ಡಿಸೆಂಬರ್ 31ರ ರಾತ್ರಿ ಕುಡಿದು ಟೈಟಾದವರಿಗೆ ಪೊಲೀಸರಿಂದ ಎಂತ ವ್ಯವಸ್ಥೆ ಮಾಡಿದ್ದಾರೆ ನೋಡಿ ; ಶಾಕ್ ಆಗುತ್ತೀರಾ
ಹೌದು ಗೆಳೆಯರೇ , ಹೊಸ ವರ್ಷ ಎಂದರೆ ಎಲ್ಲರಿಗೂ ಏನೋ ಒಂತರ ಖುಷಿ . ಅದರಲ್ಲೂ ಮದ್ಯ ಸೇವಿಸುವರಿಗೆ ಆ ದಿನ ಸ್ವಲ್ಪ ಹೆಚ್ಚಾಗೇ ಕುಡಿಯುತ್ತಾರೆ . ನಂತರ ಅವರು ವೆಹಿಕಲ್ ಡ್ರೈವ್ ಮಾಡಿ ಅಪಘಾತಕ್ಕೆ ಒಳಗಾಗ ಬಾರದು ಎಂದು ಪೊಲೀಸರು ಒಂದು ಒಳ್ಳೆಯ ವ್ಯವಸ್ಥೆ ಮಾಡಿದ್ದಾರೆ . ಅದು ಏನೆಂದು ನೋಡನ ಬನ್ನಿ.
ಸದ್ಯ ಡಿಸೆಂಬರ್ 31ರ ರಾತ್ರಿ ಹೊಸ ವರ್ಷಾಚರಣೆ ಸಂಭ್ರಮದಲ್ಲಿ ಮುಳುಗಿ ತೇಲಾಡುವ ಮಂದಿಯನ್ನು ಸೇಫ್ಟಿಗೆ ಬೆಂಗಳೂರು ಪೊಲೀಸ್ ಇಲಾಖೆ ಹೊಸ ಪ್ರಯೋಗಕ್ಕೆ ಮುಂದಾಗಿದೆ.
ಯುವಕ, ಯುವತಿ ಸೇರಿದಂತೆ ಯಾರೇ ಕುಡಿದು ಟೈಟಾದರೂ ಅವರಿಗೆ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಲಾಗುತ್ತಿದೆ. ಡಿ. 31ರ ರಾತ್ರಿ ಮಾತ್ರ ಈ ಸೇವೆ ಲಭ್ಯವಿರಲಿದೆ. ಆಗ್ನೇಯ ವಿಭಾಗ ಡಿಸಿಪಿ ಸಿಕೆ ಬಾಬಾ ಅವರು ಈ ಮೂಲಕ ಮತ್ತೊಂದು ವಿನೂತನ ಪ್ರಯತ್ನಕ್ಕೆ ಮುಂದಾಗಿದ್ದಾರೆ.
ಕೋರಮಂಗಲ, ಮಡಿವಾಳ, ಎಲೆಕ್ಟ್ರಾನಿಕ್ ಸಿಟಿ, ಹೆಚ್ಎಸ್ಆರ್ ಲೇಔಟ್ ನಲ್ಲಿ ಸಂಪೂರ್ಣ ಭದ್ರತೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಆಗ್ನೇಯ ವಿಭಾಗದಲ್ಲಿ 108 ಪಬ್, ರೆಸ್ಟೋರೆಂಟ್ಗಳಿವೆ, ಪ್ರತಿಯೊಂದು ಪಬ್, ರೆಸ್ಟೋರೆಂಟ್ ಮುಂದೆಯೂ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗುತ್ತಿದೆ. ಎಣ್ಣೆ ಹೊಡೆದು ಫುಲ್ ಟೈಟಾಗಿ ಪ್ರಜ್ಞೆ ತಪ್ಪಿ ಬೀಳುವವರಿಗೆ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಲಾಗುತ್ತಿದೆ.
ಕುಡಿದ ಅಮಲಿನಲ್ಲಿ ಕುಣಿದು ಕುಪ್ಪಳಿಸಿ, ಗಾಯ ಮಾಡಿಕೊಂಡೋರಿಗೆ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಲಾಗುತ್ತಿದೆ. ಅಥವಾ ಆಕಸ್ಮಿಕವಾಗಿ ಸೆಲೆಬ್ರೇಷನ್ ವೇಳೆ ಯಾರಿಗಾದ್ರು ಆರೋಗ್ಯ ತಪ್ಪಿದ್ರೆ ಪೊಲೀಸರಿಂದಲೇ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಲಾಗುತ್ತೆ. ಕೂಡಲೇ ಆ್ಯಂಬುಲೆನ್ಸ್ ನಲ್ಲಿ ಬಿದ್ದ ಕುಡುಕರನ್ನ ಸಾಗಿಸಿ ಆಸ್ಪತ್ರೆಗೆ ದಾಖಲಿಸಲಾಗುತ್ತದೆ.
ಇದು ನಿಜವಾಗಲೂ ಒಳ್ಳೆಯ ಪ್ರಯತ್ನ ಅಲ್ಲವಾ . ನಮೆಲ್ಲರ ಕಡೆಯಿಂದ ಪೊಲೀಸರಿ ಗೆ ಒಂದು ಸಲಾಂ ಹೇಳೋಣ .ನೀವೇನಂತೀರಾ