್ಚಿನ ನಟಿ, ಕನ್ನಡವ ಕಲಿತು ಕನ್ನಡ ಬಾಷೆಯ ಹೆಚ್ಚು ಇಷ್ಟ ಪಡುವ ಮುದ್ದು ಮುಖದ ಗೊಂಬೆ ನಟಿ ಪೂಜಾ ಗಾಂಧಿ ಅವರು ಇದೀಗ ಮದುವೆ ಸುದ್ದಿಯನ್ನ ಪ್ರಸ್ತಾಪಿಸಿದ್ದಾರೆ. ನಾಳೆ ಅವರು ಸಪ್ತಪದಿ ತುಳಿಯಲಿರುವ ಸುದ್ದಿಯನ್ನು ಈಗಷ್ಟೇ ಮೀಡಿಯಾದಲ್ಲಿ ಹಂಚಿಕೊಂಡಿದ್ದು ಪೂಜಾ ಗಾಂಧಿ ಅವರ ಮದುವೆ ಆಗುತ್ತಿರುವ ಸಕತ್ ಖುಷಿಯ ವಿಚಾರವನ್ನು ಅವರ ಅಭಿಮಾನಿಗಳ ಎದುರು ಹಂಚಿಕೊಂಡಿದ್ದಾರೆ..

ಹೌದು ಪತ್ರದ ಮೂಲಕ ತಮ್ಮ ಮದುವೆ ಸುದ್ದಿಯನ್ನು ಹೇಳಿಕೊಂಡಿರುವ ಪೂಜಾ ಗಾಂಧಿ ಅವರು, ನನ್ನ ಸಿನಿ ಕ್ಷೇತ್ರದ ದಾರಿಯಲ್ಲಿ, ನನ್ನ ಬೆಳವಣಿಗೆಯ ಪಾತ್ರದಲ್ಲಿ ನೀವು ತುಂಬಾನೆ ದೊಡ್ಡ ಪಾತ್ರ ವಹಿಸಿದ್ದೀರಿ. ಹಾಗಾಗಿ ಕನ್ನಡಿಗರಿಗೆ ಅಭಿಮಾನಿಗಳಿಗೆ ಮಾಧ್ಯಮದವರಿಗೆ ನನ್ನ ಧನ್ಯವಾದಗಳು ಎಂದರು. ನೀವು ನನ್ನ ಮದುವೆಗೆ ಬರಬಹುದು , ಆದರೆ ಕ್ಯಾಮರಾ ಬಿಟ್ಟು ಬನ್ನಿ ಸಾಧ್ಯವಾದಷ್ಟು ನಾವು ನಿಮಗೆ ನಮ್ಮ ಮದುವೆಯ ಅಪ್ಡೇಟ್ಸ್ ಗಳ ಫೋಟೋಗಳನ್ನು ನೀಡುತ್ತೇವೆ ಎಂದು ಕೇಳಿಕೊಂಡಿದ್ದಾರೆ. ಜೊತೆಗೆ ಕುವೆಂಪು ಆಶಯದ ಮೂಲಕ ಮಂತ್ರ ಮಾಂಗಲ್ಯದಲ್ಲಿ ಸಪ್ತಪದಿಯ ತುಳಿಯಲಿದ್ದಾರಂತೆ ಪೂಜಾ ಗಾಂಧಿ.   

ಅಸಲಿಗೆ ಇವರು ಮದುವೆಯಾಗುತ್ತಿರುವ ಆ ಹುಡುಗ ಯಾರು ಗೊತ್ತಾ..? ಹೌದು ನಮ್ಮ ಮಳೆಯ ಹುಡುಗಿ ಪೂಜಾ ಗಾಂಧಿ ಅವರು ಇದೀಗ ವಿಜಯ್ ಗೋರ್ಪಡೆ ಎಂಬುವವರ ಜೊತೆ ಹೊಸ ದಾಂಪತ್ಯ ಜೀವನವನ್ನು ಆರಂಭಿಸಲಿದ್ದಾರಂತೆ. ಅದರ ಬಗ್ಗೆ ನಾಳೆ ಬೆಳಗ್ಗೆ ಎಲ್ಲ ಅಪ್ಡೇಟ್ಸ್ ಗಳನ್ನು ನೀಡಲಿದ್ದು ಯಲಹಂಕದ ಕುವೆಂಪು ಆಶಯದ ಮಂತ್ರ ಮಾಂಗಲ್ಯದಲ್ಲಿ ಹೊಸ ಜೀವನಕ್ಕೆ ನಟಿ ಪೂಜಾ ಗಾಂಧಿ ಕಾಲಿಡಲ್ಲಿದ್ದಾರೆ. ಹೌದು ವಿಜಯ್ ಗೋರ್ಪಡೆ ಅವರು ಒಬ್ಬ ಬಿಸ್ನೆಸ್ ಮ್ಯಾನ್ ಎಂದು ಕೇಳಿ ಬರುತ್ತಿದೆ. ಇನ್ನಷ್ಟು ಕಡೆ ಅವರು ಒಬ್ಬ ಪ್ರೊಫೆಸರ್ ಎಂದು ಹೇಳಲಾಗುತ್ತಿದೆ.

ಇನ್ನೊಂದು ಕಡೆ ಕೇಳಿ ಬಂದಂತೆ, ಅವರು ಲಾಜಿಸ್ಟಿಕ್ ಎಂಬ ಒಂದು ಕಂಪನಿಯ ಓನರ್ ಎಂದು ಕೂಡ ಹೇಳಲಾಗುತ್ತಿದೆ..ಇದೆಲ್ಲದಕ್ಕೂ ನಟಿ ಪೂಜಾ ಗಾಂಧಿ ಅವರೇ ಉತ್ತರ ನೀಡಬೇಕಿದೆ.. ಮದುವೆಯಾಗುತ್ತಿರುವ ಪೂಜಾ ಗಾಂಧಿ ಅವರಿಗೆ ನೀವು ಕೂಡ ಶುಭ ಕೋರಿ. ಪೂಜಾ ಗಾಂಧಿ ಅವರ ಮದುವೆಗೆ ಆಪ್ತರು ಮತ್ತು ಸ್ನೇಹಿತರಿಗೆ ಮಾತ್ರ ಬರಲು ಅನುಮತಿ ಇದೆ ಎನ್ನುವ ವಿಷಯ ಕೂಡ ಹೊರಬಿದ್ದಿದೆ. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ....

( video credit : Zee News Kannada )